ETV Bharat / bharat

ಆನ್‌ಲೈನ್ ರಮ್ಮಿಗೆ ವ್ಯಸನಿಯಾಗಿದ್ದ ಯುವಕ ಆತ್ಮಹತ್ಯೆ - ವಿದ್ಯಾರ್ಥಿ ಸಂತೋಷ್ ಆತ್ಮಹತ್ಯೆ

ಆನ್‌ಲೈನ್ ರಮ್ಮಿ ಚಟಕ್ಕೆ ಬಿದ್ದ ಯುವಕ ತಮಿಳುನಾಡಿನ ತಿರುಚ್ಚಿ ಬಳಿ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಸಂತೋಷ್
ಸಂತೋಷ್
author img

By

Published : Oct 6, 2022, 9:43 PM IST

ತಿರುಚ್ಚಿ(ತಮಿಳುನಾಡು): ಆನ್‌ಲೈನ್ ರಮ್ಮಿ ಚಟಕ್ಕೆ ಬಿದ್ದ ಯುವಕ ತಿರುಚ್ಚಿ ಬಳಿ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಿರುಚ್ಚಿಯಲ್ಲಿ ನಡೆದಿದೆ.

ಮನಪಾರೈ ಪಕ್ಕದ ಮಲಯಂಡಿಪಟ್ಟಿಯ ರವಿಕುಮಾರ್ ಅವರ ಪುತ್ರ ಸಂತೋಷ್ (22) ಎ ಮನಪಾರೈ ಸಮೀಪದ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ 4ನೇ ವರ್ಷದ ಇಂಜಿನಿಯರಿಂಗ್ ಅಭ್ಯಾಸ ಮಾಡುತ್ತಿದ್ದ. ಕಳೆದ ಆರು ತಿಂಗಳಿಂದ ಆನ್‌ಲೈನ್‌ನಲ್ಲಿ ರಮ್ಮಿ ಆಡುತ್ತಿದ್ದ ಈತ ಮನೆಯವರಿಗೆ ಗೊತ್ತಿಲ್ಲದಂತೆ ಹಣ, ಚಿನ್ನಾಭರಣಗಳನ್ನು ತೆಗೆದುಕೊಂಡು ಹೋಗಿ ರಮ್ಮಿ ಆಡಿದ್ದಾನೆ ಎನ್ನಲಾಗಿದೆ.

ಅಕ್ಟೋಬರ್ 4 ರಂದು ಮನೆಯಲ್ಲಿದ್ದ ಅರ್ಧ ಪೌಂಡ್ ಉಂಗುರ ಕಾಣೆಯಾಗಿರುವುದು ಪೋಷಕರ ಗಮನಕ್ಕೆ ಬಂದಿದೆ. ನಂತರ ಅನುಮಾನಗೊಂಡು ಈ ಬಗ್ಗೆ ವಿಚಾರಿಸಿದಾಗ ವಿಷಯ ಬಾಯ್ಬಿಟ್ಟಿದ್ದಾನೆ. ನಂತರ ಇದರಿಂದ ಬೇಸರಗೊಂಡ ವಿದ್ಯಾರ್ಥಿ ಸಂತೋಷ್ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮೊಬೈಲ್​ನಲ್ಲಿ ಸ್ಟೇಟಸ್ ಹಾಕಿದ್ದಾನೆ.

ನಂತರ ಮನಪಾರೈ ಬಳಿ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅವನ ಶವದ ಬಗ್ಗೆ ಮಾಹಿತಿ ತಿಳಿದು ರೈಲ್ವೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. ನಂತರ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

ಓದಿ: ಕೌಟುಂಬಿಕ ಕಲಹ : ಆತ್ಮಹತ್ಯೆಗೆ ಮುನ್ನ ವಿಡಿಯೋ ಮಾಡಿ ನೇಣು ಬಿಗಿದುಕೊಂಡ ವ್ಯಕ್ತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.