ETV Bharat / bharat

ಹೈದರಾಬಾದ್‌ನಲ್ಲಿ ಯೋಗ ಉತ್ಸವ: ಕೇಂದ್ರ ಸಚಿವರು, ರಾಜ್ಯಪಾಲೆ, ಕ್ರೀಡೆ, ಸಿನಿಮಾ ಗಣ್ಯರು ಭಾಗಿ

ಇಂದು ನಡೆದ ಯೋಗಾಭ್ಯಾಸದಲ್ಲಿ ಕೇಂದ್ರ ಸಚಿವರೊಂದಿಗೆ, ತೆಲಂಗಾಣ ರಾಜ್ಯಪಾಲೆ, ಬಿಜೆಪಿ ಶಾಸಕರು, ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್‌, ಕ್ರಿಕೆಟರ್ ಮಿಥಾಲಿ ರಾಜ್, ಟಾಲಿವುಡ್ ನಟಿ ಲಾವಣ್ಯ ತ್ರಿಪಾಠಿ, ಚಿತ್ರ ಕಲಾವಿದರ ಸಂಘದ ಅಧ್ಯಕ್ಷ ಮಂಚು ವಿಷ್ಣು ಪಾಲ್ಗೊಂಡಿದ್ದರು. ವೇದಿಕೆಯಲ್ಲಿ ಕೇಂದ್ರ ಸಚಿವರ ಭಾಷಣದ ನಂತರ ಎಲ್ಲ ಗಣ್ಯರು ಕೆಲ ಹೊತ್ತು ಯೋಗಾಭ್ಯಾಸ ಮಾಡಿದರು.

YOGA UTSAV 2022 AT LB STADIUM IN HYDERABAD
ಹೈದರಾಬಾದ್‌ನಲ್ಲಿ ಯೋಗ ಉತ್ಸವ
author img

By

Published : May 27, 2022, 12:48 PM IST

ಹೈದರಾಬಾದ್: ವಿಶ್ವಾದ್ಯಂತ ಯೋಗವನ್ನು ಜನಪ್ರಿಯಗೊಳಿಸಿದ ಹಿರಿಮೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಬೇಕು ಎಂದು ಕೇಂದ್ರ ಸಚಿವ ಕಿಶನ್ ರೆಡ್ಡಿ ಹೇಳಿದರು. ಹೈದರಾಬಾದ್‌ನ ಎಲ್‌.ಬಿ.ಸ್ಟೇಡಿಯಂನಲ್ಲಿ ಇಂದು ನಡೆದ ಯೋಗ ಉತ್ಸವ 2022 ರಲ್ಲಿ ತೆಲಂಗಾಣ ರಾಜ್ಯಪಾಲೆ ತಮಿಳ್‌ಸಾಯಿ, ಕೇಂದ್ರ ಸಚಿವ ಸರ್ಬಾನಂದ ಸೋನಾವಾಲ್ ಸೇರಿದಂತೆ ಗಣ್ಯಾತಿಗಣ್ಯರು ಭಾಗಿಯಾಗಿದ್ದರು.

YOGA UTSAV 2022 AT LB STADIUM IN HYDERABAD

ಆಜಾದಿ ಕ ಅಮೃತ್‌ ಮಹೋತ್ಸವದ ಸುಸಂದರ್ಭದಲ್ಲಿ ಜೂನ್‌ 21ರಂದು ವಿಶ್ವ ಯೋಗ ದಿನ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇದಕ್ಕೂ 100 ದಿನಗಳ ಮುನ್ನವೇ ವಿವಿಧ ಪ್ರದೇಶಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ದೇಶದ ವಿವಿಧ 75 ಪ್ರದೇಶಗಳಲ್ಲಿ ಯೋಗ ಹಬ್ಬಗಳನ್ನು ಏರ್ಪಾಡು ಮಾಡಲಾಗಿದೆ. ಆಸ್ಟ್ರೇಲಿಯಾ, ಅಮೆರಿಕದಲ್ಲೂ ಯೋಗ ಕಾರ್ಯಕ್ರಮಗಳಿವೆ.

ಹೈದರಾಬಾದ್‌ನ ಎಲ್‌.ಬಿ.ಸ್ಟೇಡಿಯಂನಲ್ಲೂ 25 ದಿನಗಳಿಗೂ ಮುಂಚಿತವಾಗಿ ಇಂದು ಈ ಕಾರ್ಯಕ್ರಮ ನಡೆಯುತ್ತಿದೆ. ಜೂನ್ 21ರಂದು ಹೈದರಾಬಾದ್‌ ಟ್ಯಾಂಕ್‌ ಬಂಡ್ ರಸ್ತೆಯಲ್ಲಿ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ನಡೆಯಲಿದೆ. ಅಂದು ನಡೆಯುವ ಕಾರ್ಯಕ್ರಮಕ್ಕೆ ಹೈದರಾಬಾದ್ ನಿವಾಸಿಗಳು, ಎನ್‌ಜಿಒಗಳು, ಉದ್ಯೋಗಿಗಳು ಮತ್ತು ಎಲ್ಲ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಜನರು ಪಾಲ್ಗೊಳ್ಳಬೇಕು ಎಂದು ಸಚಿವ ಕಿಶನ್‌ ರೆಡ್ಡಿ ಮನವಿ ಮಾಡಿದರು.

ಇಂದು ನಡೆದ ಯೋಗಾಭ್ಯಾಸದಲ್ಲಿ ಕೇಂದ್ರ ಸಚಿವರೊದಿಗೆ, ರಾಜ್ಯಪಾಲರು, ಬಿಜೆಪಿ ಶಾಸಕರು, ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್‌, ಕ್ರಿಕೆಟರ್ ಮಿಥಾಲಿ ರಾಜ್, ಟಾಲಿವುಡ್ ನಟಿ ಲಾವಣ್ಯ ತ್ರಿಪಾಠಿ, ಚಿತ್ರ ಕಲಾವಿದರ ಸಂಘಟದ ಅಧ್ಯಕ್ಷ ಮಂಚು ವಿಷ್ಣು ಪಾಲ್ಗೊಂಡಿದ್ದರು. ವೇದಿಕೆಯಲ್ಲಿ ಕೇಂದ್ರ ಸಚಿವರ ಭಾಷಣದ ನಂತರ ಎಲ್ಲ ಗಣ್ಯರು ಕೆಲ ಹೊತ್ತು ಯೋಗಾಭ್ಯಾಸ ಮಾಡಿದರು.

ಯೋಗದಿಂದ ದೈಹಿಕ, ಮಾನಸಿಕ ಆರೋಗ್ಯ ವೃದ್ಧಿಯಂತಹ ಹಲವು ಪ್ರಯೋಜನಗಳಿವೆ. ಪ್ರತಿಯೊಬ್ಬರೂ ಯೋಗವನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಯೋಗ ಉತ್ತಮ ಆರೋಗ್ಯದ ಜೊತೆಗೆ ಮಾನಸಿಕ ಸಂತೋಷವನ್ನು ಒದಗಿಸುತ್ತದೆ ಎಂದು ಕೇಂದ್ರ ಸಚಿವರು ಮತ್ತು ರಾಜ್ಯಪಾಲೆ ತಮ್ಮ ಭಾಷಣದಲ್ಲಿ ಒತ್ತಿ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.