ETV Bharat / bharat

ಮಕ್ಕಳ ಎದುರೇ ಮಹಿಳೆ ಮೇಲೆ ಅತ್ಯಾಚಾರ.. ಪೊಲೀಸ್​ ಹೆಡ್​ ಕಾನ್ಸ್​ಟೇಬಲ್​ ಮಗನಿಂದ ಕೃತ್ಯ! - ಮಕ್ಕಳ ಎದುರೇ ಮಹಿಳೆ ಮೇಲೆ ರೇಪ್​

ಒಂಟಿಯಾಗಿದ್ದ ಮಹಿಳೆಯೊಬ್ಬಳ ಮೇಲೆ ಕಾಮುಕನೊಬ್ಬ ತಡರಾತ್ರಿ ಅತ್ಯಾಚಾರವೆಸಗಿರುವ ಘಟನೆ ಆಂಧ್ರಪ್ರದೇಶದ ವಿಜಯನಗರಂನಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದೆ.

WOMAN RAPED INFRONT OF HER CHILDREN
WOMAN RAPED INFRONT OF HER CHILDREN
author img

By

Published : May 4, 2022, 3:10 PM IST

Updated : May 5, 2022, 11:27 AM IST

ವಿಜಯನಗರಂ (ಆಂಧ್ರಪ್ರದೇಶ): ಟೀ ಅಂಗಡಿಯೊಂದರಲ್ಲಿ ಒಂಟಿಯಾಗಿ ಜೀವನ ನಡೆಸುತ್ತಿದ್ದ ಮಹಿಳೆ ಮೇಲೆ ಮಕ್ಕಳ ಎದುರೇ ಕಾಮುಕನೊಬ್ಬ ಅತ್ಯಾಚಾರವೆಸಗಿದ್ದಾನೆ. ಆಂಧ್ರಪ್ರದೇಶದ ವಿಜಯನಗರಂನಲ್ಲಿ ಈ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ. ಕೃತ್ಯ ಎಸಗಿರುವ ವ್ಯಕ್ತಿಯನ್ನ ಹೆಡ್​ ಕಾನ್ಸ್​ಟೇಬಲ್​ ಮಗ ಎಂಬುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.

ಗಂಡನೊಂದಿಗೆ ಮನಸ್ತಾಪವಾಗಿದ್ದರಿಂದ ಮಹಿಳೆಯೊಬ್ಬಳು ತನ್ನ ಮಕ್ಕಳೊಂದಿಗೆ ಪ್ರತ್ಯೇಕವಾಗಿ ವಾಸ ಮಾಡ್ತಿದ್ದು, ಟೀ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು. ಅನಾರೋಗ್ಯದಿಂದ ಬಳಲುತ್ತಿದ್ದ ಸೋದರ ಸಂಬಂಧಿ ಭೇಟಿ ಮಾಡಲು ಮಹಿಳೆ ವಿಶಾಖಪಟ್ಟಣಂಗೆ ತೆರಳಿದ್ದಳು. ಅಲ್ಲಿಂದ ರಾತ್ರಿ 9:30ಕ್ಕೆ ವಿಜಯನಗರಂಗೆ ವಾಪಸ್​ ಆಗಿದ್ದಾಳೆ. ಈ ವೇಳೆ, ಪಾನಮತ್ತನಾದ 19 ವರ್ಷದ ಚೆರ್ರಿ(ಪೊಲೀಸ್ ಹೆಡ್​ಕಾನ್ಸ್​ಟೇಬಲ್​ ಮಗ) ಆಕೆಯ ಮನೆಯೊಳಗೆ ನುಗ್ಗಿ ಮಕ್ಕಳ ಎದುರೇ ಅತ್ಯಾಚಾರವೆಸಗಿದ್ದಾನೆ. ಇದರ ಬೆನ್ನಲ್ಲೇ ಘಟನಾ ಸ್ಥಳದಿಂದ ಪರಾರಿಯಾಗಿದ್ದಾನೆ.

ಸಂತ್ರಸ್ತೆಯ ಸಹೋದರಿ ಅವಳನ್ನ ಹಾಗೂ ಮಕ್ಕಳನ್ನ ತನ್ನ ಮನೆಗೆ ಕರೆದೊಯ್ದಿದ್ದಾಳೆ. ಆಗ ಅಲ್ಲಿಗೆ ತೆರಳಿರುವ ಚೆರ್ರಿ, ಆಕೆಗೆ ಬೆದರಿಕೆ ಹಾಕಿ, ಮನೆಯಿಂದ ಹೊರಬರುವಂತೆ ತಿಳಿಸಿದ್ದಾನೆ. ಗಾಬರಿಗೊಂಡ ಮಹಿಳೆ ತನ್ನ ಮಕ್ಕಳು ಹಾಗೂ ಸಹೋದರಿಯನ್ನ ಕೊಠಡಿಯಲ್ಲಿ ಕೂಡಿ ಹಾಕಿ ಬಾಗಿಲು ಹಾಕಿಕೊಂಡಿದ್ದಾಳೆ. ಈ ವೇಳೆ, ಚೆರ್ರಿ ಹೊರಗಿನಿಂದ ಬಾಗಿಲು ಬಡಿಯುತ್ತಿರುವಾಗಲೇ ತಾನು ಕೆಲಸ ಮಾಡ್ತಿದ್ದ ಟೀ ಅಂಗಡಿ ಮಾಲೀಕನಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾಳೆ. ಬಳಿಕ ಕಾಮುಕ ಅಲ್ಲಿಂದ ಪರಾರಿಯಾಗಿದ್ದಾನೆ.

ಸೋಮವಾರ ರಾತ್ರಿ 11:30ರಿಂದ ಬೆಳಗಿನ ಜಾವ 3:30ರವರೆಗೆ ಈ ಘಟನೆ ನಡೆದಿದ್ದು, ಮಂಗಳವಾರ ಬೆಳಗ್ಗೆ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾಳೆ. ಇದರ ಬೆನ್ನಲ್ಲೇ ಮಹಿಳೆಯನ್ನ ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ವಿಜಯನಗರಂ ಮಹಿಳಾ ಅಧ್ಯಕ್ಷೆ ಸುವ್ವಾಡ ವನಜಾಕ್ಷಿ ಹಾಗೂ ನಗರಾಧ್ಯಕ್ಷೆ ಪಿ. ಸೂರ್ಯಕುಮಾರಿ ಪ್ರತಿಕ್ರಿಯೆ ನೀಡಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

Last Updated : May 5, 2022, 11:27 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.