ETV Bharat / bharat

Farmer Protest: ಪ್ರತಿಭಟನೆಯಲ್ಲಿ ಭಾಗಿಯಾಗಲು ಜಂತರ್​ಮಂತರ್​ನತ್ತ ಮಹಿಳಾ ಮಣಿಗಳ ದಂಡು! - ‘ಪ್ರಧಾನಿ ಮೋದಿ

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾನೂನುಗಳ ವಿರುದ್ಧ ಕಳೆದ 9 ತಿಂಗಳಿಂದ ಗಡಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆಯಲ್ಲಿ ಭಾಗಿಯಾಗಲು ಇಂದು ರೈತ ಮಹಿಳೆಯರೂ ತೆರಳಿದ್ದಾರೆ.

Women protestors
Women protestors
author img

By

Published : Jul 26, 2021, 2:17 PM IST

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆಗಳ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಲು ಜಂತರ್​ಮಂತರ್​ನತ್ತ ಮಹಿಳಾ ಪ್ರತಿಭಟನಾಕಾರರು ತೆರಳುತ್ತಿದ್ದಾರೆ. ಮಹಿಳಾ ಸ್ವತಂತ್ರ ಕಿಸಾನ್​ ಸಂಸದ್​ ನಡೆಸುವುದಾಗಿ ಅವರು ಹೇಳಿದ್ದಾರೆ.

ಸಂಸತ್ತಿನಲ್ಲಿ ಅಂಗೀಕರಿಸಲಾಗಿರುವ ಮೂರು ಕೃಷಿ ಕಾನೂನುಗಳ ಕುರಿತು ಪ್ರತಿಕ್ರಿಯಿಸಿರುವ ಮಹಿಳಾ ಪ್ರತಿಭಟನಾಕಾರರೊಬ್ಬರು, ಕೇಂದ್ರ ಸರ್ಕಾರವು ರೈತ ವಿರೋಧಿ ಕಾನೂನುಗಳನ್ನು ಜಾರಿಗೆ ತಂದಿದೆ ಎಂದು ಕಿಡಿಕಾರಿದರು.

ಇತ್ತೀಚಿನ ದಿನಗಳಲ್ಲಿ ಮಹಿಳೆಯರು, ಯುವಕರು, ವಿದ್ಯಾರ್ಥಿಗಳು, ಕಾರ್ಮಿಕರು, ರೈತರು ಸೇರಿ ಎಲ್ಲ ಕ್ಷೇತ್ರಗಳ ಜನತೆಯೂ ಕೇಂದ್ರ ಸರ್ಕಾರವನ್ನು ಪ್ರಶ್ನಿಸುತ್ತಿದ್ದಾರೆ. ನಮ್ಮ ರಾಷ್ಟ್ರದ ಅಭಿವೃದ್ಧಿ ದೃಷ್ಟಿಯಿಂದ ನಾವು ಈ ಕರಾಳ ಕಾನೂನುಗಳನ್ನು ಸಹಿಸುವುದಿಲ್ಲ ಎಂದರು.

ಇದನ್ನೂ ಓದಿ: ಜಂತರ್​ ಮಂತರ್​ನಲ್ಲಿ ಅನ್ನದಾತರ ಹೋರಾಟ.. ಅಧಿವೇಶನಕ್ಕೆ ತಟ್ಟುತ್ತಾ ಪ್ರತಿಭಟನೆ ಬಿಸಿ?

ಕೇಂದ್ರದ ಕೃಷಿ ಕಾನೂನುಗಳನ್ನು ವಿರೋಧಿಸಿ ಹರಿಯಾಣದ ಜಿಂದ್ ಜಿಲ್ಲಾ ರೈತರು ಸ್ವಾತಂತ್ರ್ಯ ದಿನಾಚರಣೆಯಂದು ಟ್ರ್ಯಾಕ್ಟರ್​ ರ‍್ಯಾಲಿ ಆಯೋಜಿಸಲಿದ್ದಾರೆ ಎಂದು ರೈತ ಮುಖಂಡರಾದ ಬಿಜೇಂದ್ರ ಸಿಂಧು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.