ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 27,071 ಕೊರೊನಾ ಕೇಸ್ಗಳು ಪತ್ತೆಯಾಗಿದ್ದು, 336 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 98,84,100 ಹಾಗೂ ಮೃತರ ಸಂಖ್ಯೆ 1,43,355ಕ್ಕೆ ಏರಿಕೆಯಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದರಿಂದ ವೈರಸ್ ಹರಡುವಿಕೆ ಹೆಚ್ಚಾಗಲಿದೆ. ಎಲ್ಲೆಂದರಲ್ಲಿ ಉಗುಳುವುದನ್ನು ಬಿಡಿ ಎಂದು ಆರೋಗ್ಯ ಇಲಾಖೆ ಟ್ವೀಟ್ ಮಾಡಿದೆ.
-
#IndiaFightsCorona
— Ministry of Health (@MoHFW_INDIA) December 14, 2020 " class="align-text-top noRightClick twitterSection" data="
Spitting in public places increases the risk of COVID-19 transmission. QUIT SPITTING NOW.
#ThuknaVarjitSwasthyaArjit #DoGajKiDooriMaskHaiZaruri #Unite2FightCorona pic.twitter.com/VKuVoUTaVp
">#IndiaFightsCorona
— Ministry of Health (@MoHFW_INDIA) December 14, 2020
Spitting in public places increases the risk of COVID-19 transmission. QUIT SPITTING NOW.
#ThuknaVarjitSwasthyaArjit #DoGajKiDooriMaskHaiZaruri #Unite2FightCorona pic.twitter.com/VKuVoUTaVp#IndiaFightsCorona
— Ministry of Health (@MoHFW_INDIA) December 14, 2020
Spitting in public places increases the risk of COVID-19 transmission. QUIT SPITTING NOW.
#ThuknaVarjitSwasthyaArjit #DoGajKiDooriMaskHaiZaruri #Unite2FightCorona pic.twitter.com/VKuVoUTaVp
ಒಟ್ಟು ಸೋಂಕಿತರ ಪೈಕಿ 93,88,159 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಉಳಿದಂತೆ 3,52,586 ಕೇಸ್ಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಡಿಸೆಂಬರ್ 13ರ ವರೆಗೆ 15,45,66,990 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ನಿನ್ನೆ ಒಂದೇ ದಿನ 8,55,157 ಸ್ಯಾಂಪಲ್ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.