ತೂತುಕುಡಿ(ತಮಿಳುನಾಡು): ಕಳೆದ ವರ್ಷ ಕುರ್ಟಾಲಂ ಜಲಪಾತದಲ್ಲಿ ಬಿದ್ದಿದ್ದ ಹೆಣ್ಣು ಮಗುವನ್ನು ರಕ್ಷಿಸಿದ್ದ ವಿಜಯ ಕುಮಾರ್ ಎಂಬ ಯುವಕನಿಗೆ ತೂತುಕುಡಿ ಜಿಲ್ಲಾಧಿಕಾರಿಗಳ ಕಾರು ಚಾಲಕನಾಗಿ ತಾತ್ಕಾಲಿಕವಾಗಿ ಕೆಲಸ ನೀಡಲಾಗಿದೆ.
ತೂತುಕುಡಿ ಸಮೀಪದ ವಿಲತ್ತಿಕುಲಂ ನಿವಾಸಿಯಾದ ವಿಜಯ ಕುಮಾರ್ (24), ಆ ಪ್ರದೇಶದಲ್ಲಿ ಟ್ಯಾಕ್ಸಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಕಳೆದ ವರ್ಷ ಡಿಸೆಂಬರ್ನಲ್ಲಿ ಕುರ್ಟಾಲಂ ಜಲಪಾತಕ್ಕೆ ಹೋಗಿದ್ದ. ಆ ವೇಳೆ ಅಲ್ಲಿಗೆ ಕೇರಳ ರಾಜ್ಯದ ಪಾಲಕ್ಕಾಡ್ನ ಹರಿಣಿ ಎಂಬ ಮಗು ತನ್ನ ಕುಟುಂಬ ಸಮೇತ ಪ್ರವಾಸ ಬಂದಿದ್ದರು. ಕುಟುಂಬದ ಸದಸ್ಯರೊಂದಿಗೆ ಜಲಪಾತದಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಮಗು ನೀರಿಗೆ ಬಿದ್ದು, ಬಂಡೆಗಳ ನಡುವೆ ಸಿಲುಕಿಕೊಂಡಿದ್ದರು.
ನೀರಿಗೆ ಬಿದ್ದು, ಬಲವಾದ ಪ್ರವಾಹದಲ್ಲಿ ಒದ್ದಾಡುತ್ತಿದ್ದ ಮಗುವನ್ನು ನೋಡಿದ ವಿಜಯ ಕುಮಾರ್ ತಕ್ಷಣ ನೀರಿಗೆ ಹಾರಿ, ಮಗುವನ್ನು ಎತ್ತಿಕೊಂಡು ಕೆಲವೇ ನಿಮಿಷಗಳಲ್ಲಿ ಸುರಕ್ಷಿತ ಸ್ಥಳಕ್ಕೆ ಕರೆತಂದಿದ್ದ. ವಿಜಯ ಕುಮಾರ್ ಅವರ ಈ ಸಾಹಸಕ್ಕೆ ಸ್ಥಳದಲ್ಲಿದ್ದವರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅವರು ತೂತುಕುಡಿ ಜಿಲ್ಲೆಯವರಾಗಿರುವುದರಿಂದ ಜಿಲ್ಲಾಧಿಕಾರಿ ಸೆಂಥಿಲ್ ರಾಜ್ ವಿಜಯ ಕುಮಾರ್ ಅವರನ್ನು ಸನ್ಮಾನಿಸಿ, ಪ್ರಶಂಸಾ ಪತ್ರ ನೀಡಿ ಗೌರವಿಸಿದ್ದರು. ಫೆ. 23 ರಂದು ವಿಜಯ ಕುಮಾರ್ ಅವರಿಗೆ ತೂತುಕುಡಿ ಜಿಲ್ಲಾಧಿಕಾರಿ ಸೆಂಥಿಲ್ ರಾಜ್ ಅವರಿಗೆ ಕಾರು ಚಾಲಕನಾಗಿ ತಾತ್ಕಾಲಿಕವಾಗಿ ಕೆಲಸ ನೀಡಲಾಗಿದೆ.
ಇದನ್ನೂ ಓದಿ: Video ನೋಡಿ... ಮುಳುಗುತ್ತಿದ್ದ ಬೋಟ್ನಿಂದ ನಾಲ್ವರು ಮೀನುಗಾರರ ರಕ್ಷಣೆ