ಚಿಕ್ಕಮಗಳೂರು : ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಜಿಲ್ಲೆಯಲ್ಲಿರುವ ಎಲ್ಲಾ ಆಸ್ವತ್ರೆಗಳು ಕೊರೊನಾ ಸೋಂಕಿತರಿಂದ ತುಂಬಿವೆ. ಇತ್ತ ಹಳ್ಳಿಗಳಲ್ಲಿಯೂ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ರೋಗಿಗಳು ಆಸ್ವತ್ರೆಗೆ ಬರಲೂ ಸಾಧ್ಯವಾಗದ ಪರಿಸ್ಥಿರಿ ಇದೆ.
ಈ ಮಧ್ಯೆ ತರೀಕೆರೆ ತಾಲೂಕಿನಲ್ಲಿ ಹೃದಯವಂತ ದಂಪತಿ ಜನ ಸೇವೆಗೆ ಪಣ ತೊಟ್ಟು ನಿಂತಿದ್ದಾರೆ. ಕೊರೊನಾ ರೋಗಿಗಳಿಗೆ ಅನುಕೂಲ ಆಗಲೆಂದು ತಾಲೂಕು ಆಸ್ವತ್ರೆಗೆ ನಾಲ್ಕು ಆ್ಯಂಬುಲೆನ್ಸ್ ಕೊಡುಗೆಯಾಗಿ ನೀಡಿದ್ದಾರೆ. ತರೀಕೆರೆಯ ಸಮಾಜ ಸೇವಕ ಗೋಪಿ ಕೃಷ್ಣ ಹಾಗೂ ಪತ್ನಿ ಅನಸೂಯಾ ಗೋಪಿ ಕೃಷ್ಣ ಈ ಮಾನವೀಯ ಕಾರ್ಯ ಮಾಡಿದವರು.
ಈ ಆ್ಯಂಬುಲೆನ್ಸ್ನಲ್ಲಿ ಎಲ್ಲಾ ರೀತಿಯ ಸೌಲಭ್ಯಗಳು ಇದ್ದು, ದಿನದ 24 ಗಂಟೆ ಕಾರ್ಯ ನಿರ್ವಹಿಸಲಿದೆ. ರೋಗಿಗಳು ಇವರಿಗೆ ಅಥವಾ ಆಸ್ವತ್ರೆಗೆ ಫೋನ್ ಮಾಡಿದರೆ ಉಚಿತವಾಗಿ ಸೇವೆ ಒದಗಿಸುತ್ತಾರೆ. ಶಿವಮೊಗ್ಗ, ಮಣಿಪಾಲಕ್ಕೂ ರೋಗಿಗಳನ್ನು ಉಚಿತವಾಗಿ ಕರೆದುಕೊಂಡು ಹೋಗುವ ಹಾಗೂ ಕರೆದುಕೊಂಡು ಬರುವ ಕೆಲಸ ಮಾಡುತ್ತಿದ್ದಾರೆ.
ವೆಂಟಿಲೇಟರ್, ಆಕ್ಸಿಜನ್ ಸೌಲಭ್ಯವನ್ನು ಈ ಆ್ಯಂಬುಲೆನ್ಸ್ ಹೊಂದಿದ್ದು, ದಿನದ 24 ಗಂಟೆಯೂ ರೋಗಿಗಳಿಗೆ ಅನುಕೂಲ ಆಗಲೆಂದು ಈ ಕೆಲಸ ಮಾಡುತ್ತೇವೆ ಎಂದು ದಂಪತಿ ಹೇಳುತ್ತಾರೆ.