ಹೈದರಾಬಾದ್: ಮಧ್ಯಪ್ರದೇಶದಲ್ಲಿ ಮಹಿಳಾ ಸ್ನೇಹಿ ಯೋಜನೆಗಳ ಹಿನ್ನೆಲೆಯಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರ ಅಧಿಕಾರ ಉಳಿಸಿಕೊಂಡ ವರ್ಷವೇ, ಹಿಂದಿ ರಾಜ್ಯದಲ್ಲಿ ಮಕ್ಕಳ ವಿರುದ್ಧ ಅತಿ ಹೆಚ್ಚು ಅಪರಾಧ ಪ್ರಕರಣಗಳ ದಾಖಲಾಗಿದ್ದವು. ಉಜ್ಜಯಿನಿಯಲ್ಲಿ ಬಾಲಕಿಯೊಬ್ಬಳು ಅಮಾನುಷವಾಗಿ ಅತ್ಯಾಚಾರಕ್ಕೊಳಗಾದ ಭಯಾನಕ ಘಟನೆ ಸೆಪ್ಟೆಂಬರ್ 25ರಂದು ನಡೆದಿತ್ತು. 12 ವರ್ಷದ ದಲಿತ ಬಾಲಕಿ ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯ ಆಶ್ರಮದ ಹೊರಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಗಾಯಗೊಂಡ ಬಾಲಕಿಗೆ ರಕ್ತಸ್ರಾವವಾಗುತ್ತಿತ್ತು, ಅದರ ಮಧ್ಯೆಯೇ ರಸ್ತೆಯಲ್ಲಿ ಸಾಗುತ್ತಿರುವ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು.
ಸ್ಥಳೀಯರ ಅಸಡ್ಡೆ ನಡುವೆಯೂ ಬಾಲಕಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿತ್ತು. ದಂಡಿ ಆಶ್ರಮದ ಆಡಳಿತಾಧಿಕಾರಿ ರಾಹುಲ್ ಶರ್ಮಾ ಎಂಬ ಅರ್ಚಕ ಅವಳನ್ನು ಸ್ಥಳೀಯ ಆಸ್ಪತ್ರೆಗೆ ಸ್ಥಳಾಂತರಿಸಲು ಸಹಾಯ ಮಾಡಿದ್ದರು. ಮಧ್ಯಪ್ರದೇಶ ಪೊಲೀಸ್ ವಿಶೇಷ ತನಿಖಾ ತಂಡವು ಭಾರತೀಯ ದಂಡ ಸಂಹಿತೆಯ (IPC) 376 ಮತ್ತು POCSO ಕಾಯಿದೆಯ ಸಂಬಂಧಿತ ಸೆಕ್ಷನ್‌ಗಳು ಸೇರಿದಂತೆ ಕಾನೂನಿನ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಮಹಾಕಾಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು.
ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿ ಆಟೋ ಚಾಲಕನನ್ನು ಮಹಾಕಾಲ್ ದೇವಸ್ಥಾನದ ಬಳಿ ಉಜ್ಜಯಿನಿ ಪೊಲೀಸರು ಬಂಧಿಸಿದ್ದರು. ಈ ಘಟನೆ ನಡೆಯುವ ಒಂದು ದಿನ ಮೊದಲು, ಬಾಲಕಿ ತನ್ನ ಅಜ್ಜನೊಂದಿಗೆ ಜಗಳವಾಡಿ ಸತ್ನಾ ಜಿಲ್ಲೆಯಲ್ಲಿರುವ ಮನೆ ಬಿಟ್ಟು ರೈಲು ಹತ್ತಿ ಉಜ್ಜಯಿನಿಗೆ ಓಡಿ ಬಂದಿದ್ದಳು. ಆರೋಪಿ ಆಟೋ ಚಾಲಕ ಉಜ್ಜಯಿನಿ ರೈಲು ನಿಲ್ದಾಣದ ಹೊರಗೆ ಬಾಲಕಿಯನ್ನು ಕಂಡು ಸಹಾಯ ಮಾಡುವ ನೆಪದಲ್ಲಿ, ಆಕೆಯ ಮೇಲೆ ಅತ್ಯಾಚಾರ ಮಾಡಿದ್ದ
ಸಹಾಯಕ್ಕಾಗಿ ಬಾಲಕಿಯಿಂದ ಎಂಟು ಕಿಮೀ ಕಾಲ್ನಡಿಗೆ: ಉಜ್ಜಯಿನಿಯಲ್ಲಿ ಬಾಲಕಿಯ ಸ್ಥಿತಿಯ ಬಗ್ಗೆ ಸ್ಥಳೀಯರು ನಿರಾಸಕ್ತಿ ತೋರಿಸಿದ್ದರು. ಪೊಲೀಸರ ಪ್ರಕಾರ, ಉಜ್ಜಯಿನಿಯ ವಿವಿಧ ಪ್ರದೇಶಗಳಲ್ಲಿನ ಸಿಸಿಟಿವಿ ದೃಶ್ಯಾವಳಿಗಳು, ಬಾಲಕಿ ರಕ್ತಸ್ರಾವದ ಸ್ಥಿತಿಯಲ್ಲಿಯೇ ನಡೆದುಕೊಂಡು, ಸಹಾಯ ಕೋರಿ ಎಂಟು ಕಿಲೋಮೀಟರ್ ಕಾಲ್ನಡಿಗೆಯಲ್ಲಿ ಪ್ರಯಾಣ ಮಾಡಿದ್ದಳು ಆದರೆ, ಯಾವುದೇ ಪ್ರಯೋಜನವಾಗಿರಲಿಲ್ಲ. ಆದರೆ, ಇಬ್ಬರೂ ತಮಗೆ ಹುಡುಗಿಯ ಭಾಷೆ ಅರ್ಥವಾಗುತ್ತಿಲ್ಲ ಎಂದು ಸಮರ್ಥಿಸಿಕೊಂಡಿದ್ದರು.
ಜಾತಿ ಆಧಾರಿತ ತಾರತಮ್ಯ: ಬಾಲಕಿಯ ಮೇಲಿನ ಭೀಕರ ಲೈಂಗಿಕ ದೌರ್ಜನ್ಯವು ಮಧ್ಯಪ್ರದೇಶದಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ಎತ್ತಿ ತೋರಿಸಿತ್ತು. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ)ಯ ಇತ್ತೀಚಿನ ವಾರ್ಷಿಕ ವರದಿಯು ರಾಜ್ಯವು ಮಕ್ಕಳ ಮೇಲಿನ ಅಪರಾಧದ ಗರಿಷ್ಠ ಸಂಖ್ಯೆಯ ಪ್ರಕರಣಗಳನ್ನು ದಾಖಲಾಗಿದ್ದವು ಎಂದು ಬಹಿರಂಗಪಡಿಸಿತ್ತು. ಎನ್‌ಸಿಆರ್‌ಬಿ ವರದಿಯ ಪ್ರಕಾರ, ಮಧ್ಯಪ್ರದೇಶವು 2022ರಲ್ಲಿ ಮಕ್ಕಳ ವಿರುದ್ಧದ 20,415 ಅಪರಾಧ ಪ್ರಕರಣಗಳನ್ನು ದಾಖಲಾಗಿದ್ದವು. ಮಧ್ಯಪ್ರದೇಶದಲ್ಲಿ ದಲಿತರ ವಿರುದ್ಧದ ಅಪರಾಧವು ಡೇಟಾ ಪ್ರಕಾರ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿದೆ ಎಂಬುದು ಬಯಲಾಗಿತ್ತು.
ರಾಜಕೀಯ ಲೇಪ: ಲೈಂಗಿಕ ದೌರ್ಜನ್ಯದ ಆಘಾತಕಾರಿ ಪ್ರಕರಣ ರಾಜಕೀಯ ಗದ್ದಲಕ್ಕೆ ಕಾರಣವಾಗಿದ್ದು, ರಾಜ್ಯ ಮತ್ತು ಕೇಂದ್ರದಲ್ಲಿ ಆಡಳಿತಾರೂಢ ಬಿಜೆಪಿ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳಾ ಮೀಸಲಾತಿಯ ಕನಸನ್ನು ತೋರಿಸಿ ಚಪ್ಪಾಳೆ ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದರು. ಜೊತೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಈ ಭೀಕರ ಅಪರಾಧವನ್ನು ಭಾರತ ಮಾತೆಯ ಆತ್ಮದ ಮೇಲಿನ ಹಲ್ಲೆ ಎಂದು ಖಂಡಿಸಿದ್ದರು.
ನವೆಂಬರ್ 17ರಂದು ನಡೆದ ಅಸೆಂಬ್ಲಿ ಚುನಾವಣೆಯಲ್ಲಿ ಭೀಕರವಾದ ಉಜ್ಜಯಿನಿ ಅತ್ಯಾಚಾರ ಪ್ರಕರಣವು ಬಿಜೆಪಿಯ ಭವಿಷ್ಯದ ಯಾವುದೇ ಪರಿಣಾಮ ಬೀರಲಿಲ್ಲ. ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಪ್ರಮುಖ ನಾಯಕತ್ವದ ಹಿನ್ನೆಲೆಯಲ್ಲಿ ಬಿಜೆಪಿ ಅಧಿಕಾರವನ್ನು ಉಳಿಸಿಕೊಂಡಿತ್ತು. ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 230 ಸ್ಥಾನಗಳಲ್ಲಿ 163 ಸ್ಥಾನಗಳನ್ನು ಗೆದ್ದು ಭರ್ಜರಿ ಜಯ ದಾಖಲಿಸಿತ್ತು. ಉಜ್ಜಯಿನಿ ಅತ್ಯಾಚಾರ ಪ್ರಕರಣದ ವಿಚಾರದ ಮೂಲಕ ಕೇಸರಿ ಪಕ್ಷವನ್ನು ಮೂಲೆಗುಂಪು ಮಾಡಲು ಯತ್ನಿಸಿದ ಕಾಂಗ್ರೆಸ್ಗೆ 66 ಸ್ಥಾನಗಳನ್ನು ತನ್ನಾಗಿಸಿಕೊಂಡಿತ್ತು.
ಇದನ್ನೂ ಓದಿ: ಜಮ್ಮು-ಕಾಶ್ಮೀರ: ನಿವೃತ್ತ ಪೊಲೀಸ್ ಅಧಿಕಾರಿಯನ್ನು ಗುಂಡಿಕ್ಕಿ ಕೊಂದ ಉಗ್ರರು