ಹೈದರಾಬಾದ್: ಪತಿ ತನ್ನ ಇಚ್ಛೆಯಂತೆ ರವಿಕೆ ಹೊಲಿದು ಕೊಟ್ಟಿಲ್ಲ ಎಂದು ಬೇಸರಗೊಂಡ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೈದರಾಬಾದ್ನಲ್ಲಿ ವರದಿಯಾಗಿದೆ.
ಶ್ರೀನಿವಾಸ್ ಎಂಬುವವರ ಪತ್ನಿ ವಿಜಯಲಕ್ಷ್ಮಿ (36) ಮೃತರು. ಈ ದಂಪತಿ ಹೈದರಾಬಾದ್‌ನ ಅಂಬರಪೇಟ್‌ನಲ್ಲಿ ವಾಸವಾಗಿದ್ದರು. ಶ್ರೀನಿವಾಸ್ ಟೈಲರ್ ಆಗಿದ್ದು, ಸೀರೆ ವ್ಯಾಪಾರವನ್ನೂ ಮಾಡುತ್ತಿದ್ದರು. ಇವರು ಶನಿವಾರ ತಮ್ಮ ಪತ್ನಿ ವಿಜಯಲಕ್ಷ್ಮಿಗೆ ರವಿಕೆ ಹೊಲಿದು ಕೊಟ್ಟಿದ್ದಾರೆ. ಆದರೆ ಆಕೆಗೆ ರವಿಕೆ ಇಷ್ಟವಾಗಿರಲಿಲ್ಲ. ಈ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿದೆ.
ಬಳಿಕ ವಿಜಯಲಕ್ಷ್ಮಿ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡಿದ್ದರು. ಮಧ್ಯಾಹ್ನ 12.30ಕ್ಕೆ ಮಕ್ಕಳು ಶಾಲೆಯಿಂದ ಮನೆಗೆ ಬಂದು ಬಾಗಿಲು ತಟ್ಟಿದರೂ ಆಕೆ ಪ್ರತಿಕ್ರಿಯಿಸಲಿಲ್ಲ. ಪತಿ ಶ್ರೀನಿವಾಸ್ ಬಾಗಿಲು ಒಡೆದು ಒಳ ಹೋದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಈ ಬಗ್ಗೆ ಶ್ರೀನಿವಾಸ್ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಂಬರ್‌ಪೇಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ರಾತ್ರಿಯಿಡೀ ರೇವ್ ಪಾರ್ಟಿ: ಬೆಂಗಳೂರಿಗರು ಸೇರಿ 25ಕ್ಕೂ ಹೆಚ್ಚು ಜನರ ಬಂಧನ