ETV Bharat / bharat

ನಡುರಸ್ತೆಯಲ್ಲಿ ಬೈಕ್​​ ಸ್ಟಂಟ್ ಮಾಡಲು ಹೋಗಿ ಓರ್ವನಿಗೆ ಗಾಯ; ಸಾರ್ವಜನಿಕರಿಂದ ಧರ್ಮದೇಟು - ಕೇರಳದ ತಿರುವನಂತಪುರಂ

ಇತರೆ ವಾಹನ ಸವಾರರಿಗೆ ತೊಂದರೆ ನೀಡುವ ಮೂಲಕ ನಡುರಸ್ತೆಯಲ್ಲೇ ಬೈಕ್​ ಸ್ಟಂಟ್​ ಮಾಡ್ತಿದ್ದ ಪುಂಡರಿಗೆ ಸಾರ್ವಜನಿಕರು ಧರ್ಮದೇಟು ನೀಡಿ ಬುದ್ದಿ ಕಲಿಸಿದರು.

bike stunt
bike stunt
author img

By

Published : Sep 23, 2021, 6:00 PM IST

ತಿರುವನಂತಪುರಂ(ಕೇರಳ): ರಸ್ತೆಯಲ್ಲಿ ಬೈಕ್​ ಸ್ಟಂಟ್​ ಮಾಡುತ್ತಾ ಇತರೆ ವಾಹನ ಸವಾರರಿಗೆ ತೊಂದರೆ ನೀಡಿರುವ ಜೊತೆಗೆ, ಎರಡು ಬೈಕ್​ಗಳ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿರುವ ಘಟನೆ ಕೇರಳದ ತಿರುವನಂತಪುರಂನಲ್ಲಿ ನಡೆದಿದೆ. ಈ ಘಟನೆಯಲ್ಲಿ ಓರ್ವ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕೇರಳದ ನೆಯ್ಯಾರ್ ಅಣೆಕಟ್ಟು ಜಲಾಶಯದ ಬಳಿ ಕೆಲ ಯುವಕರು ಬೈಕ್​ ಸ್ಟಂಟ್​ ಮಾಡಿ, ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್​ಲೋಡ್​ ಮಾಡುತ್ತಿದ್ದರು. ಈ ವೇಳೆ ಎರಡು ಬೈಕ್​ಗಳ ಮಧ್ಯೆ ಡಿಕ್ಕಿಯಾಗಿ, ಓರ್ವನ ಕಾಲಿಗೆ ಗಂಭೀರ ಗಾಯವಾಗಿದೆ. ಈ ವೇಳೆ ಇಬ್ಬರು ವಾಹನ ಸವಾರರು ಅವರ ಮೇಲೆ ಹಲ್ಲೆ ಮಾಡಿದ್ದಾರೆ.

ನಡುರಸ್ತೆಯಲ್ಲೇ ಬೈಕ್​​ ಸ್ಟಂಟ್

ಇದನ್ನೂ ಓದಿ: ಪ್ರತಿ ಗಂಟೆಗೆ 305 ಕಿಮೀ ವೇಗ.. 3 ಕೋಟಿ ವೆಚ್ಚದ ಲ್ಯಾಂಬೋರ್ಗಿನಿ ಫ್ಯಾನ್ಸಿ ನಂಬರ್‌ಗೆ ಜೂ.NTR ಖರ್ಚು ಮಾಡಿದ್ದೆಷ್ಟು?!

ಪ್ರತಿದಿನ ಅನೇಕ ಬೈಕ್​​ ಸವಾರರು ಈ ಸ್ಥಳಕ್ಕೆ ಬಂದು ಬೈಕ್​ ಸ್ಟಂಟ್ ಮಾಡ್ತಿದ್ದು, ಅವುಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿದ್ದಾರೆ. ಈ ರಸ್ತೆ ಮಾರ್ಗದಲ್ಲಿ ಬೈಕ್​ ಸ್ಟಂಟ್ ಮಾಡುವುದರಿಂದ ಅನೇಕ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ಗೋಳು ಹೇಳಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅನೇಕ ಪ್ರಕರಣ ದಾಖಲಾಗಿದ್ದು, ಪೊಲೀಸರು ಇಲ್ಲಿಯವರೆಗೆ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.