ನವದೆಹಲಿ: ಮುಂದಿನ ವಾರ ತಜಕಿಸ್ತಾನದ ದುಶಾನ್ಬೆಯಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಸ್ಥೆ (ಎಸ್‌ಸಿಒ) ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಅಜಿತ್ ದೋವಲ್ ಭಾಗವಹಿಸಲಿದ್ದಾರೆ.
ಮುಂದಿನ ವಾರದ ಸಭೆಯಲ್ಲಿ ಪಾಕಿಸ್ತಾನದ ಎನ್‌ಎಸ್‌ಎ ಮೊಯೀದ್ ಯೂಸುಫ್ ಸೇರಿದಂತೆ ಎಸ್‌ಸಿಒ ದೇಶಗಳ ಎನ್‌ಎಸ್‌ಎಗಳ ಅಧಿಕಾರಿಗಳು ಭಾಗಿಯಾಗಲಿದ್ದಾರೆ. ಎಸ್‌ಸಿಒ ಸಭೆಯ ಹೊರತಾಗಿ ಭಾರತೀಯ ಮತ್ತು ಪಾಕಿಸ್ತಾನಿ ಎನ್‌ಎಸ್‌ಎಗಳ ದ್ವಿಪಕ್ಷೀಯ ಸಭೆಯ ಬಗ್ಗೆ ಯಾವುದೇ ದೃಢೀಕರಣ ಲಭ್ಯವಾಗಿಲ್ಲ. ಎಸ್‌ಸಿಒ ಎಂಟು ಸದಸ್ಯ ರಾಷ್ಟ್ರಗಳಾದ ರಷ್ಯಾ, ಚೀನಾ, ಭಾರತ, ಪಾಕಿಸ್ತಾನ, ಕಝಕಿಸ್ತಾನ, ಕಿರ್ಗಿಸ್ತಾನ, ತಜಿಕಿಸ್ತಾನ ಮತ್ತು ಉಜ್ಬೇಕಿಸ್ತಾನವನ್ನು ಹೊಂದಿದೆ.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ, ಅಜಿತ್ ದೋವಲ್ ಅವರು, ಪಾಕಿಸ್ತಾನವು ಸಭೆಯ ಕಾರ್ಯಸೂಚಿಯನ್ನು ಉಲ್ಲಂಘಿದ ಹಿನ್ನೆಲೆ ವರ್ಚುಯಲ್ ಸಭೆಯಿಂದ ಹೊರಬಂದಿದ್ದರು.