ಹಾವೇರಿ: 2 ನೇ ಹಂತದ ಲೋಕಸಭಾ ಚುನಾವಣೆ ಹಿನ್ನೆಲೆ 112 ವರ್ಷದ ಅಜ್ಜಿಯೊಬ್ಬರು ತಮ್ಮ ಮರಿಮೊಮ್ಮಗನ ಜೊತೆ ಬಂದು ಮತದಾನ ಮಾಡುವ ಮೂಲಕ ರಾಜ್ಯದ ಜನತೆಯ ಮುಂದೆ ಮತದಾನದ ಮಹತ್ವ ತಿಳಿಸಿದ್ದಾರೆ.
ಹಾವೇರಿಯ ವಿದ್ಯಾನಗರದ ಏಳನೇ ವಾರ್ಡಿನ ನಿವಾಸಿಯಾದ 112 ವರ್ಷದ ಶತಾಯುಷಿ ಚನ್ನಮ್ಮ ಮಡಿವಾಳರ ಮರಿಮೊಮ್ಮಗನ ಸಹಾಯದಿಂದ ಬಂದು ಮತದಾನ ಮಾಡಿದರು.
ದೇಶಾದ್ಯಂತ ಚುನಾವಣಾ ನಡೆಯುತ್ತಿದ್ದರು ಬೆಂಗಳೂರಿನಂತ ನಗರದಲ್ಲಿ ವಿದ್ಯಾವಂತರೆನಿಸಿಕೊಂಡವರೆ ಮತದಾನ ತಮ್ಮ ಸಂವಿದಾನಬದ್ಧ ಕರ್ತವ್ಯ ಎಂಬುವುದನ್ನು ಮರೆತಿರುವಾಗ ಸುಮಾರು ನಾಲ್ಕು ತಲೆಮಾರು ಕಂಡಿರುವ ಚನ್ನಮ್ಮ ಮತದಾನ ಮಾಡಿರುವುದು ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ.