ETV Bharat / bharat

ಜಾರ್ಖಂಡ್​ನ ಸ್ತ್ರೀಶಕ್ತಿ ದುರ್ಗಾದೇವಿ ದೇವಸ್ಥಾನಕ್ಕೆ ಮಹಿಳೆಯರಿಗಿಲ್ಲ ಎಂಟ್ರಿ.. ದೂರದಿಂದಲೇ ಪೂಜೆ - ಸ್ತ್ರೀ ಶಕ್ತಿಯಾದ ದುರ್ಗಾದೇವಿ

ಮಹಿಳೆಯರೂ ಸಹ ಈ ನಿಯಮ ವಿರೋಧಿಸದೇ, ದೂರದಿಂದ ಪೂಜೆ ಮಾಡುತ್ತಾರೆ. ದೂರದಿಂದಲೇ ಪೂಜೆ ಮಾಡಿದರೂ ತಮ್ಮ ಇಷ್ಟಾರ್ಥಗಳು ಈಡೇರುತ್ತವೆ ಎಂದು ಅವರು ನಂಬಿದ್ದಾರೆ.

Women not allowed Jharkhand Dargadevi temple
ಜಾರ್ಖಂಡ್​ನ ಸ್ತ್ರೀಶಕ್ತಿ ದರ್ಗಾದೇವಿ ದೇವಸ್ಥಾನಕ್ಕೆ ಮಹಿಳೆಯರಿಗಿಲ್ಲ ಪ್ರವೇಶ
author img

By

Published : Sep 30, 2022, 12:33 PM IST

Updated : Sep 30, 2022, 3:56 PM IST

ಬೊಕಾರೊ (ಜಾರ್ಖಂಡ್): ನಾಡಿನೆಲ್ಲೆಡೆ ದೇವಿಯರ ಹಬ್ಬ ನವರಾತ್ರಿ ಆಚರಿಸಲಾಗುತ್ತಿದೆ. ಆದರೆ, ಜಾರ್ಖಂಡ್​ನ ಬೊಕಾರೊದ ಕಸ್ಮಾರ್​ನಲ್ಲಿರುವ ಮಂಗಳ ಚಂಡಿ ದೇವಸ್ಥಾನ, ಸ್ತ್ರೀ ಶಕ್ತಿಯಾದ ದುರ್ಗಾದೇವಿಯನ್ನು ಆರಾಧಿಸುವ ದೇವಾಲಯಕ್ಕೆ ಮಹಿಳೆಯರಿಗೇ ಪ್ರವೇಶ ನಿಷೇಧಿಸಲಾಗಿದೆ. ಈ ದೇವಸ್ಥಾನಕ್ಕೆ ಪುರುಷರು ಮಾತ್ರ ಪ್ರವೇಶಿಸಬಹುದು. ಇಲ್ಲಿ ಮಹಿಳೆಯರು ದೇವಸ್ಥಾನದಿಂದ 100 ಮೀಟರ್​ ದೂರದಲ್ಲಿ ನಿಂತು ದೇವಿ ಪೂಜಿಸುತ್ತಾರೆ

ಅರ್ಚಕ ವಿವೇಕ್​ ಕುಮಾರ್​ ಪ್ರಕಾರ, ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶವನ್ನು ತಡೆಯುವ ಸಂಪ್ರದಾಯ ಹಲವು ದಶಕಗಳಿಂದ ನಡೆದುಕೊಂಡು ಬಂದಿದೆ. ಮಹಿಳೆಯರೂ ಸಹ ಈ ನಿಯಮವನ್ನು ವಿರೋಧಿಸದೇ, ದೂರದಿಂದ ಪೂಜೆ ಮಾಡುತ್ತಾರೆ. ದೂರದಿಂದಲೇ ಪೂಜೆ ಮಾಡಿದರೂ ತಮ್ಮ ಇಷ್ಟಾರ್ಥಗಳು ಈಡೇರುತ್ತವೆ ಎಂದು ಅವರು ನಂಬಿದ್ದಾರೆ. ಮಹಿಳೆಯರು ಅರ್ಪಿಸುವ ಕಾಣಿಕೆಗಳನ್ನು ಪುರುಷರು ಅರ್ಪಿಸುತ್ತಾರೆ.

ಜಾರ್ಖಂಡ್​ನ ಸ್ತ್ರೀಶಕ್ತಿ ದರ್ಗಾದೇವಿ ದೇವಸ್ಥಾನಕ್ಕೆ ಮಹಿಳೆಯರಿಗಿಲ್ಲ ಪ್ರವೇಶ

ಕೇರಳದ ಶಬರಿಮಲೆ ಅಯ್ಯಪ್ಪ ದೇವಾಲಯದಲ್ಲಿ 12ರಿಂದ ವರ್ಷದ ಮಹಿಳೆಯರಿಗೆ ದೇವಸ್ಥಾನದ ಒಳಗೆ ಪ್ರವೇಶವಿಲ್ಲ. ಶಬರಿಮಲೆಯ ಕಾರಣವೇ ಬೇರೆ. ಆದರೆ ಇಲ್ಲಿನ ಆಚರಣೆಗೆ ನಿಖರವಾದ ಕಾರಣ ಗೊತ್ತಿಲ್ಲವಾದರೂ, ಸ್ಥಳೀಯರ ಪ್ರಕಾರ, ಹಲವು ವರ್ಷಗಳ ಹಿಂದೆ ಮಹಿಳೆಯೊಬ್ಬರು ದೇವಾಲಯಕ್ಕೆ ಪ್ರವೇಶಿಸಿ ಮಾನಸಿಕ ಸಮತೋಲನವನ್ನು ಕಳೆದುಕೊಂಡಿದ್ದರಂತೆ. ನಂತರದಲ್ಲಿ ಈ ನಿಷೇಧದ ಬಗ್ಗೆ ಜನರು ಹೆಚ್ಚು ತಲೆಕೆಡಿಸಿಕೊಳ್ಳದೇ ಅದನ್ನು ಒಪ್ಪಿಕೊಂಡೇ ಪ್ರತೀವರ್ಷ ನೂರಾರು ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಪುರುಷರು ದೇವಸ್ಥಾನದ ಒಳಗೆ ಹೋದರೆ, ಮಹಿಳೆಯರು ದೇವಸ್ಥಾನ ಹೊರಗೆ ನಿಂತು ಪ್ರಾರ್ಥಿಸುತ್ತಾರೆ.

ದೇವಿ ಬಯಲು ಪ್ರದೇಶದಲ್ಲಿ ಇರಲು ಬಯಸುತ್ತಾಳೆ. ಹಾಗಾಗಿ ದೇವಿಗೆ ಪ್ರತ್ಯೇಕವಾಗಿ ಯಾವುದೇ ದೇವಾಲಯವನ್ನು ನಿರ್ಮಿಸಿಲ್ಲ. ಈ ಆಚರಣೆ ಯಾವಾಗಿನಿಂದ ನಡೆದುಕೊಂಡು ಬರುತ್ತಿದೆ ಎಂಬುದರ ಬಗ್ಗೆ ನಮಗೆ ಮಾಹಿತಿ ಇಲ್ಲ. ನಾವು ಇದನ್ನು ಧಾರ್ಮಿಕವಾಗಿ ಆಚರಿಸಿಕೊಂಡು ಬರುತ್ತಿದ್ದೇವೆ. ಈ ದುರ್ಗಾದೇವಿ ಬಹಳ ಶಕ್ತಿಶಾಲಿ ಹಾಗಾಗಿ ಪುರುಷರು ಮಾತ್ರ ದೇವಾಲಯದ ಒಳಗೆ ಪ್ರವೇಶಿಸಿ ಪೂಜಿಸುತ್ತಾರೆ ಮಹಿಳೆಯರು ದೂರದಲ್ಲೇ ನಿಂತು ತಾಯಿಯನ್ನು ಬೇಡಿಕೊಳ್ಳುತ್ತಾರೆ ಎನ್ನುತ್ತಾರೆ ಅರ್ಚಕರು.

ಈ ದೇವಾಲಯವು ಎಲ್ಲರ ಇಷ್ಟಾರ್ಥಗಳನ್ನು ಪೂರೈಸುತ್ತದೆ ಎಂದು ಹೇಳಲಾಗುತ್ತದೆ. ಪ್ರತಿ ಮಂಗಳವಾರ ಜನರು ಈ ದೇವಾಲಯಕ್ಕೆ ಪ್ರಾರ್ಥನೆ ಸಲ್ಲಿಸಲು ಬರುತ್ತಾರೆ. ಯಜ್ಞದಿಂದ ಬರುವ ಅರ್ಪಣೆಗಳನ್ನು ಸಹ ಪುರುಷರಿಗೆ ಮಾತ್ರ ನೀಡಲಾಗುತ್ತದೆ. ಮಹಿಳೆಯರು ಮೇಲೆ ದೇವಸ್ಥಾನಕ್ಕೆ ಪ್ರವೇಶಿಸದಂತೆ ನಿರ್ಬಂಧ ಹೇರಿದ್ದರೂ ಮಹಿಳೆಯರು ಇದನ್ನು ವಿರೋಧಿಸಿಲ್ಲ. ದೂರದಲ್ಲೇ ನಿಗದಿತ ಸ್ಥಳದಲ್ಲಿ ನಿಂತು ಪೂಜೆ ಮಾಡುವುದರಲ್ಲಿ ಅವರಿಗೆ ಯಾವುದೇ ಅಸಮಾಧಾನ ಇಲ್ಲ ಎಂದು ಸ್ಥಳೀಯ ನಿವಾಸಿ ಗೋಪಾಲ್ ಝಾ ಹೇಳಿದರು.

ನಾನು ನಿಯಮಿತವಾಗಿ ದೇವಸ್ಥಾನಕ್ಕೆ ಭೇಟಿ ನೀಡುತ್ತೇನೆ ಮತ್ತು ದೂರದಿಂದಲೇ ಪೂಜೆ ಮಾಡುತ್ತೇನೆ. ಆದರೆ ಯಾವುತ್ತೂ ದೇವಸ್ಥಾನದ ಆವರಣವನ್ನು ಪ್ರವೇಶಿಸಿಲ್ಲ. ಮಹಿಳೆಯರು ದೇವಸ್ಥಾನದ ಒಳಗೆ ಪ್ರವೇಶಿಸಬಾರದು ಎಂದಿದೆ. ಇದು ವರ್ಷಗಳಿಂದ ನಡೆದುಕೊಂಡು ಬಂದಿರುವ ಆಚರಣೆ. ತಾಯಿಯನ್ನು ದೂರದಿಂದ ಪ್ರಾರ್ಥಿಸಿದರೂ ಅವಳು ನನ್ನ ಪ್ರಾರ್ಥನೆಯನ್ನು ಆಲಿಸುತ್ತಾಳೆ. ನನ್ನ ಇಷ್ಟಾರ್ಥಗಳನ್ನು ಪೂರೈಸುತ್ತಾಳೆ ಎನ್ನುವ ನಂಬಿಕೆ ನನಗಿದೆ ಎಂದು ಮಹಿಳಾ ಭಕ್ತೆ ನೀಲಂ ಜೈಸ್ವಾಲ್ ಈಟಿವಿ ಭಾರತ್​ಗೆ ತಿಳಿಸಿದರು.

ಹರಿಯಾಣ ರಾಜ್ಯದ ಪೆಹೋವಾ ಟೌನ್‌ಶಿಪ್‌ನಲ್ಲಿರುವ ಕಾರ್ತಿಕೇಯ ದೇವಸ್ಥಾನವು 5ನೇ ಶತಮಾನದಷ್ಟು ಹಿಂದಿನ ಪುರಾತನ ದೇವಾಯಲ. ದೇವಾಲಯಕ್ಕೆ ಪ್ರವೇಶಿಸುವ ಮಹಿಳೆಯರನ್ನು ಆಶೀರ್ವದಿಸುವ ಬದಲು ಭಗವಂತನು ಶಪಿಸುತ್ತಾನೆ ಎಂಬ ನಂಬಿಕೆಯಿಂದ ಮಹಿಳೆಯರಿಗೆ ದೇವಾಲಯ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ಒಕಿನೋಶಿಮಾ ದ್ವೀಪ ಮತ್ತು ಜಪಾನ್‌ನ ಮೌಂಟ್ ಓಮಿನ್​ನಲ್ಲಿ ಸಹ ಇದೇ ರೀತಿಯ ಆಚರಣೆ ಅನುಸರಿಸಲಾಗುತ್ತದೆ.

ಇದನ್ನೂ ಓದಿ: ನವರಾತ್ರಿಯಲ್ಲಿ ಶಕ್ತಿದೇವತೆ ಪೂಜೆ ಏಕೆ ಮಾಡುತ್ತಾರೆ: ಚಾಮುಂಡೇಶ್ವರಿ ದೇವಾಲಯದ ಪ್ರಧಾನ ಅರ್ಚಕರ ವಿಶೇಷ ಸಂದರ್ಶನ

Last Updated : Sep 30, 2022, 3:56 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.