2022ರ ಈ ವರ್ಷವು ವೃಷಭ ರಾಶಿಯವರಿಗೆ ಶುಭ ಸುದ್ದಿಯನ್ನು ತಂದುಕೊಡಲಿದೆ. ಈ ವರ್ಷದಲ್ಲಿ ನಿಮ್ಮ ಅದೃಷ್ಟವು ಚೆನ್ನಾಗಿರಲಿದೆ ಹಾಗೂ ಕಳೆದ ವರ್ಷ ನಿಮ್ಮ ಬದುಕಿಗೆ ದೊರೆತಿರುವ ಆವೇಗವು ಈ ವರ್ಷದಲ್ಲೂ ಮುಂದುವರಿಯಲಿದೆ. ಹೀಗೆ ನೀವು ಬದುಕಿನಲ್ಲಿ ಪ್ರಗತಿ ಸಾಧಿಸಲಿದ್ದೀರಿ.
ನೀವು ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರೆ ವ್ಯವಹಾರವು ನಿಧಾನಗತಿಯಲ್ಲಿ ಮುಂದುವರಿಯಲಿದ್ದು ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ನಿಮ್ಮ ಅನೇಕ ಇಚ್ಛೆಗಳು ಈ ವರ್ಷದಲ್ಲಿ ಕೈಗೂಡಲಿವೆ. ಈ ವರ್ಷದಲ್ಲಿ ನೀವು ಬಹು ಕಾಲದಿಂದ ನಿರೀಕ್ಷಿಸುತ್ತಿದ್ದ ಪ್ರವಾಸಕ್ಕೆ ಹೋಗಲಿದ್ದೀರಿ. ವಿದೇಶಕ್ಕೆ ಹೋಗಲು ಇಚ್ಛಿಸುವವರು ವರ್ಷದ ಮಧ್ಯ ಭಾಗದಲ್ಲಿ ಶುಭ ಸುದ್ದಿ ಪಡೆಯಲಿದ್ದಾರೆ. ಹೀಗಾಗಿ ಪ್ರಯತ್ನವನ್ನು ಬಿಡಬೇಡಿ. ನಿಮ್ಮ ಕೌಟುಂಬಿಕ ಬದುಕು ಸಾಮಾನ್ಯ ರೀತಿಯಲ್ಲಿ ಮುಂದುವರಿಯಲಿದೆ.
ವರ್ಷದ ಮಧ್ಯ ಭಾಗದಲ್ಲಿ, ಕುಟುಂಬದ ಸದಸ್ಯರೊಬ್ಬರ ಆರೋಗ್ಯವು ಕೆಡುವುದರಿಂದ ನಿಮ್ಮ ಚಿಂತೆಗಳು ಹೆಚ್ಚಲಿವೆ. ಆದರೆ ಮೆಲ್ಲನೆ ಪರಿಸ್ಥಿತಿಯು ಸುಧಾರಿಸಲಿದ್ದು, ಅವರ ಆರೋಗ್ಯ ಸಹಜ ಸ್ಥಿತಿಗೆ ಬರಲಿದೆ. ಆದರೂ ನೀವು ಕಾರ್ಯಸ್ಥಳದಲ್ಲಿ ಅತ್ಯಂತ ತಾಳ್ಮೆಯಿಂದ ವರ್ತಿಸಬೇಕು. ಏಪ್ರಿಲ್ ನಂತರ ಶನಿಯ ಸಂಕ್ರಮಣ ಆಗುವುದರಿಂದ ನೀವು ಹೆಚ್ಚಿನ ಪ್ರಯತ್ನ ಪಡಬೇಕಾಗುತ್ತದೆ. ಆದರೂ, ನಿಮ್ಮ ಜವಾಬ್ದಾರಿಯನ್ನು ನೀವು ಅರಿತುಕೊಳ್ಳಲಿದ್ದೀರಿ ಹಾಗೂ ನಿಮ್ಮ ವ್ಯಕ್ತಿತ್ವದಲ್ಲಿ ಸುಧಾರಣೆ ಉಂಟಾಗಲಿದೆ.
ಈ ವರ್ಷದಲ್ಲಿ ನಿಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ. ಹೀಗಾಗ ನಿಮ್ಮ ಆಹಾರಕ್ರಮದ ಕುರಿತು ನೀವು ಎಚ್ಚರಿಕೆಯಿಂದ ಇರಬೇಕು. ನೀವು ಏನಾದರೂ ಹೊಸತನ್ನು ಕಲಿಯಲಿದ್ದೀರಿ ಹಾಗೂ ಈ ವರ್ಷದಲ್ಲಿ ನಿಮ್ಮ ವ್ಯಕ್ತಿತ್ವವನ್ನು ಸುಧಾರಿಸಲು ನಿಮಗೆ ಸಾಧ್ಯವಾಗಲಿದೆ. ನಿಮ್ಮ ವರ್ತನೆಯಲ್ಲಿ ಒಂದಷ್ಟು ಬದಲಾವಣೆಯಾಗಲಿದೆ ಎಂದು ನಿಮ್ಮ ರಾಶಿ ಚಕ್ರದಲ್ಲಿರುವ ನಿಮ್ಮ ಗ್ರಹಗಳ ಸ್ಥಾನವು ಸೂಚಿಸುತ್ತಿದೆ. ನಿಮ್ಮ ರಾಶಿ ಚಕ್ರದಿಂದ ರಾಹುವಿನ ನಿರ್ಗಮನವು ನಿಮಗೆ ಲಾಭವನ್ನು ತಂದು ಕೊಡಲಿದೆ.
ಕಳೆದ ವರ್ಷ ನಿಮಗೆ ಎದುರಾದ ಮಾನಸಿಕ ಸಮಸ್ಯೆಗಳು ಮೆಲ್ಲನೆ ದೂರವಾಗಲಿವೆ. ಆದರೂ ಅತಿಯಾದ ಆತ್ಮವಿಶ್ವಾಸ ತೋರಿಸಬೇಡಿ. ನಿಮ್ಮ ಸಂಬಂಧವು ಸುದೃಢವಾಗಿರಲಿದೆ ಹಾಗೂ ವೃತ್ತಿ ಜೀವನದಲ್ಲಿಯೂ ನೀವು ಯಶಸ್ಸು ಗಳಿಸಲಿದ್ದೀರಿ. ಮೇ ನಂತರ ನಿಮ್ಮ ಕಚೇರಿಯಲ್ಲಿ ನಿಮಗೆ ಸಾಕಷ್ಟು ಗೌರವ ದೊರೆಯಲಿದೆ ಹಾಗೂ ನಿಮ್ಮ ಅನುಕೂಲತೆಯೂ ಹೆಚ್ಚಲಿದೆ. ನೀವು ಈ ವರ್ಷದಲ್ಲಿ ಕೈಗೊಳ್ಳುವ ಪ್ರಯಾಣವು ನಿಮ್ಮ ಆತ್ಮಸ್ಥೈರ್ಯವನ್ನು ವೃದ್ಧಿಸಲಿದೆ ಹಾಗೂ ನೀವು ಅನೇಕ ಹೊಸ ಜನರ ಸಂಪರ್ಕಕ್ಕೆ ಬರಲಿದ್ದೀರಿ.
ಇದನ್ನೂ ಓದಿ: Horoscope 2022: ಈ ರಾಶಿಯವರಿಗೆ ಹೊಸ ವರ್ಷ ತಂದುಕೊಡಲಿದೆ ಬಹುದೊಡ್ಡ ಬದಲಾವಣೆ