ಬಹ್ರೈಚ್( ಉತ್ತರ ಪ್ರದೇಶ): ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಆರು ವರ್ಷದ ಬಾಲಕಿಯ ಮೇಲೆ ಚಿರತೆವೊಂದು ದಾಳಿ ಮಾಡಿದ್ದು, ಈ ವೇಳೆ ರಕ್ಷಿಸಲು ಮುಂದಾದ ತಾಯಿ ಅದರೊಂದಿಗೆ ಹೋರಾಡಿರುವ ಘಟನೆ ಉತ್ತರಪ್ರದೇಶದ ಬಹ್ರೈಚ್ನಲ್ಲಿ ನಡೆದಿದೆ.
ಬಾಲಕಿ ಮನೆಯ ಮುಂದಿನ ಅಂಗಳದಲ್ಲಿ ಅಟವಾಡುತ್ತಿದ್ದ ವೇಳೆ ಏಕಾಏಕಿಯಾಗಿ ಚಿರತೆ ದಾಳಿ ಮಾಡಿದೆ. ಈ ವೇಳೆ ಆಕೆ ಕಿರುಚಾಡಿದ್ದು, ತಕ್ಷಣವೇ ಹೊರ ಬಂದಿರುವ ತಾಯಿ ದೊಣ್ಣೆಯಿಂದ ಅದರ ಮೇಲೆ ದಾಳಿ ಮಾಡಿದ್ದಾಳೆ. ಬೆನ್ನಲ್ಲೇ ಅದು ಸ್ಥಳದಿಂದ ಪರಾರಿಯಾಗಿದೆ.
ಇದನ್ನೂ ಓದಿರಿ: ಹೈದರಾಬಾದ್ಗೆ ಬಂದ ಪ್ರಧಾನಿ: ಬರಮಾಡಿಕೊಳ್ಳಲು ಹೋಗದ ಸಿಎಂ ಕೆಸಿಆರ್! ಕಾರಣ
ಚಿರತೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿರುವ ಬಾಲಕಿಯನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಬಾಲಕಿ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಅರಣ್ಯ ಅಧಿಕಾರಿ ರಶೀದ್ ಜಮೋಲ್ ಸೇರಿದಂತೆ ವಿವಿಧ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾಗಿ ತಿಳಿದು ಬಂದಿದೆ.
ಕಾಜಲ್ ತಾಯಿ ರೀನಾ ಮನೆಯೊಳಗೆ ಇದ್ದಾಗ ಚಿರತೆ ಬಾಲಕಿ ಮೇಲೆ ದಾಳಿ ನಡೆಸಿ, ಎಳೆದೊಯ್ಯಲು ಯತ್ನಿಸಿದೆ. ಈ ವೇಳೆ ದೊಣ್ಣೆಯಿಂದ ಅದರ ಮೇಲೆ ಹಲ್ಲೆ ನಡೆಸಲಾಗಿದೆ.