ಚೆನ್ನೈ: ಮಹಿಳಾ ಎಸ್‌ಪಿಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಸಿಐಡಿ ಪ್ರಾಥಮಿಕ ತನಿಖಾ ವರದಿಯನ್ನು ಚೆನ್ನೈ ಹೈಕೋರ್ಟ್‌ಗೆ ಸಲ್ಲಿಸಿದೆ.
ಫೆಬ್ರವರಿಯಲ್ಲಿ ಮಹಿಳಾ ಎಸ್‌ಪಿ ವಿಶೇಷ ಡಿಜಿಪಿಯಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೇನೆ ಎಂದು ತಮಿಳುನಾಡಿನ ಡಿಜಿಪಿ ತ್ರಿಪಾಠಿ ಅವರಿಗೆ ದೂರು ನೀಡಿದ್ದರು. ದೂರಿನ ಬಗ್ಗೆ ಸಿಬಿಸಿಐಡಿ ತನಿಖೆಗೆ ಡಿಜಿಪಿ ತ್ರಿಪಾಠಿ ಆದೇಶಿಸಿದ್ದರು.
ಅದರಂತೆ ಸಿಬಿಸಿಐಡಿ ಪ್ರಕರಣದ ತನಿಖೆ ನಡೆಸುತ್ತಿದೆ. ಶನಿವಾರ ಸಿಬಿಸಿಐಡಿ ವಿಶೇಷ ಡಿಜಿಪಿಯನ್ನು ವಿಚಾರಣೆಗೆ ಹಾಜರುಪಡಿಸಿತ್ತು. ತದನಂತರ ಇಂದು ಸಿಬಿಸಿಐಡಿ ವಿಶೇಷ ಡಿಜಿಪಿಯ ತನಿಖೆಯ ಪ್ರಾಥಮಿಕ ವರದಿಯನ್ನು ಸಲ್ಲಿಕೆ ಮಾಡಿದೆ.