ETV Bharat / bharat

ಕೃತಕ ಬುದ್ಧಿಮತ್ತೆಯ ಡೀಪ್‌ಫೇಕ್‌ ಋಣಾತ್ಮಕ ಪರಿಣಾಮಗಳ ಬಗ್ಗೆ ಇಡೀ ಜಗತ್ತಿಗೆ ಆತಂಕವಿದೆ: ಮೋದಿ - ಭಯೋತ್ಪಾದನೆ ಸ್ವೀಕಾರಾರ್ಹವಲ್ಲ

PM Modi on AI Deepfake: ಕೃತಕ ಬುದ್ಧಿಮತ್ತೆ ಡೀಪ್‌ಫೇಕ್‌ನ ಋಣಾತ್ಮಕ ಪರಿಣಾಮಗಳ ಬಗ್ಗೆ ಜಗತ್ತಿಗೆ ಆತಂಕವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಜಿ20 ವರ್ಚುವಲ್ ಶೃಂಗಸಭೆಯಲ್ಲಿ ಕಳವಳ ವ್ಯಕ್ತಪಡಿಸಿದರು.

Prime Minister Narendra Modi
ಕೃತಕ ಬುದ್ಧಿಮತ್ತೆ ಡೀಪ್‌ಫೇಕ್‌ನ ಋಣಾತ್ಮಕ ಪರಿಣಾಮಗಳ ಬಗ್ಗೆ ಜಗತ್ತು ಚಿಂತಿತ: ಪ್ರಧಾನಿ ಮೋದಿ
author img

By ANI

Published : Nov 23, 2023, 8:24 AM IST

ನವದೆಹಲಿ: ಬುಧವಾರ ನಡೆದ ಜಿ20 ವರ್ಚುವಲ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕೃತಕ ಬುದ್ಧಿಮತ್ತೆಯ (ಎಐ) ಡೀಪ್‌ಫೇಕ್ ತಂತ್ರಜ್ಞಾನದ ಪ್ರತಿಕೂಲ ಪರಿಣಾಮಗಳ ಬಗ್ಗೆ ಹೆಚ್ಚುತ್ತಿರುವ ಜಾಗತಿಕ ಆತಂಕಗಳನ್ನು ತಿಳಿಸಿದ್ದಾರೆ. ಅಂತರರಾಷ್ಟ್ರೀಯ ಸಹಯೋಗದ ಅಗತ್ಯವನ್ನು ಒತ್ತಿ ಹೇಳಿದ ಮೋದಿ, ಎಐಯ ಸಂಭಾವ್ಯ ಋಣಾತ್ಮಕ ಪರಿಣಾಮಗಳ ಬಗ್ಗೆ ಜಗತ್ತು ಒಟ್ಟಾರೆಯಾಗಿ ಕಾಳಜಿ ವಹಿಸಬೇಕು. ಅದರ ಮೇಲೆ ಜಾಗತಿಕ ನಿಯಂತ್ರಣಗಳನ್ನು ಹೇರಲು ಏಕೀಕೃತ ಪ್ರಯತ್ನ ಮಾಡಬೇಕಿದೆ ಎಂದರು.

"ಎಐಯ ಋಣಾತ್ಮಕ ಪರಿಣಾಮಗಳ ಬಗ್ಗೆ ಜಗತ್ತು ಚಿಂತಿತವಾಗಿದೆ. ಎಐನ ಮೇಲೆ ಜಾಗತಿಕ ನಿಯಮಗಳನ್ನು ವಿಧಿಸಲು ನಾವು ಒಟ್ಟಾಗಿ ಕೆಲಸ ಮಾಡಬೇಕು ಎನ್ನುವುದು ಭಾರತದ ನಿಲುವು. ಡೀಪ್‌ಫೇಕ್​ ತಂತ್ರಜ್ಞಾನದಿಂದ ಉಂಟಾಗುವ ಅಪಾಯಗಳನ್ನು ಗ್ರಹಿಸಿ, ತುರ್ತು ಅಗತ್ಯ ಕೈಗೊಳ್ಳಬೇಕಾಗಿದೆ. ಈ ಸವಾಲುಗಳನ್ನು ಎದುರಿಸಲು ಸಂಘಟಿತ ಕಾರ್ಯಗಳು ಅವಶ್ಯಕ. ಸಮಾಜ ಮತ್ತು ವ್ಯಕ್ತಿಗಳಿಗೆ ಡೀಪ್‌ಫೇಕ್ ಎಷ್ಟು ಅಪಾಯಕಾರಿ ಎಂಬುದನ್ನು ಅರಿತುಕೊಂಡು ನಾವು ಮುಂದೆ ಕೆಲಸ ಮಾಡೋಣ'' ಎಂದು ತಿಳಿಸಿದರು.

"ಎಐ ಅನ್ನು ನಾವು ಜನರನ್ನು ತಲುಪಿಸಲು ಬಯಸುತ್ತೇವೆ. ಆದರೆ, ಅದು ಸಮಾಜಕ್ಕೆ ಸುರಕ್ಷಿತವಾಗಿರಬೇಕು'' ಎಂದ ಅವರು, "ಡೀಪ್‌ಫೇಕ್‌ಗಳನ್ನು ಉತ್ಪಾದಿಸುವಲ್ಲಿ ಕೃತಕ ಬುದ್ಧಿಮತ್ತೆಯ ಹೆಚ್ಚುತ್ತಿರುವ ಬೆದರಿಕೆಗಳ ಬಗ್ಗೆ ಮೋದಿ ಈ ಹಿಂದೆಯೂ ಎಚ್ಚರಿಸಿದ್ದರು. ಕೃತಕ ಬುದ್ಧಿಮತ್ತೆ ಮತ್ತು ಡೀಪ್‌ಫೇಕ್‌ನಿಂದಾಗಿ ಅನೇಕ ಸವಾಲುಗಳು ಉದ್ಭವಿಸುತ್ತಿವೆ. ಜನರು ಸಾಮಾನ್ಯವಾಗಿ ಡೀಪ್‌ಫೇಕ್‌ಗಳನ್ನು ನಂಬುತ್ತಾರೆ. ಇದು ಸಮಾಜದಲ್ಲಿ ಪ್ರಕ್ಷುಬ್ಧತೆ ಮತ್ತು ಅಶಾಂತಿ ಉಂಟುಮಾಡಬಹುದು" ಎಂದು ನವದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆದ ದೀಪಾವಳಿ ಮಿಲನ್ ಕಾರ್ಯಕ್ರಮದಲ್ಲಿ ಅವರು ಹೇಳಿದ್ದರು.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಸೇರಿದಂತೆ ಎಲ್ಲಾ ಜಿ20 ಸದಸ್ಯರ ನಾಯಕರು ಮತ್ತು ಒಂಬತ್ತು ಅತಿಥಿ ರಾಷ್ಟ್ರಗಳು ಮತ್ತು 11 ಅಂತರರಾಷ್ಟ್ರೀಯ ಸಂಸ್ಥೆಗಳ ಮುಖ್ಯಸ್ಥರು ವರ್ಚುವಲ್ ಸಭೆಯಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ: 'ಪ್ರಧಾನಿ ಮೋದಿ, ಅದಾನಿ ಜೇಬುಗಳ್ಳರಿದ್ದಂತೆ'; ರಾಹುಲ್​ ಗಾಂಧಿ ಟೀಕೆಗೆ ಬಿಜೆಪಿ ತಿರುಗೇಟು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.