ETV Bharat / bharat

ರಾಮೋಜಿ ಫಿಲಂ ಸಿಟಿಯಲ್ಲಿ ಮಹಿಳಾ ದಿನಾಚರಣೆ ಸಂಭ್ರಮ - ರಾಮೋಜಿ ಸಮೂಹ ಸಂಸ್ಥೆಗಳ ಮಹಿಳಾ ಸಿಬ್ಬಂದಿ

ಬದಲಾದ ಕಾಲಕ್ಕೆ ತಕ್ಕಂತೆ ಮಹಿಳೆಯರು ನಾನಾ ರಂಗದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಮೇಲುಗೈ ಸಾಧಿಸುತ್ತಿದ್ದು, ಪ್ರತಿಯೊಂದು ಕ್ಷೇತ್ರದಲ್ಲೂ ಹೆಸರು ಮಾಡುತ್ತಿದ್ದಾರೆ. ಮಹಿಳೆಯರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿನ ಸಾಧನೆಗಳು ಮತ್ತು ಸಮಾಜಕ್ಕೆ ಅವರು ನೀಡಿರುವ ಕೊಡುಗೆಗಳನ್ನು ಸಂಭ್ರಮಿಸುವ ಮಹತ್ವದ ಹಾಗೂ ವಿಶೇಷವಾದ ಮಹಿಳಾ ದಿನಾಚರಣೆಯನ್ನು ನಿನ್ನೆ ರಾಮೋಜಿ ಫಿಲಂ ಸಿಟಿಯಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು.

womens day
ಮಹಿಳಾ ದಿನಾಚರಣೆ
author img

By

Published : Mar 9, 2023, 10:04 AM IST

Updated : Mar 9, 2023, 11:46 AM IST

ರಾಮೋಜಿ ಫಿಲಂ ಸಿಟಿಯಲ್ಲಿ ನಡೆದ ಮಹಿಳಾ ದಿನಾಚರಣೆ

ರಾಮೋಜಿ ಫಿಲಂ ಸಿಟಿ (ಹೈದರಾಬಾದ್​): ದೇಶಾದ್ಯಂತ ನಿನ್ನೆ ಸಂತಸದಿಂದ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು. ತೆಲಂಗಾಣ ರಾಜ್ಯದಲ್ಲೂ ಸಹ ಮಹಿಳಾ ದಿನಾಚರಣೆಯನ್ನು ಅದ್ಧೂರಿಯಾಗಿ ಸೆಲೆಬ್ರೇಟ್​ ಮಾಡಿದ್ದು, ಹಲವೆಡೆ ಸಚಿವರು, ಜನಪ್ರತಿನಿಧಿಗಳು, ಸಾಧಕಿಯರು ವಿಶೇಷ ದಿನದಲ್ಲಿ ಪಾಲ್ಗೊಂಡು ಯುವತಿಯರನ್ನು ಹುರಿದುಂಬಿಸಿದರು. ಅಷ್ಟೇ ಅಲ್ಲದೆ, ಜನಪ್ರಿಯ ರಾಮೋಜಿ ಫಿಲಂ ಸಿಟಿಯಲ್ಲಿ ಕೂಡ ಅತ್ಯಂತ ಸಡಗರದಿಂದ ವಿಶ್ವ ಮಹಿಳಾ ದಿನ ಆಚರಣೆ ಮಾಡಿದ್ದು, ಸಂಭ್ರಮದಿಂದ ಕೂಡಿತ್ತು.

ರಾಮೋಜಿ ಸಮೂಹ ಸಂಸ್ಥೆಗಳ ಮಹಿಳಾ ಸಿಬ್ಬಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಖತ್​ ಎಂಜಾಯ್​ ಮಾಡಿದರು. ಈ ಬಾರಿ DigitALL: ಲಿಂಗ ಸಮಾನತೆಗಾಗಿ ನಾವೀನ್ಯತೆ ಮತ್ತು ತಂತ್ರಜ್ಞಾನ" ಎಂಬ ಥೀಮ್ ಅಡಿಯಲ್ಲಿ ಆಚರಣೆಗಳು ನಡೆದವು. ಜ್ಯೋತಿ ಬೆಳಗುವುದರೊಂದಿಗೆ ಕಾರ್ಯಕ್ರಮ ಪ್ರಾರಂಭಿಸಲಾಯಿತು. ಮುಖ್ಯ ಅತಿಥಿಗಳಾಗಿ ಐಎಎಸ್ ಅಧಿಕಾರಿ ಸ್ಮಿತಾ ಸಬರ್ವಾಲ್, ‘ಭೂಮಿಕಾ’ ಸ್ತ್ರೀವಾದಿ ಪತ್ರಿಕೆಯ ಸಂಪಾದಕಿ ಕೊಂಡವೀಟಿ ಸತ್ಯವತಿ, ರಾಮೋಜಿ ಫಿಲ್ಮ್ ಸಿಟಿ ಎಂಡಿ ವಿಜಯೇಶ್ವರಿ ಮತ್ತು 'ಈಟಿವಿ ಭಾರತ'ದ ನಿರ್ದೇಶಕಿ ಬೃಹತಿ ಭಾಗವಹಿಸಿದ್ದರು.

ಇದನ್ನೂ ಓದಿ : Women's Day 2023: ಮಕ್ಕಳ ಭವಿಷ್ಯಕ್ಕಾಗಿ ಶಾಲೆಯನ್ನೇ ನಿರ್ಮಿಸಿದ ಗಟ್ಟಿಗಿತ್ತಿಯರು

ಬಳಿಕ ಮಾತನಾಡಿದ ಐಎಎಸ್ ಅಧಿಕಾರಿ ಸ್ಮಿತಾ ಸಬರ್ವಾಲ್, "ತೆಲಂಗಾಣಕ್ಕೆ ಬಂದಾಗ ನನಗೆ ತೆಲುಗು ಸರಿಯಾಗಿ ಮಾತನಾಡಲು ಬರುತ್ತಿರಲಿಲ್ಲ. 'ಈನಾಡು' ಪತ್ರಿಕೆಯಿಂದಾಗಿ ತೆಲುಗು ಭಾಷೆಯನ್ನು ಬೇಗ ಕಲಿಯಲು ಸಾಧ್ಯವಾಯಿತು. ಇಂದಿನ ಧೀಮಂತ ಪತ್ರಿಕೋದ್ಯಮ ಮುಂದಿನ ದಿನಗಳಲ್ಲೂ ಹೀಗೆಯೇ ಮುಂದುವರೆಯಲಿ" ಎಂದು ಶುಭ ಹಾರೈಸಿದರು. ಬಳಿಕ ಮಾತು ಮುಂದುವರೆಸಿ, "ನಾನು ಸ್ಥಳೀಯ ಭಾಷಾ ಪರೀಕ್ಷೆಯಲ್ಲಿ ಮೊದಲು ತೇರ್ಗಡೆ ಹೊಂದಬೇಕಾಗಿತ್ತು. ಇದು ಯುಪಿಎಸ್​​ಸಿ ಪರೀಕ್ಷೆಗಿಂತ ಕಠಿಣವಾಗಿತ್ತು. ಸಹಾಯಕ ಕಲೆಕ್ಟರ್ ಆಗಿ ಕೆಲಸ ಮಾಡುವ ವೇಳೆ ಹಳ್ಳಿಗಳಿಗೆ ಭೇಟಿ ನೀಡುತ್ತಿದ್ದೆ. ಭಾಷೆಯ ತೊಡಕಾಗುತ್ತಿತ್ತು. ಹಾಗಾಗಿ, ದಿನದಲ್ಲಿ ಕನಿಷ್ಠ ಅರ್ಧ ಗಂಟೆ 'ಈನಾಡು' ಪತ್ರಿಕೆ ಓದಲು ಪ್ರಾರಂಭಿಸಿ, ಕೆಲವೊಂದು ಪದಗಳನ್ನು ನೋಟ್​ ಮಾಡಿಕೊಳ್ಳುತ್ತಿದ್ದೆ. ಮನಸ್ಸು ಮಾಡಿದರೆ ಎಲ್ಲದೂ ಸಾಧ್ಯ, ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ಇಂತಹ ಜವಾಬ್ದಾರಿಯ ಅಗತ್ಯವಿದೆ" ಎಂದರು.

ಇದನ್ನೂ ಓದಿ : Google ಪೇಜ್‌ ತೆರೆದರೆ ಸರ್ಪ್ರೈಸ್‌! ಮಹಿಳಾ ದಿನಕ್ಕೆ ಸ್ಪೆಷಲ್ ಡೂಡಲ್

ವೇದಿಕೆ ಕಾರ್ಯಕ್ರಮದ ಬಳಿಕ ಮುಖ್ಯ ಅತಿಥಿಗಳು ಸಂಗೀತ, ನೃತ್ಯ, ಫ್ಯಾಷನ್ ಶೋ ಹಾಗೂ ರಂಗೋಲಿ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು. ಜೊತೆಗೆ, ಕೇಕ್ ಕತ್ತರಿಸುವ ಮೂಲಕ ಸಂಭ್ರಮಾಚರಣೆಯನ್ನು ಮತ್ತಷ್ಟು ಸಿಹಿಗೊಳಿಸಲಾಯಿತು. ಕೋವಿಡ್ -19 ವೈರಸ್​ ಬಳಿಕ ರಾಮೋಜಿ ಫಿಲಂ ಸಿಟಿಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಅದ್ಧೂರಿಯಾಗಿ ಆಯೋಜಿಸಿದ್ದಕ್ಕೆ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಮಹಿಳಾ ಶಕ್ತಿ ಪ್ರದರ್ಶಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಬಾಸ್ಕೋ ತಂಡ ಪ್ರದರ್ಶಿಸಿದ ನೃತ್ಯಗಳು ಆಕರ್ಷಕವಾಗಿದ್ದವು.

ಇದನ್ನೂ ಓದಿ: 20 ಚಕ್ರದ ವಾಹನವನ್ನೂ ಲೀಲಾಜಾಲವಾಗಿ ಓಡಿಸಬಲ್ಲರು ಹಾವೇರಿಯ ಶೋಭಾ ತೋಟದ!

Last Updated : Mar 9, 2023, 11:46 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.