ETV Bharat / bharat

ಅಚ್ಚರಿಯ ಮಾಹಿತಿ! ಜುಲೈ 10ರಂದೇ ಪ್ರಧಾನಿ ಮೋದಿಗೆ ರಾಜೀನಾಮೆ ಪತ್ರ ನೀಡಿದ್ರಂತೆ ಬಿಎಸ್​ವೈ

ಬಿ.ಎಸ್​ ಯಡಿಯೂರಪ್ಪ ಕಳೆದ ಜುಲೈ 10ರಂದೇ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಎಂಬ ಅಚ್ಚರಿಯ ಮಾಹಿತಿ ಇದೀಗ ಹೊರಬಿದ್ದಿದೆ.

Yediyurappa pm
Yediyurappa pm
author img

By

Published : Jul 27, 2021, 8:39 PM IST

ನವದೆಹಲಿ: ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್​ ಯಡಿಯೂರಪ್ಪ ನಿನ್ನೆ ರಾಜೀನಾಮೆ ನೀಡಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಇದೀಗ ಲಭ್ಯವಾಗಿರುವ ಮಹತ್ವದ ಸುದ್ದಿವೊಂದು ಹೊರಬಿದ್ದಿದ್ದು, ಆ ಪ್ರಕಾರ ಬಿಎಸ್​ವೈ ತಮ್ಮ ಸಿಎಂ ಸ್ಥಾನಕ್ಕೆ ಕಳೆದ ಜುಲೈ 10ರಂದೇ ರಾಜೀನಾಮೆ ನೀಡಿದ್ದರು ಎನ್ನಲಾಗಿದೆ. ಬಿಜೆಪಿಯ ಹಿರಿಯ ಮುಖಂಡರೊಬ್ಬರು ಇದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ ಎನ್ನಲಾಗಿದೆ.

ಜುಲೈ 10ರಂದೇ ಮುಖ್ಯಮಂತ್ರಿ ಬಿಎಸ್​ವೈ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಕೆ ಮಾಡಿದ್ದರು ಎನ್ನಲಾಗಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಆರು ದಿನಗಳ ಬಳಿಕ ಬಿಎಸ್​ವೈ ದೆಹಲಿಗೆ ತೆರಳಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಇತರೆ ಮುಖಂಡರನ್ನು ಭೇಟಿ ಮಾಡಿದ್ದರು. ಈ ವೇಳೆ ತಮ್ಮ ಅನಾರೋಗ್ಯದ ಕಾರಣ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದ್ದರು ಎನ್ನಲಾಗಿದೆ. ಆದರೆ ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಬಿಎಸ್​ವೈ ತಾವು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.

ಇದನ್ನೂ ಓದಿ: ರಾಜ್ಯದ ನೂತನ ಸಿಎಂ ಆಗಿ ಬಸವರಾಜ ಬೊಮ್ಮಾಯಿ ಆಯ್ಕೆ

ರಾಜೀನಾಮೆ ನೀಡಿದ ಬಳಿಕ ಕೂಡ ಬಿಎಸ್​ವೈ ಪ್ರಮುಖವಾಗಿ ಲಿಂಗಾಯತ ಮಠಾಧೀಶರು, ವಿವಿಧ ಧಾರ್ಮಿಕ ಮುಖ್ಯಸ್ಥರನ್ನ ಭೇಟಿ ಮಾಡಿ ಬರುವ ದಿನಗಳಲ್ಲಿ ತಮ್ಮ ಬೆಂಬಲ ಬಿಜೆಪಿಗೆ ನೀಡುವಂತೆ ಕೇಳಿಕೊಂಡಿದ್ದರೂ ಎನ್ನಲಾಗಿದೆ. ಬಿಜೆಪಿಯಲ್ಲಿ 75 ವರ್ಷ ಮೆಲ್ಪಟ್ಟವರಿಗೆ ಯಾವುದೇ ಅಧಿಕಾರ ನೀಡಲ್ಲ. ಆದರೆ ಬಿಎಸ್​ವೈ ಈಗಾಗಲೇ 78 ವರ್ಷ ದಾಟ್ಟಿದ್ದು, ಆದರೂ ಕೂಡ ಎರಡು ವರ್ಷಗಳ ಕಾಲ ಸಿಎಂ ಆಗಿ ಸೇವೆ ಸಲ್ಲಿಸಿದ್ದಾರೆ. ಎರಡು ವರ್ಷಗಳ ಸಾಧನಾ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ತಾವು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.