ETV Bharat / bharat

ಕೊರೊನಾಗೆ ಬಲಿಯಾದವರ ಅಂತ್ಯಕ್ರಿಯೆಗೆ ಕಟ್ಟಿಗೆ ಕೊರತೆ: ಗೃಹೋಪಯೋಗಿ ವಸ್ತುಗಳನ್ನು ನೀಡಿದ ಜನತೆ - ಕೊರೊನಾ

ಪೂರ್ವ ದೆಹಲಿಯ ಜಿಲ್ಮಿಲ್ ವಾರ್ಡ್‌ನ ಜ್ವಾಲನಗರದ ಸ್ಮಶಾನದಲ್ಲಿ ಕೊರೊನಾಗೆ ಬಲಿಯಾದವರ ಅಂತ್ಯಕ್ರಿಯೆ ನಡೆಸಲು ಕಟ್ಟಿಗೆಯ ಕೊರತೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಜನರು ತಮ್ಮ ಮನೆಗಳಲ್ಲಿ ಬಳಸದ ಮರದ ವಸ್ತುಗಳನ್ನು ಶವಾಗಾರಕ್ಕೆ ಸಾಗಿಸಿದ್ದಾರೆ.

jwala nagar
ಮೃತದೇಹ ಸುಡಲು ಕಟ್ಟಿಗೆ ಕೊರತೆ
author img

By

Published : Apr 25, 2021, 12:19 PM IST

ನವದೆಹಲಿ: ಕೊರೊನಾದಿಂದ ಸಾವನ್ನಪ್ಪುತ್ತಿರುವ ಜನರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದೆ. ಇನ್ನು ಪೂರ್ವ ದೆಹಲಿಯ ಜಿಲ್ಮಿಲ್ ವಾರ್ಡ್‌ನ ಜ್ವಾಲನಗರ ಶವಾಗಾರದಲ್ಲಿ ಅವ್ಯವಸ್ಥೆ ಉಂಟಾಗಿದ್ದು, ಕೊರೊನಾಗೆ ಬಲಿಯಾದವರ ಅಂತ್ಯಕ್ರಿಯೆ ನಡೆಸಲು ಕಟ್ಟಿಗೆಯ ಕೊರತೆ ಎದುರಾಗಿದೆ. ಮೃತದೇಹಗಳನ್ನು ಸುಡಲು ಕಟ್ಟಿಗೆ ಕೊರತೆ ಎದುರಾದ ಹಿನ್ನೆಲೆಯಲ್ಲಿ ಮನೆಗಳಲ್ಲಿದ್ದ ಕಿಟಕಿ, ಬಾಗಿಲುಗಳು, ಕುರ್ಚಿಗಳನ್ನು ಜನರು ನೀಡಿದ್ದಾರೆ.

ಇನ್ನು ಈ ಬಗ್ಗೆ ಮಾತನಾಡಿದ ಬಿಜೆಪಿ ಮುಖಂಡ ಮತ್ತು ಜಿಲ್ಮಿಲ್ ವಾರ್ಡ್‌ನ ನಿಗಮವೊಂದರ ಮಾಜಿ ಕೌನ್ಸಿಲರ್ ಪಂಕಜ್ ಲುಥ್ರಾ, ಕೊರೊನಾ ಹೆಚ್ಚಾಗುತ್ತಿದೆ. ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇನ್ನು ಶವ ಸುಡಲು ಕಡಿಮೆ ಸ್ಥಳಾವಕಾಶವಿದೆ, ಮರದ ಬಳಕೆ ಹೆಚ್ಚಾಗಿದೆ ಎಂದರು.

ಮೃತದೇಹ ಸುಡಲು ಕಟ್ಟಿಗೆ ಕೊರತೆ

ಏ. 23ರಂದೇ ಜ್ವಾಲಾ ನಗರದ ಸ್ಮಶಾನದಲ್ಲಿ ಶವ ಸುಡಲು ಬಳಸುವ ಕಟ್ಟಿಗೆಗಳು ಮುಗಿದಿದ್ದವು. ಈ ಮಾಹಿತಿ ಪಡೆದ ಜನರು ತಮ್ಮ ಮನೆಗಳಲ್ಲಿ ಬಳಸದ ಮರದ ವಸ್ತುಗಳನ್ನು ಶವಾಗಾರಕ್ಕೆ ಸಾಗಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.