ಗಚ್ಚಿಬೌಲಿ(ತೆಲಂಗಾಣ): ಪಬ್ನಿಂದ ವಾಪಸ್ ಆಗುತ್ತಿದ್ದ ವೇಳೆ ಅಪಘಾತಕ್ಕೀಡಾಗಿ ಖ್ಯಾತ ಯೂಟ್ಯೂಬರ್, ಜೂನಿಯರ್ ಆರ್ಟಿಸ್ಟ್ ಗಾಯತ್ರಿ ಸಾವನ್ನಪ್ಪಿದ್ದಾರೆ. ಹೈದರಾಬಾದ್ನ ಗಚ್ಚಿಬೌಲಿ ರಸ್ತೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.

ತನ್ನ ಸ್ನೇಹಿತನಾದ ರೋಹಿತ್ ಜೊತೆಗೆ ಸೈಬರಾಬಾದ್ ವಿಪ್ರೋ ಜಂಕ್ಷನ್ನಿಂದ ಗಚ್ಚಿಬೌಲಿಗೆ ಕಾರಿನಲ್ಲಿ ಬರುತ್ತಿದ್ದ ವೇಳೆ ನಿಯಂತ್ರಣ ಕಳೆದಕೊಂಡಿರುವ ಕಾರು ಫುಟ್ಪಾತ್ನಲ್ಲಿ ಉರುಳಿಬಿದ್ದಿದೆ. ಪರಿಣಾಮ ಗಾಯತ್ರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ರೋಹಿತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಡ್ರಂಕ್ ಆ್ಯಂಡ್ ಡ್ರೈವ್ನಿಂದಾಗಿ ಈ ಅಪಘಾತ ನಡೆದಿದೆ ಎಂದು ತಿಳಿಸಿದ್ದಾರೆ. ಹೋಳಿ ಸಂಭ್ರಮದಲ್ಲಿ ಭಾಗಿಯಾಗಿದ್ದ ರೋಹಿತ್ ಹಾಗೂ ಗಾಯತ್ರಿ ಕಂಠಪೂರ್ತಿ ಮದ್ಯಪಾನ ಮಾಡಿದ್ದರು ಎಂದು ವರದಿಯಾಗಿದೆ.
ಅಪಘಾತದ ವೇಳೆ ಕಾರು 120ಕಿಲೋ ಮೀಟರ್ ವೇಗದಲ್ಲಿ ಚಲಿಸುತ್ತಿತ್ತು ಎನ್ನಲಾಗಿದ್ದು, ಹೆಚ್ಚು ವೇಗದಲ್ಲಿ ಬಂದ ಕಾರಣವೇ ಈ ಅಪಘಾತ ನಡೆದಿದೆ ಎಂದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
