ETV Bharat / bharat

ಮಾಟಗಾತಿ ಎಂದು ಶಂಕಿಸಿ ಮಕ್ಕಳೆದುರೇ ಮಹಿಳೆಗೆ ಬೆಂಕಿ ಹಚ್ಚಿ ಜೀವಂತವಾಗಿ ದಹಿಸಿದ ಕ್ರೂರಿಗಳು!

ಅಸ್ಸೋಂನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಮಹಿಳೆಯನ್ನು ಮಾಟಗಾತಿ ಎಂದು ಶಂಕಿಸಿ ಆಕೆಯ ಮಕ್ಕಳೆದುರೇ ಜೀವಂತವಾಗಿ ಸುಟ್ಟು ಹಾಕಲಾಗಿದೆ.

ಮಾಟಗಾತಿ ಶಂಕಿಸಿ ಮಹಿಳೆ ಹತ್ಯೆ
ಮಾಟಗಾತಿ ಶಂಕಿಸಿ ಮಹಿಳೆ ಹತ್ಯೆ
author img

By ETV Bharat Karnataka Team

Published : Dec 26, 2023, 7:22 AM IST

ತೇಜ್‌ಪುರ (ಅಸ್ಸೋಂ) : ವಿಜ್ಞಾನ, ತಂತ್ರಜ್ಞಾನ ಶಿಕ್ಷಣದಲ್ಲಿ ಎಷ್ಟೇ ಪ್ರಗತಿ ಸಾಧಿಸಿದರೂ, ಕೆಲವು ಮೂಢನಂಬಿಕೆಗಳು, ಆಚರಣೆಗಳಿಗೆ ನಾವು ಇನ್ನೂ ದಾಸರು. ಇದು ಕೆಲವೊಮ್ಮೆ ಪ್ರಾಣಕ್ಕೂ ಕುತ್ತು ತರುತ್ತದೆ. ಇಂಥದ್ದೇ ಒಂದು ಘಟನೆ ಅಸ್ಸೋಂನ ತೇಜ್​ಪುರದಲ್ಲಿ ಭಾನುವಾರ ನಡೆದಿದೆ. ಮಾಟಗಾತಿ ಎಂದು ಶಂಕಿಸಿ ಮಹಿಳೆಯನ್ನು ತನ್ನ ಇಬ್ಬರು ಮಕ್ಕಳ ಕಣ್ಣೆದುರೇ ಬೆಂಕಿ ಹಚ್ಚಿ ಜೀವಂತವಾಗಿ ದಹಿಸಲಾಗಿದೆ.

ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವುದು ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ನಾಲ್ವರನ್ನು ಬಂಧಿಸಿದ್ದಾರೆ. ಇನ್ನಿಬ್ಬರು ತಲೆಮರೆಸಿಕೊಂಡಿದ್ದಾರೆ. ವೈಯಕ್ತಿಕ ದ್ವೇಷವೂ ಇದರ ಹಿಂದಿದೆ ಎಂದು ಹೇಳಲಾಗಿದ್ದು, ತನಿಖೆ ನಡೆಯುತ್ತಿದೆ.

ಘಟನೆಯ ಪೂರ್ಣ ವಿವರ: ತೇಜ್‌ಪುರ ಬಳಿಯ ಬನ್ಸ್‌ಬರಿ ಗ್ರಾಮದ ನಿವಾಸಿಯಾದ ರಾಮ್ ಕಟಿ ಎಂಬುವರ ಪತ್ನಿ ಸಂಗೀತಾ ಕಟಿ (30) ಕ್ರೂರವಾಗಿ ಹತ್ಯೆಯಾದ ಮಹಿಳೆ ಎಂದು ಗುರುತಿಸಲಾಗಿದೆ. ಭಾನುವಾರ ರಾತ್ರಿ 10 ಗಂಟೆ ಸುಮಾರಿನಲ್ಲಿ ನೆರೆಹೊರೆಯ ನಿವಾಸಿಯಾದ ಸೂರಜ್ ಬಾಗ್ವಾ ಅವರ ಕುಟುಂಬವು, ಇನ್ನೂ ನಾಲ್ವರ ನೆರವಿನಿಂದ ಮಹಿಳೆಯ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ. ಹರಿತವಾದ ಆಯುಧದಿಂದ ಆಕೆಯ ಮೇಲೆ ದಾಳಿ ಮಾಡಲಾಗಿದೆ. ಬಳಿಕ ಜೀವಂತವಾಗಿ ಬೆಂಕಿ ಹಚ್ಚಿ ಸುಟ್ಟಿದ್ದಾರೆ.

ಈ ವೇಳೆ, ಪತಿ ಮನೆಯಲ್ಲಿ ಇರಲಿಲ್ಲ ಎಂದು ಹೇಳಲಾಗಿದೆ. ಇಬ್ಬರು ಪುಟ್ಟ ಮಕ್ಕಳ ಕಣ್ಣೆದುರೇ ಮಹಿಳೆಯ ಮೇಲೆ ದಾಳಿ ಮಾಡಿ ದಹಿಸಲಾಗಿದೆ. ಈ ಘಟನೆ ಇಡೀ ಪ್ರದೇಶದಲ್ಲಿ ಸಂಚಲನ ಉಂಟು ಮಾಡಿದೆ. ಮಹಿಳೆಯನ್ನು ಮಾಟ ಮಂತ್ರ ಮಾಡುತ್ತಿದ್ದಳು ಎಂಬ ಆರೋಪವಿತ್ತು. ಈ ಶಂಕೆಯ ಆಧಾರದ ಮೇಲೆ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ನಾಲ್ವರು ಆರೋಪಿಗಳ ಬಂಧನ: ಘಟನೆಯ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು, ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಅಜಯ್ ಸಂಘರ್, ಟಿಂಕೋ ಮಲ್ಹಾರ್ ಮತ್ತು ಸೂರ್ಯ ಬಗ್ವಾರ್ ಎಂದು ಗುರುತಿಸಲಾಗಿದೆ. ಇನ್ನೊಬ್ಬಾತನ ಹೆಸರು ತಿಳಿದು ಬಂದಿಲ್ಲ. ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಶೋಧ ನಡೆಸಲಾಗುತ್ತಿದೆ ಎಂದು ಸೋನಿತ್‌ಪುರದ ಪೊಲೀಸ್ ವರಿಷ್ಠಾಧಿಕಾರಿ ಮಧುರಿಮಾ ದಾಸ್ ತಿಳಿಸಿದ್ದಾರೆ.

ಈ ಭೀಕರ ಘಟನೆಯು ವೈಯಕ್ತಿಕ ದ್ವೇಷ ಹಿನ್ನೆಲೆಯನ್ನೂ ಹೊಂದಿದೆ ಎಂದು ಶಂಕಿಸಲಾಗಿದೆ. ಏತನ್ಮಧ್ಯೆ, ಮಾಟಮಂತ್ರದಂತಹ ಮೂಢನಂಬಿಕೆಗಳು ಈ ಪ್ರದೇಶದಲ್ಲಿ ಜಾರಿಯಲ್ಲಿವೆ. ಈ ಬಗ್ಗೆ ಜಾಗೃತಿ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಈ ಬಗ್ಗೆ ಹೆಚ್ಚಿನ ಪ್ರಚಾರ ನಡೆಯುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಇದನ್ನೂ ಓದಿ: ಅಪಘಾತಕ್ಕೀಡಾಗಿ ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದ ತಂದೆ, ಮಗುವಿನ ಪ್ರಾಣ ಉಳಿಸಿದ ವೈದ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.