ETV Bharat / bharat

ಬಿರಿಯಾನಿ ಖಾದ್ಯ ಸೇವಿಸಿ 20 ವರ್ಷದ ಯುವತಿ ಸಾವು.. ತನಿಖೆಗೆ ಆದೇಶಿಸಿದ ಸರ್ಕಾರ

ಕೇರಳದಲ್ಲಿ ಹೋಟೆಲ್ ಒಂದರ ಬಿರಿಯಾನಿ ಖಾದ್ಯ ಸೇವಿಸಿದ 20 ವರ್ಷದ ಯುವತಿ ಸಾವು -ತನಿಖೆಗೆ ಆದೇಶಿಸಿದ ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್

Kerala woman dies after eating Kuzhimanthi
ಬಿರಿಯಾನಿ ಖಾದ್ಯ ಕುಝಿಮಂತಿ ಸೇವಿಸಿ 20 ವರ್ಷದ ಯುವತಿ ಸಾವು!
author img

By

Published : Jan 7, 2023, 8:42 PM IST

ಕಾಸರಗೋಡು (ಕೇರಳ): ಹೋಟೆಲ್ ಒಂದರ ಬಿರಿಯಾನಿ ಖಾದ್ಯ ಸೇವಿಸಿದ 20 ವರ್ಷದ ಯುವತಿಯೊಬ್ಬಳು ಮೃತಪಟ್ಟ ಘಟನೆ ಕೇರಳದಲ್ಲಿ ಶನಿವಾರ ನಡೆದಿದೆ. ಪೆರುಂಬಳದ ಅಂಜು ಶ್ರೀಪಾರ್ವತಿ ಅವರು ಡಿಸೆಂಬರ್ 31 ರಂದು ಕಾಸರಗೋಡಿನ ರೊಮ್ಯಾನ್ಸಿಯಾ ಎಂಬ ರೆಸ್ಟೋರೆಂಟ್‌ನಿಂದ ಆನ್‌ಲೈನ್‌ನಲ್ಲಿ ಖರೀದಿಸಿದ ಬಿರಿಯಾನಿ ಸೇವಿಸಿದ್ದರು.

ಯುವತಿಯ ಪೋಷಕರು ದೂರು ನೀಡಿದ ನಂತರ ಪ್ರಕರಣ ದಾಖಲಾಗಿದೆ. ಯುವತಿ ಶನಿವಾರ ಮುಂಜಾನೆ ಸಾವನ್ನಪ್ಪಿದ್ದಾಳೆ. ಮರಣೋತ್ತರ ಪರೀಕ್ಷೆಯ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಯುವತಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು, ಅಲ್ಲಿಂದ ಮಂಗಳೂರಿನ ಮತ್ತೊಂದು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಸಾವನ್ನಪ್ಪಿದ್ದಾರೆ.

ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ವರದಿ ಸಲ್ಲಿಸುವಂತೆ ಆಹಾರ ಸುರಕ್ಷತಾ ಆಯುಕ್ತರಿಗೆ ನಿರ್ದೇಶನ ನೀಡಲಾಗಿದೆ. ಘಟನೆ ಮತ್ತು ಯುವತಿಗೆ ನೀಡಿದ ಚಿಕಿತ್ಸೆಯ ಬಗ್ಗೆಯೂ ಡಿಎಂಒ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಜಾರ್ಜ್ ಪತ್ತನಂತಿಟ್ಟದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ವಿಷ ಆಹಾರದ ಆರೋಪ ಹೊತ್ತಿರುವ ಹೋಟೆಲ್‌ಗಳ ಪರವಾನಗಿಯನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ (ಎಫ್‌ಎಸ್‌ಎಸ್‌ಎ) ಅಡಿ ರದ್ದುಗೊಳಿಸಲಾಗುವುದು ಎಂದು ಅವರು ಹೇಳಿದರು. ಈ ವಾರದ ಆರಂಭದಲ್ಲಿ, ಕೊಟ್ಟಾಯಂ ವೈದ್ಯಕೀಯ ಕಾಲೇಜಿನ ನರ್ಸ್ ಕೋಯಿಕ್ಕೋಡ್‌ನ ಉಪಾಹಾರ ಗೃಹದ ಆಹಾರವನ್ನು ಸೇವಿಸಿದ ನಂತರ ಸಾವನ್ನಪ್ಪಿದರು.

ಈ ಹಿಂದೆ ನಡೆದಿತ್ತು ಇದೇ ರೀತಿ ಘಟನೆ: ಕಾಸರಗೋಡಿನ ಚೆರುವತ್ತೂರಿನಲ್ಲಿ ಕೂಲ್ ಬಾರ್ ನಿಂದ ಶವರ್ಮಾ ಸೇವಿಸಿ 11ನೇ ತರಗತಿ ವಿದ್ಯಾರ್ಥಿ ಇವಿ ದೇವಾನಂದ ಮೃತಪಟ್ಟಿದ್ದರು. 16 ವರ್ಷದ ಯುವತಿ ತನ್ನ ಸ್ನೇಹಿತರೊಂದಿಗೆ ಐಡಿಯಲ್ ಫುಡ್ಸ್ ಕೂಲ್ ಬಾರ್ ಮತ್ತು ಸ್ನ್ಯಾಕ್ಸ್‌ನಿಂದ ಷಾವರ್ಮಾ ತಿಂದಿದ್ದಾಳೆ. ನಂತರ ಬಾಲಕಿಗೆ ಜ್ವರ, ಹೊಟ್ಟೆನೋವು, ವಾಂತಿ, ಭೇದಿ ಕಾಣಿಸಿಕೊಂಡಿತ್ತು. ಆಕೆಯನ್ನು ಮೊದಲು ಸರಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ನಂತರ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.

ವಿಷ ಆಹಾರ ಸೇವನೆಯಿಂದ ಉಂಟಾಗುವ ಮುಖ್ಯ ಲಕ್ಷಣಗಳು: ವಾಕರಿಕೆ, ವಾಂತಿ, ದೇಹ ನೋವು, ಉರ್ಟೇರಿಯಾ, ಅತಿಸಾರ, ಹೊಟ್ಟೆ ನೋವು ಮತ್ತು ಜ್ವರವು ಆಹಾರ ಸೇವಿಸಿದ ಕೆಲವೇ ಗಂಟೆಗಳಲ್ಲಿ ಅಥವಾ 24 ಗಂಟೆಗಳ ನಂತರವೂ ಆಹಾರ ವಿಷದ ಸಾಮಾನ್ಯ ಲಕ್ಷಣಗಳಾಗಿವೆ. ವಿಷ ಆಹಾರದ ಪರಿಣಾಮಗಳು ಮೆದುಳು ಮತ್ತು ಕೇಂದ್ರ ನರಮಂಡಲದ ಮೇಲೆ ಪರಿಣಾಮ ಬೀರಬಹುದು ಮತ್ತು ಸಾವಿಗೆ ಕಾರಣವಾಗಬಹುದು.

ತಕ್ಷಣ ನೀವು ಮಾಡಬೇಕಾಗಿರುವುದೇನು?: ವಿಷ ಆಹಾರ ತೀವ್ರವಾಗಿಲ್ಲದಿದ್ದರೆ, ಇದನ್ನು ಸಾಮಾನ್ಯವಾಗಿ ಜಲಸಂಚಯನ ಚಿಕಿತ್ಸೆಯೊಂದಿಗೆ ಚಿಕಿತ್ಸೆ ನೀಡಲಾಗುತ್ತದೆ. ರೋಗಿಗೆ ಕುದಿಸಿದ ನೀರು ಮತ್ತು ತೆಂಗಿನ ನೀರು ಅಥವಾ ORS ದ್ರಾವಣವನ್ನು ನೀಡಬೇಕು. ರೋಗಿಯು ವಾಂತಿ ಮಾಡುವುದನ್ನು ಮುಂದುವರೆಸಿದರೆ ಅಥವಾ ರೋಗಲಕ್ಷಣಗಳು 24 ಗಂಟೆಗಳಿಗಿಂತ ಹೆಚ್ಚು ಕಾಲ ಮುಂದುವರಿದರೆ, ತುಂಬಾ ದಣಿದಿದ್ದರೆ, ನಿರಂತರ ಅತಿಸಾರ ಮತ್ತು ಮಲದಲ್ಲಿ ರಕ್ತದ ಕಲೆಗಳನ್ನು ಹೊಂದಿದ್ದರೆ, ಅವರನ್ನು ಚಿಕಿತ್ಸೆಗಾಗಿ ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಬೇಕು.

ಆಹಾರದ ಸೋಂಕನ್ನು ತಡೆಗಟ್ಟಲು ನೈರ್ಮಲ್ಯವನ್ನು ಅಭ್ಯಾಸ ಮಾಡುವುದು ಅತ್ಯಂತ ಪ್ರಮುಖ ಹಂತವಾಗಿದೆ ಎಂದು ಡಿಎಂಒ ಹೇಳಿದರು. ಅಡುಗೆ ಮನೆ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳಬೇಕು. ಅಡುಗೆ ಮಾಡುವ ಮೊದಲು ಕೈಗಳನ್ನು ಸಾಬೂನಿನಿಂದ ತೊಳೆಯಬೇಕು. ಆಹಾರವನ್ನು ಬೇಯಿಸಲು ಶುದ್ಧ ಪಾತ್ರೆಗಳನ್ನು ಮಾತ್ರ ಬಳಸಬೇಕು.ಮಾಂಸ, ಮೀನು, ಮೊಟ್ಟೆ ಮತ್ತು ತರಕಾರಿಗಳ ತ್ಯಾಜ್ಯ ವಸ್ತುಗಳನ್ನು ಅಡುಗೆಮನೆಯಲ್ಲಿ ಹೆಚ್ಚು ದಿನಗಳವರೆಗೆ ಇಡಬಾರದು ಆರೋಗ್ಯ ಅಧಿಕಾರಿ ತಿಳಿಸಿದರು.

ಇದನ್ನೂ ಓದಿ:ಪ್ರಪಂಚದ ಈ ದೇಶಗಳಲ್ಲಿ ಕೊರೊನಾ ಸಾವಿನಲ್ಲಿ ಹೆಚ್ಚಳ: ಈ ವಯೋಮಾನದವರಲ್ಲೇ ಕೋವಿಡ್​ ಅಬ್ಬರ ಹೆಚ್ಚು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.