ಮಹಾರಾಜಗಂಜ್ (ಉತ್ತರಪ್ರದೇಶ) : ಕೊಲ್ಹುಯಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿಚಿತ್ರ ಪ್ರಕರಣ ಒಂದು ಜರುಗಿದೆ. ವಿವಾಹವಾಗಿ ಒಂದು ತಿಂಗಳು ಕಳೆಯುವುದರೊಳಗೆ ಯುವತಿ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಾರೆ.
ಪತ್ನಿಯ ಆರೋಗ್ಯ ಹಠಾತ್ ಹದಗೆಟ್ಟಿದ್ದರಿಂದ ಅಲ್ಟ್ರಾಸೌಂಡ್ ಮಾಡಿಸಿದಾಗ ಆ ವರದಿಯಲ್ಲಿ ಪತಿಗೆ ಈ ವಿಷಯ ತಿಳಿದು ಬಂದಿದೆ. ಈ ಬಗ್ಗೆ ಪತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಯುವತಿ ಹಾಗೂ ಆಕೆಯ ಪೋಷಕರು ನನಗೆ ವಂಚಿಸಿ ವಿವಾಹ ಮಾಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ ಪತಿ.
ತನ್ನ ಮದುವೆ ಆಗಿಯೇ ಒಂದು ತಿಂಗಳಾಗಿದೆ, ಅಂತಹುದರಲ್ಲಿ ಪತ್ನಿ ನಾಲ್ಕು ತಿಂಗಳ ಗರ್ಭಿಣಿ ಎಂದರೆ ಹೇಗೆ ಎಂದು ಯುವಕ ಪ್ರಶ್ನಿಸಿದ್ದಾನೆ. ಘಟನೆ ಹಿನ್ನೆಲೆ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ಹೊಟ್ಟೆಪಾಡಿಗೆ ಸಾಬೂನು ವ್ಯಾಪಾರ: ರಜಿನಿಕಾಂತ್ ಎದುರು ಹಿರೋಯಿನ್ ಆಗಿದ್ದ ನಟಿ ಇವರೇನಾ?