ಶೌಚಾಲಯ ಅತೀ ಮುಖ್ಯ. ಏಕೆಂದರೆ ಮನುಷ್ಯ ವಿಸರ್ಜಿಸುವ ಮಲ, ಸಾವು ತರಬಹುದಾದ ಕಾಯಿಲೆಗಳನ್ನು ಹರಡುತ್ತದೆ. ಹಾಗಾಗಿ ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳು ನೈರ್ಮಲ್ಯಕ್ಕೆ ಹೆಚ್ಚು ಆದ್ಯತೆ ನೀಡುತ್ತಿವೆ. ವಿಶ್ವ ಸಂಸ್ಥೆಯೂ ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಬಯಲುಶೌಚಕ್ಕೆ ಭಾರತ ವಿಶ್ವದಲ್ಲೇ ಅತಿ ಹೆಚ್ಚು ಕುಖ್ಯಾತಿ ಪಡೆದಿತ್ತು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಶೌಚಾಲಯದ ಮಹತ್ವ, ಜಾಗೃತಿ, ಅರಿವು ಮೂಡಿಸುವ ನಿಟ್ಟಿನಲ್ಲಿ ಭಾರತದ ಸಾಧನೆ 2014 ರ ಬಳಿಕ ಪ್ರಶಂಸನೀಯವಾಗಿದೆ. ‘ಸ್ವಚ್ಛ ಭಾರತ ಅಭಿಯಾನ’ದಡಿ ಶೌಚಾಲಯದ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವುದಲ್ಲದೆ, ಶೌಚಾಲಯ ನಿರ್ಮಿಸಿಕೊಳ್ಳಲು ಕೇಂದ್ರ ಸರ್ಕಾರ ಧನಸಹಾಯವನ್ನೂ ನೀಡುತ್ತಿದೆ.
2001ರಲ್ಲಿ ವಿಶ್ವ ಶೌಚಾಲಯ ಸಂಘಟನೆ ಆರಂಭಿಸಿದ ಈ ದಿನವನ್ನು ವಿಶ್ವಸಂಸ್ಥೆ 2013ರಲ್ಲಿ ವಿಶ್ವ ದಿನದ ಮಾನ್ಯತೆ ನೀಡಿತು. ಒಂದು ಘೋಷ ವಾಕ್ಯದೊಂದಿಗೆ ವಿಶ್ವಸಂಸ್ಥೆ ಜಲ ಕಾರ್ಯ ಪಡೆ ಪ್ರತೀ ವರ್ಷವೂ ಈ ದಿನದಂದು ಶೌಚಕ್ಕೆ ಸಂಬಂಧಿ ಅಭಿಯಾನ ನಡೆಸುತ್ತದೆ.
ವಿಶ್ವ ಶೌಚಾಲಯ ದಿನ ಎಂದರೇನು?
ವಿಶ್ವ ಶೌಚಾಲಯ ದಿನವು ನವೆಂಬರ್ 19 ರಂದು ಜಾಗತಿಕವಾಗಿ ಆಚರಿಸಲ್ಪಡುವ ಒಂದು ದಿನವಾಗಿದೆ. ವರ್ಲ್ಡ್ ಟಾಯ್ಲೆಟ್ ಡೇ ಶೌಚಾಲಯ ಬಳಸದ ಜನರಲ್ಲಿ ಅದರ ಬಗ್ಗೆ ಜಾಗೃತಿ ಮೂಡಿಸುವ ದಿನವಾಗಿದೆ. ನೀರು ಮತ್ತು ನೈರ್ಮಲ್ಯ ಮಾನವನ ಹಕ್ಕಾಗಿದೆ. ವಿಶ್ವ ಶೌಚಾಲಯ ದಿನವನ್ನು ವಿಶ್ವ ಶೌಚಾಲಯ ಸಂಸ್ಥೆ 2001 ರಲ್ಲಿ ಜಾರಿಗೆ ತಂದಿತು. ಅಂದಿನಿಂದ ಹನ್ನೆರಡು ವರ್ಷಗಳ ನಂತರ, 2013 ರಲ್ಲಿ, ಯುಎನ್ ಜನರಲ್ ಅಸೆಂಬ್ಲಿ ವಿಶ್ವ ಶೌಚಾಲಯ ದಿನವನ್ನು ಅಧಿಕೃತವಾಗಿ ಘೋಷಿಸಿತು. ಸರಿಯಾದ ನೈರ್ಮಲ್ಯ ಪಡೆಯುವುದು ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಹಕ್ಕು ಎಂದು ಘೋಷಿಸಿತು. ಪ್ರಪಂಚದಾದ್ಯಂತ 2.5 ಬಿಲಿಯನ್ ಜನರು ಇಂದಿಗೂ ನಿಯಮಿತವಾಗಿ ಶೌಚಾಲಯ ಬಳಸುತ್ತಿಲ್ಲ. ಹೆಚ್ಚಿನ ಜನರು ಅಶುದ್ಧ ಮತ್ತು ಅಸುರಕ್ಷಿತ ಶೌಚಾಲಯಗಳನ್ನು ಹೊಂದಿದ್ದು, ಅದರಿಂದ ಹೆಚ್ಚು ಸಮಸ್ಯೆಗಳಾಗುತ್ತಿವೆ. ಕಾಲರಾ, ಟೈಫಾಯಿಡ್ ಮತ್ತು ಹೆಪಟೈಟಿಸ್ ನಂತಹ ರೋಗಗಳ ಹರಡುವಿಕೆಗೆ ಕಾರಣವಾಗುತ್ತಿವೆ.
ವಿಶ್ವ ಶೌಚಾಲಯ ದಿನದ ಇತಿಹಾಸ:
ಆರಂಭದಲ್ಲಿ ಈ ದಿನವನ್ನು ಸಿಂಗಪೂರದ ಲೋಕೋಪಕಾರಿ ಜ್ಯಾಕ್ ಸಿಮ್ ವಿಶ್ವ ಶೌಚಾಲಯ ಸಂಸ್ಥೆ ಅಥವಾ ಮಿಸ್ಟರ್ ಟಾಯ್ಲೆಟ್ ಎಂಬ ಹೆಸರಿನಿಂದ ಸ್ಥಾಪಿಸಿದರು. ಜ್ಯಾಕ್ ತಮ್ಮ ಹಾಸ್ಯಪ್ರಜ್ಞೆಯ ಮೂಲಕ, 2001 ರಿಂದ ನೈರ್ಮಲ್ಯ ಸಮಸ್ಯೆಗಳನ್ನು ಜಾಗತಿಕ ಮಾಧ್ಯಮ ಕೇಂದ್ರ ಹಂತಕ್ಕೆ ತಂದರು. ಅವರು ವಿಶ್ವ ಶೌಚಾಲಯ ಸಂಘಟನೆಯನ್ನು ಜಾಗತಿಕ ಜಾಲವಾಗಿ ಮತ್ತು ನೈರ್ಮಲ್ಯ ಸಂಘಗಳು, ಯುಎನ್ ಏಜೆನ್ಸಿಗಳು, ಸರ್ಕಾರ ಮತ್ತು ಇತರ ಮಧ್ಯಸ್ಥಗಾರರಿಗೆ ಸಮಸ್ಯೆಗಳು ಹಾಗೂ ಪರಿಹಾರಗಳನ್ನು ಚರ್ಚಿಸಲು ವೇದಿಕೆಯಾಗಿದರು. ವಿಶ್ವ ಶೌಚಾಲಯ ದಿನವನ್ನು ಯುಎನ್-ವಾಟರ್ ಸಂಸ್ಥೆ 2001 ರಲ್ಲಿ ಪ್ರಾರಂಭಿಸಿತು. ಆಗಿನ ಯುಎನ್ ಸೆಕ್ರೆಟರಿ ಜನರಲ್ ಬಾನ್ ಕಿ ಮೂನ್ ಅವರು ಎಲ್ಲರ ಮಲವಿಸರ್ಜನೆ ಮತ್ತು ನೈರ್ಮಲ್ಯ ಸೌಲಭ್ಯಗಳ ಕೊರತೆಯನ್ನು ಕೊನೆಗೊಳಿಸಬೇಕು ಎಂದು ಹೇಳಿದ್ದರು.
ವಿಶ್ವ ಶೌಚಾಲಯ ದಿನ ಮತ್ತು ನೈರ್ಮಲ್ಯ:
ನೈರ್ಮಲ್ಯವು ಜಾಗತಿಕ ಅಭಿವೃದ್ಧಿಗೆ ಆದ್ಯತೆಯಾಗಿದೆ.ಸುರಕ್ಷಿತ ಶೌಚಾಲಯಕ್ಕೆ ಪ್ರವೇಶವಿಲ್ಲದೆ ಇನ್ನೂ ವಾಸಿಸುತ್ತಿರುವ ವಿಶ್ವದಾದ್ಯಂತ 4.5 ಶತಕೋಟಿ ಜನರಲ್ಲಿ ಜಾಗೃತಿ ಮೂಡಿಸಲು ವಿಶ್ವ ಸಂಸ್ಥೆ ಜನರಲ್ ಅಸೆಂಬ್ಲಿ ನವೆಂಬರ್ 19 ಅನ್ನು ವಿಶ್ವ ಶೌಚಾಲಯ ದಿನವೆಂದು ಘೋಷಿಸಿತು. ಸ್ವಚ್, ಸುರಕ್ಷಿತ ಶೌಚಾಲಯಗಳಿಲ್ಲದೆ, ವಿಸರ್ಜನಾ ಉತ್ಪನ್ನಗಳು (ಪೂಪ್) ಕೆಲವು ಸಮುದಾಯಗಳ ಆಹಾರ ಮತ್ತು ನೀರಿನ ಮೂಲಗಳನ್ನು ಕಲುಷಿತಗೊಳಿಸಬಹುದು. ಇದರಿಂದ ಜನರು ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಕೂಡ ಹೆಚ್ಚಿದೆ.
ಮಹಿಳೆಯರು ಮತ್ತು ಯುವಕರ ನಡುವೆ ನಡೆಯುವ ಲೈಂಗಿಕ ದೌರ್ಜನ್ಯಗಳ ಪ್ರಮಾಣವನ್ನು ಹೆಚ್ಚಿಸಲು ಮುಕ್ತ ಮಲವಿಸರ್ಜನೆ ಹೆಚ್ಚು ಕಾರಣವಾಗಬಹುದು. ಇದಲ್ಲದೆ ಯುವತಿಯರಿಗೆ ಋತುಶ್ರಾವವಾಗುತ್ತಿರುವಾಗ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಆಗುವುದಿಲ್ಲ. ಇದು ಹೆಣ್ಣುಮಕ್ಕಳು ಮೂಲಭೂತ ಶಿಕ್ಷಣವನ್ನು ಪಡೆಯುವ ಸಾಧ್ಯತೆಗಳನ್ನು ಸೀಮಿತಗೊಳಿಸುತ್ತದೆ. ಹುಡುಗಿಯರು ಮತ್ತು ಮಹಿಳೆಯರ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರಕ್ಕೆ ಮುಕ್ತ ಮಲವಿಸರ್ಜನೆಯು ಒಂದು ಕಾರಣವಾಗಿದೆ ಎಂದು ಸಂಶೋಧನೆಯಿಂದು ದೃಢವಾಗಿದೆ.
ವಿಶ್ವ ಶೌಚಾಲಯ ದಿನದ ಮಹತ್ವವೇನು?
ವಿಶ್ವ ಶೌಚಾಲಯ ದಿನವಿಲ್ಲದಿದ್ದರೆ, ನೈರ್ಮಲ್ಯದ ಸಮಸ್ಯೆ ಎಷ್ಟು ತುರ್ತು ಎಂದು ತಿಳಿಯುವುದು ಕಷ್ಟ. 2014 ರಲ್ಲಿ ವಿಶ್ವ ಶೌಚಾಲಯ ದಿನಾಚರಣೆಯ ಆಚರಣೆಯಲ್ಲಿ ಶೇ.60.4 ಕ್ಕಿಂತ ಹೆಚ್ಚು ಜನಸಂಖ್ಯೆಯು ಶೌಚಾಲಯಗಳನ್ನು ಹೊಂದಿಲ್ಲ ಎಂಬ ಮಾಹಿತಿ ಬಹಿರಂಗಗೊಂಡಿತು. ಸರಿಯಾದ ನೈರ್ಮಲ್ಯ ಮತ್ತು ನೈರ್ಮಲ್ಯ ಪದ್ಧತಿಗಳ ಕೊರತೆಯು ಸಾವಿಗೆ ಕಾರಣವಾಗುತ್ತಿರುವುದರಿಂದ ಇದು ಆಘಾತಕಾರಿಯಾಗಿದೆ. ಇದು ತುರ್ತು ಗಮನ ಹರಿಸಬೇಕಾದ ಸಂಗತಿಯಾಗಿದೆ. ಶೌಚಾಲಯ ಪರಿಸರ ಸ್ನೇಹಿಯಾಗಿದ್ದು, ಇದರಿಂದ ನೀರನನ್ನು ಕೂಡ ಉಳಿಸಬಹುದಾಗಿದೆ.
ಮನೆಗಳು ಮತ್ತು ಶಾಲೆಗಳಲ್ಲಿ ಶೌಚಾಲಯ ಇರುವುದು ಅಗತ್ಯ:
ರೋಗಗಳು ಹರಡದಂತೆ ತಡೆಯಬಹುದಾಗಿದೆ.
ಮಕ್ಕಳ ಪೌಷ್ಟಿಕಾಂಶದ ಸ್ಥಿತಿ ಸುಧಾರಿಸಲಿದೆ.
ಸುರಕ್ಷತೆಯ ಜೊತೆಗೆ ಮಕ್ಕಳ ಯೋಗಕ್ಷೇಮ ಕೂಡ ಕಾಪಾಡಿಕೊಳ್ಳಬಹುದು.
ಮಹಿಳೆಯರು ಮತ್ತು ಹುಡುಗಿಯರ ಶೈಕ್ಷಣಿಕ ಭವಿಷ್ಯದ ಬೆಳವಣಿಗೆ ಸಾಧ್ಯ.
ವಿಶ್ವ ಶೌಚಾಲಯ ದಿನವನ್ನು ಹೇಗೆ ಆಚರಿಸುವುದು:
ಪ್ರತಿವರ್ಷ ಲಕ್ಷಾಂತರ ಜನರು ಆನ್‌ಲೈನ್ ಮನವಿಗಳು, ಪ್ರಚಾರಗಳು ಮತ್ತು ವಿಶ್ವದಾದ್ಯಂತ ನಡೆಯುವ ವಿಶ್ವ ಶೌಚಾಲಯ ದಿನದ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದರ ಮೂಲಕ ವಿಶ್ವ ಶೌಚಾಲಯ ದಿನವನ್ನು ಉತ್ತೇಜಿಸುತ್ತಾರೆ. ಈ ದಿನದ ಸಾಮಾನ್ಯ ಆಚರಣೆಯು ಸಾಮಾಜಿಕ ಮಾಧ್ಯಮಗಳ ಮೂಲಕ, ಅಲ್ಲಿ #worldtoiletday, #ToiletAccessIsARight, #WeCantWait ಎಂಬ ಹ್ಯಾಶ್‌ಟ್ಯಾಗ್‌ಗಳನ್ನು ಜಾಗೃತಿ ಹರಡಲು ಜನಪ್ರಿಯವಾಗಿ ಬಳಸಲಾಗುತ್ತದೆ.
ವಿಶ್ವ ಸಂಸ್ಥೆಯ ಗುರಿ:
2030 ರ ವೇಳೆಗೆ ವಿಶ್ವದ ಎಲ್ಲ ವ್ಯಕ್ತಿಯೂ ಸುರಕ್ಷಿತ ಶೌಚಾಲಯ ಹೊಂದುವಂತೆ ಮಾಡುವುದು ವಿಶ್ವ ಸಂಸ್ಥೆಯ ಗುರಿ. ಇದಕ್ಕಾಗಿ ಸಮರ್ಥನೀಯ ಬೆಳವಣಿಗೆ ಗುರಿ - (ಎಸ್‌ಜಿಡಿ-6) ಹಾಕಿಕೊಂಡಿದೆ. ತನ್ನ ಸದಸ್ಯ ರಾಷ್ಟ್ರಗಳಲ್ಲಿ ಶೌಚಾಲಯದ ಬಗ್ಗೆ ಅರಿವು ಮೂಡಿಸುವುದಕ್ಕೆಂದೇ ವಿಶ್ವಸಂಸ್ಥೆಯು ವಿಶ್ವ ಶೌಚಾಲಯ ದಿನ ಆಚರಿಸುತ್ತಿದೆ. ವಿಶ್ವ ಶೌಚಾಲಯ ದಿನ ಆಚರಣೆ ಹಿಂದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶೌಚಾಲಯದ ಮಹತ್ವ, ಜಾಗೃತಿ, ಅರಿವು ಮೂಡಿಸುವ ಉದ್ದೇಶವಿದೆ. 2001 ರಲ್ಲಿ ವಿಶ್ವಸಂಸ್ಥೆಯಡಿ ವಿಶ್ವ ಶೌಚಾಲಯ ಸಂಸ್ಥೆ ಸ್ಥಾಪಿಸಲಾಯಿತು. ೨೦೧೩ರಲ್ಲಿ ವಿಶ್ವಸಂಸ್ಥೆಯು ಮಸೂದೆಯೊಂದನ್ನು ಮಂಡಿಸಿ, ನ.19ನ್ನು ಅಂತಾರಾಷ್ಟ್ರೀಯ ಶೌಚಾಲಯ ದಿನವನ್ನಾಗಿ ಘೋಷಿಸಿದೆ.
2018ರ ಎನ್ಎಸ್ಎಸ್ ವರದಿ ಭಾರತದ ಬಗ್ಗೆ:
ಗ್ರಾಮೀಣ ಪ್ರದೇಶದ ಸುಮಾರು 56.6 ರಷ್ಟು ಕುಟುಂಬಗಳು ಮತ್ತು ನಗರ ಪ್ರದೇಶಗಳಲ್ಲಿ ಸುಮಾರು 91.2 ರಷ್ಟು ಕುಟುಂಬಗಳು ಸ್ನಾನಗೃಹ ಹೊಂದಿದ್ದಾರೆ.
ಸ್ನಾನಗೃ ಹೊಂದಿರು ಹೊಂದಿರುವ ಮನೆಗಳಲ್ಲಿ, ಗ್ರಾಮೀಣ ಪ್ರದೇಶಗಳಲ್ಲಿ ಸುಮಾರು 48.4 ಪ್ರತಿಶತ ಮತ್ತು ನಗರ ಪ್ರದೇಶಗಳಲ್ಲಿ ಸುಮಾರು 74.8 ರಷ್ಟು ಜನರು ವಾಸಿಸುವ ಘಟಕಕ್ಕೆ ಜೋಡಿಸಲಾದ ಸ್ನಾನಗೃಹವನ್ನು ಹೊಂದಿದ್ದಾರೆ.
ಗ್ರಾಮೀಣ ಪ್ರದೇಶದ ಸುಮಾರು 71.3 ರಷ್ಟು ಕುಟುಂಬಗಳು ಮತ್ತು ನಗರ ಪ್ರದೇಶಗಳಲ್ಲಿ ಸುಮಾರು 96.2 ರಷ್ಟು ಕುಟುಂಬಗಳು ಶೌಚಾಲಯಕ್ಕೆ ಪ್ರವೇಶವನ್ನು ಹೊಂದಿದ್ದಾರೆ.
ರಾಷ್ಟ್ರೀಯ ಸಂಖ್ಯಾಶಾಸ್ತ್ರೀಯ ಸಂಸ್ಥೆ (ಎನ್‌ಎಸ್‌ಒ) ನಡೆಸಿದ 76 ನೇ ಎನ್‌ಎಸ್‌ಎಸ್ ಸುತ್ತಿನಲ್ಲಿ, ಸೆಪ್ಟೆಂಬರ್ 2018 ರ ಹೊತ್ತಿಗೆ, ಭಾರತದ ಶೇ.28.7ರಷ್ಟು ಗ್ರಾಮೀಣ ಕುಟುಂಬಗಳು ಶೌಚಾಲಯ ಹೊಂದಿಲ್ಲ. ಶೇ.32ರಷ್ಟು ಜನರು ಬಯಲು ಶೌಚ ಅಭ್ಯಾಸ ಹೊಂದಿದ್ದಾರೆ ಎಂದು ತಿಳಿದುಬಂದಿದೆ. ಭಾರತದ ಕೇವಲ ಶೇ. 6ರಷ್ಟು ಕುಟುಂಬಗಳಿಗೆ ಶೌಚಾಲಯದ ಇಲ್ಲ.
ಶೌಚಾಲಯದ ಕೊರತೆ ಪುರುಷ ಮತ್ತು ಮಹಿಳೆಯರಿಗೆ ಸಮವಾಗಿ ಬಾಧಿಸುತ್ತದೆಯಾದರೂ ಮಹಿಳೆಯರು ಹೆಚ್ಚು ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಅದರಲ್ಲೂ ಗರ್ಭಿಣಿ ಮಹಿಳೆಯರ ಸ್ಥಿತಿ ಹೇಳತೀರದಾಗಿದೆ. ಸುರಕ್ಷಿತ ಶೌಚಾಲಯವಿಲ್ಲದೆ ಶೌಚಕ್ಕೆ ತೆರಳಲು ಮಹಿಳೆಯರು ಕತ್ತಲಾಗುವುದನ್ನೇ ಕಾಯುವಂತಾಗಿದೆ. ಇದು ಅವರ ಜೀವವನ್ನೇ ಸವಾಲಿಗೆ ಒಡ್ಡಿದಂತೆ. ರಾತ್ರಿ ವೇಳೆ ವಿಷ ಜಂತುಗಳ ದಾಳಿಯೂ ಮಹಿಳೆಯರಿಗೆ ಮಾರಕವಾಗಿದೆ.
ವಿಶ್ವದೆಲ್ಲೆಡೆ ಸುರಕ್ಷಿತ ಶೌಚಾಲಯದ ಬಗ್ಗೆ ಮೂಡಿಸುತ್ತಿರುವ ಜಾಗೃತಿ ಉತ್ತಮ ಫಲಿತಾಂಶ ನೀಡಲು ಆರಂಭಿಸಿದೆ. ಕಳೆದ 25 ವರ್ಷಗಳಲ್ಲಿ 210 ಕೋಟಿ ಜನರು ಶೌಚಾಲಯ ಕಟ್ಟಿಸಿಕೊಂಡಿದ್ದಾರೆ.