ETV Bharat / bharat

ಮೇ 8- ವಿಶ್ವ ರೆಡ್‌ಕ್ರಾಸ್ ದಿನದ ವಿಶೇಷತೆ ಏನು ಗೊತ್ತಾ? - ರೆಡ್‌ಕ್ರಾಸ್ ಸೊಸೈಟಿಯ ಪ್ರಧಾನ ಕಚೇರಿ

ಇಂದು ವಿಶ್ವ ರೆಡ್‌ಕ್ರಾಸ್ ದಿನ. ವಿಶ್ವದಾದ್ಯಂತದ ಪ್ರತಿಯೊಬ್ಬರಿಗೂ ರೆಡ್‌ಕ್ರಾಸ್ ಸೊಸೈಟಿಯ ಬಗ್ಗೆ ತಿಳಿದಿದೆ. ಇದು ನೈಸರ್ಗಿಕ ವಿಪತ್ತುಗಳು, ಯುದ್ಧಗಳು ಮತ್ತು ಪ್ರಪಂಚದಾದ್ಯಂತದ ಸಾಂಕ್ರಾಮಿಕ ರೋಗಗಳಿಂದ ಬಳಲುತ್ತಿರುವ ಜನರಿಗೆ ಪರಿಹಾರ ಮತ್ತು ಕಾಳಜಿ ಒದಗಿಸಲು ಸಕ್ರಿಯವಾಗಿ ಕಾರ್ಯನಿರ್ವಹಿಸುವ ಒಂದು ಸಂಸ್ಥೆಯಾಗಿದೆ. ಅದರ ಇತಿಹಾಸ, ಮೂಲ ತತ್ವಗಳು ಇತ್ಯಾದಿಗಳ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

redcross
redcross
author img

By

Published : May 8, 2021, 5:12 PM IST

ಶಾಂತಿ ಮತ್ತು ಸೌಹಾರ್ದತೆಯ ಸಂಕೇತ ಎಂದು ಕರೆಯಲ್ಪಡುವ ರೆಡ್‌ಕ್ರಾಸ್ ಸೊಸೈಟಿ, ಪ್ರತಿ ವರ್ಷ ಮೇ 8 ರಂದು ವಿಶ್ವ ರೆಡ್‌ಕ್ರಾಸ್ ದಿನವನ್ನು ಆಚರಿಸುತ್ತದೆ. ಇದು ರೆಡ್‌ಕ್ರಾಸ್‌ನ ಸಂಸ್ಥಾಪಕ ಹೆನ್ರಿ ಡುನಾಂಟ್ ಅವರ ಜನ್ಮದಿನವೂ ಆಗಿದೆ ಇವರಿಗೆ ಶಾಂತಿ ನೊಬೆಲ್​ ಪ್ರಶಸ್ತಿ ಸಹ ಲಭಿಸಿದೆ. ಈ ವರ್ಷದ ಥೀಮ್ ‘ ಟುಗೆದರ್​ ವಿ ಆರ್​ # ಅನ್​ಸ್ಟಾಪಬಲ್​!’ ಎಂಬುದಾಗಿದೆ. 1863 ರಲ್ಲಿ ರೂಪುಗೊಂಡ ಅಂತಾರಾಷ್ಟ್ರೀಯ ರೆಡ್‌ಕ್ರಾಸ್ ಸಮಿತಿ (ಐಸಿಆರ್‌ಸಿ) ಅನ್ನು 1864 ರಲ್ಲಿ ಜಿನೀವಾ ಒಪ್ಪಂದದ ಸಮಯದಲ್ಲಿ ಹೆನ್ರಿ ಡುನಾಂಟ್ ಅವರ ಪ್ರಯತ್ನದಿಂದ ಅಂತಾರಾಷ್ಟ್ರೀಯ ರೆಡ್‌ಕ್ರಾಸ್ ಚಳವಳಿಯಡಿ ಸ್ಥಾಪಿಸಲಾಯಿತು. ರೆಡ್‌ಕ್ರಾಸ್ ಸೊಸೈಟಿಯ ಪ್ರಧಾನ ಕಚೇರಿ ಸ್ವಿಟ್ಜರ್‌ಲ್ಯಾಂಡ್‌ನ ಜಿನೀವಾದಲ್ಲಿದೆ. ಆರಂಭದಲ್ಲಿ, ಹಿಂಸಾಚಾರ ಮತ್ತು ಯುದ್ಧಕ್ಕೆ ಬಲಿಯಾದ ಜನರನ್ನು ಹಾಗೂ ಯುದ್ಧ ಖೈದಿಗಳಾಗಿದ್ದವರನ್ನು ನೋಡಿಕೊಳ್ಳುವುದು ಮತ್ತು ಪುನರ್ವಸತಿ ಕಲ್ಪಿಸುವುದು ಈ ಸಂಸ್ಥೆಯ ಮುಖ್ಯ ಉದ್ದೇಶವಾಗಿತ್ತು. ಈ ಸಂಸ್ಥೆಯು ವಿಶ್ವದಾದ್ಯಂತದ ಸರ್ಕಾರಗಳಿಂದ ಮತ್ತು ರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆಗಳಿಂದ ಹಣಕಾಸಿನ ನೆರವು ಪಡೆಯುತ್ತದೆ.

ರೆಡ್ ಕ್ರಾಸ್ ಇತಿಹಾಸ ಸಂಸ್ಥೆ ಇತಿಹಾಸ:

ಫೆಬ್ರವರಿ 1863 ರಲ್ಲಿ, ಜಿನೀವಾ ಸಾರ್ವಜನಿಕ ಕಲ್ಯಾಣ ಸೊಸೈಟಿ ಒಂದು ಸಮಿತಿಯನ್ನು ರಚಿಸಿತು, ಇದರಲ್ಲಿ ಸ್ವಿಟ್ಜರ್ಲೆಂಡ್‌ನ ಐದು ಜನ ಇದ್ದಾರೆ. ಸಮಿತಿಯ ಮುಖ್ಯ ಉದ್ದೇಶ ಹೆನ್ರಿ ಡುನಾಂಟ್ ಅವರ ಸಲಹೆಗಳನ್ನು ಚರ್ಚಿಸುವುದು. ಈ ಐದು ಸದಸ್ಯರ ಸಮಿತಿಯು ಜನರಲ್ ಗುಯೆಮ್ ಹೆನ್ರಿ ಡುಫೂರ್, ಗುಸ್ಟಾವ್ ಮೊನಿಯರ್, ಲೂಯಿಸ್ ಅಪ್ಪಿಯಾ, ಥಿಯೋಡರ್ ಮೊನೊಯಿರ್ ಮತ್ತು ಹೆನ್ರಿ ದಿನಾಂತ್ ಅವರನ್ನು ಒಳಗೊಂಡಿತ್ತು. ಇವರಲ್ಲಿ, ಸ್ವಿಸ್ ಸೈನ್ಯದ ಜನರಲ್ ಆಗಿದ್ದ ಗೋಮ್ ಹೆನ್ರಿ ಡುಫೂರ್ ಒಂದು ವರ್ಷ ಸಮಿತಿ ಅಧ್ಯಕ್ಷರಾಗಿ ಮತ್ತು ನಂತರ ಗೌರವ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.

ಅಕ್ಟೋಬರ್ 1863 ರಲ್ಲಿ, ಅಂತಾರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲಾಯಿತು, ಇದರಲ್ಲಿ 16 ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಈ ಸಮ್ಮೇಳನದಲ್ಲಿ ಅನೇಕ ತತ್ವಗಳನ್ನು ಅಂಗೀಕರಿಸಲಾಯಿತು ಮತ್ತು ಸಮಿತಿಯ ಅಂತಾರಾಷ್ಟ್ರೀಯ ಚಿಹ್ನೆಯನ್ನು ಸಹ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ, ಯುದ್ಧದ ಸಮಯದಲ್ಲಿ ಅನಾರೋಗ್ಯ ಮತ್ತು ಗಾಯಗೊಂಡ ಜನರನ್ನು ನೋಡಿಕೊಳ್ಳುವಂತಹ ಸ್ವಯಂಪ್ರೇರಿತ ಸಂಸ್ಥೆಗಳನ್ನು ಸ್ಥಾಪಿಸಲು ವಿಶ್ವದ ಎಲ್ಲ ರಾಷ್ಟ್ರಗಳಿಗೆ ಮನವಿ ಮಾಡಲಾಯಿತು. ಈ ಘಟಕಗಳನ್ನು ರಾಷ್ಟ್ರೀಯ ರೆಡ್‌ಕ್ರಾಸ್ ಸಂಘಗಳು ಎಂದು ಕರೆಯಲಾಗುತ್ತಿತ್ತು. ಉಳಿದ ಐದು ಸದಸ್ಯರ ಸಮಿತಿಯನ್ನು ಆರಂಭದಲ್ಲಿ "ಗಾಯಗೊಂಡವರಿಗೆ ಪರಿಹಾರಕ್ಕಾಗಿ ಅಂತಾರಾಷ್ಟ್ರೀಯ ಸಮಿತಿ" ಎಂದು ಕರೆಯಲಾಗುತ್ತಿತ್ತು, ನಂತರ ಇದನ್ನು "ಅಂತಾರಾಷ್ಟ್ರೀಯ ರೆಡ್‌ಕ್ರಾಸ್ ಸಮಿತಿ" ಎಂದು ಮರುನಾಮಕರಣ ಮಾಡಲಾಯಿತು.

ರೆಡ್ ಕ್ರಾಸ್ ಒಂದು ಸ್ವಯಂಪ್ರೇರಿತ ಸಂಘಟನೆಯಾಗಿದ್ದು, ದೇಶದ ಯಾವುದೇ ಭಾಗದಲ್ಲಿ ನೈಸರ್ಗಿಕ ಅಥವಾ ಮಾನವ ವಿಪತ್ತುಗಳಿಗೆ ಬಲಿಯಾದವರನ್ನು ರಕ್ಷಿಸುವ ಮತ್ತು ಪರಿಹಾರ ನೀಡುವಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಭಾರತದಲ್ಲಿ, 1914 ರಲ್ಲಿ ನಡೆದ ಮೊದಲ ವಿಶ್ವ ಯುದ್ಧದ ಸಮಯದಲ್ಲಿ, ಸೈನಿಕರಿಗೆ ಪರಿಹಾರ ಸೇವೆಗಳನ್ನು ಒದಗಿಸಲು ಸೇಂಟ್ ಜಾನ್ ಆ್ಯಂಬುಲೆನ್ಸ್​​ ಅಸೋಸಿಯೇಷನ್‌ನ ಒಂದು ಶಾಖೆಯನ್ನು ಹೊರತುಪಡಿಸಿ ಅಂತಹ ಯಾವುದೇ ಸಂಘಟನೆ ಇರಲಿಲ್ಲ. ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ (ಐಆರ್‌ಸಿಎಸ್) ಹೇಳುವಂತೆ ಬ್ರಿಟಿಷ್ ರೆಡ್‌ಕ್ರಾಸ್‌ನ ಸ್ವತಂತ್ರವಾದ ಭಾರತೀಯ ರೆಡ್‌ಕ್ರಾಸ್ ಸೊಸೈಟಿಯನ್ನು ರಚಿಸುವ ಮಸೂದೆಯನ್ನು 1920 ರ ಮಾರ್ಚ್ 3 ರಂದು ಭಾರತೀಯ ಶಾಸಕಾಂಗ ಪರಿಷತ್ತಿನಲ್ಲಿ ವೈಸರಾಯ್‌ನ ಕಾರ್ಯನಿರ್ವಾಹಕ ಮಂಡಳಿಯ ಸದಸ್ಯ ಸರ್ ಕ್ಲೌಡ್ ಹಿಲ್ ಪರಿಚಯಿಸಿದರು. ಇವರು ಭಾರತದ ಜಂಟಿ ಯುದ್ಧ ಸಮಿತಿಯ ಅಧ್ಯಕ್ಷರೂ ಆಗಿದ್ದರು. 1920 ರ ಮಾರ್ಚ್ 17 ರಂದು ಈ ಮಸೂದೆಯನ್ನು ಅಂಗೀಕರಿಸಲಾಯಿತು ಮತ್ತು 1920 ರ ಮಾರ್ಚ್ 20 ರಂದು ಗವರ್ನರ್ ಜನರಲ್ ಅವರ ಒಪ್ಪಿಗೆಯೊಂದಿಗೆ 1920 ರ ಆಕ್ಟ್ ಆಗಿ ಮಾರ್ಪಟ್ಟಿತು. 1920 ರ ಜೂನ್ 7 ರಂದು ಐವತ್ತು ಸದಸ್ಯರನ್ನು ಒಳಗೊಂಡು ಔಪಚಾರಿಕವಾಗಿ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಮತ್ತು ಮೊದಲ ವ್ಯವಸ್ಥಾಪಕ ಮಂಡಳಿ ನೇಮಿಸಲಾಯಿತು. ಸರ್ ಮಾಲ್ಕಮ್ ಹೇಲಿ ಅಧ್ಯಕ್ಷರಾಗಿ ಆಯ್ಕೆಯಾದರು.

ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್:

ರೆಡ್ ಕ್ರಾಸ್ ಸೊಸೈಟಿ ಕ್ಯಾನ್ಸರ್, ರಕ್ತಹೀನತೆ, ಮುಂತಾದ ಮಾರಣಾಂತಿಕ ಕಾಯಿಲೆಗಳನ್ನು ಹೇಗೆ ತಡೆಗಟ್ಟುವುದು ಎಂಬುದರ ಬಗ್ಗೆ ವಿಶ್ವದ ಜನರಿಗೆ ಅರಿವು ಮೂಡಿಸುತ್ತದೆ. ರಕ್ತದಾನ ಕ್ಷೇತ್ರದಲ್ಲಿ ರೆಡ್‌ಕ್ರಾಸ್ ಸೊಸೈಟಿ ಪ್ರಮುಖವಾಗಿ ಕಾರ್ಯನಿರ್ವಹಿಸುತ್ತದೆ. ಈ ಸಂಸ್ಥೆ ಪ್ರಪಂಚದಾದ್ಯಂತ ಕಾಲಕಾಲಕ್ಕೆ ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತದೆ ಮತ್ತು ರಕ್ತದಾನದ ಬಗ್ಗೆ ಜನರಿಗೆ ಅರಿವು ಮೂಡಿಸುತ್ತದೆ. ಇದು ಪ್ರತಿವರ್ಷ ದೊಡ್ಡ ಪ್ರಮಾಣದಲ್ಲಿ ರಕ್ತವನ್ನು ಸಂಗ್ರಹಿಸುತ್ತದೆ ಇದರಿಂದ ಅಗತ್ಯ ಸಮಯದಲ್ಲಿ ರಕ್ತದ ಕೊರತೆಯಾಗುವುದಿಲ್ಲ.

ರೆಡ್ ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ಚಳವಳಿಯ 7 ಮೂಲಭೂತ ತತ್ವಗಳು:

  • ಮಾನವೀಯತೆ
  • ನಿಷ್ಪಕ್ಷಪಾತ
  • ತಟಸ್ಥತೆ
  • ಸ್ವಾತಂತ್ರ್ಯ
  • ಸ್ವಯಂಪ್ರೇರಿತ ಸೇವೆ
  • ಐಕ್ಯತೆ
  • ಸಾರ್ವತ್ರಿಕತೆ

ಪ್ರಸ್ತುತ, ವಿಶ್ವದ ಒಟ್ಟು 192 ದೇಶಗಳು ರೆಡ್‌ಕ್ರಾಸ್ ಸೊಸೈಟಿಯೊಂದಿಗೆ ಸಂಪರ್ಕ ಹೊಂದಿವೆ. ಸಂಘಟನೆಯ ಸದಸ್ಯರು ನಿಸ್ವಾರ್ಥವಾಗಿ ಮಾನವ ಸೇವೆಗಾಗಿ ಕೆಲಸ ಮಾಡುತ್ತಾರೆ. ಅವರು ಆಂಬ್ಯುಲೆನ್ಸ್ ಸೇವೆ ಮತ್ತು ಔಷಧಿಗಳನ್ನು ಅಗತ್ಯವಿದ್ದಾಗ ಗ್ರಾಮಗಳು ಮತ್ತು ನಗರಗಳಿಗೆ ಸಾಗಿಸುವ ಕಾರ್ಯ ಮಾಡ್ತಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.