ಧೋಲ್ಪುರ್(ರಾಜಸ್ಥಾನ): ಮೊಬೈಲ್ ಖರೀದಿಸಲು ಕುಟುಂಬಸ್ಥರು 20 ಸಾವಿರ ರೂಪಾಯಿ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಮನನೊಂದು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಾಜಸ್ಥಾನದ ಧೋಲ್ಪುರ್ ಎಂಬಲ್ಲಿ ಈ ಘಟನೆ ನಡೆದಿದೆ.
ಸರ್ಮಥುರಾ ಪೊಲೀಸ್ ಠಾಣಾ ವ್ಯಾಪ್ತಿಯ ಬಿಜೌಲಿ ಗ್ರಾಮದಲ್ಲಿ 18 ವರ್ಷದ ಯುವಕ ಕಂಟ್ರಿ ಮೇಡ್ ಪಿಸ್ತೂಲ್ನಿಂದ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿದ್ದಾನೆ. ಲಭ್ಯವಾಗಿರುವ ಮಾಹಿತಿ ಪ್ರಕಾರ, ಯುವಕ ಸಂಗ್ರಾಮ್ ಭಾರತೀಯ ಸೇನೆ ಸೇರಿಕೊಳ್ಳಲು ತಯಾರಿ ನಡೆಸುತ್ತಿದ್ದನಂತೆ. ಕೆಲವು ತಿಂಗಳ ಕಾಲ ಜೈಪುರದಲ್ಲಿ ತರಬೇತಿ ಪಡೆದುಕೊಂಡು ಮನೆಗೆ ಹಿಂತಿರುಗಿದ್ದ.
ಇದನ್ನೂ ಓದಿ: ಅಯೋಧ್ಯೆಯಿಂದ ಕಣಕ್ಕಿಳಿಯಲಿದ್ದಾರೆ ಯೋಗಿ: ಬಿಜೆಪಿಯಿಂದ 172 ಅಭ್ಯರ್ಥಿಗಳ ಮೊದಲ ಪಟ್ಟಿ ಇಂದು ಪ್ರಕಟ?
ಈ ಸಂದರ್ಭದಲ್ಲಿ ಮೊಬೈಲ್ ಖರೀದಿಸಲು 20 ಸಾವಿರ ರೂ. ನೀಡುವಂತೆ ಮನೆಯಲ್ಲಿ ಕೇಳಿಕೊಂಡಿದ್ದಾನೆ. ಆದರೆ, ಈ ವೇಳೆ ಕುಟುಂಬಸ್ಥರು ನಿರಾಕರಿಸಿದ್ದಾರೆ. ಇದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆಂದು ತಿಳಿದು ಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಮಥುರಾ ಪೊಲೀಸ್ ಠಾಣೆಯ ಪ್ರಭಾರಿ ಅನಿಲ್ ಗೌತಮ್ ಮಾತನಾಡಿ, ಎಫ್ಐಆರ್ ದಾಖಲು ಮಾಡಿಕೊಳ್ಳಲಾಗಿದ್ದು, ತನಿಖೆ ಮುಂದುವರೆಸಲಾಗಿದೆ ಎಂದು ತಿಳಿಸಿದರು.