ETV Bharat / bharat

ಪತಿಯ ಡಯಟಿಂಗ್ ಕಿರುಕುಳ: ಗೃಹಿಣಿ ಆತ್ಮಹತ್ಯೆ - ಸನತ್ ನಗರ್ ಪೊಲೀಸ್ ಠಾಣೆ

8 ವರ್ಷದ ಹಿಂದೆ ವಿವಾಹವಾಗಿದ್ದ ಗೃಹಿಣಿ ಪತಿಯ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

WIFE SUICIDE DUE TO DIETING HARRASSMENTS BY HUSBAND IN MEDCHAL DISTRICT
ಪತಿಯ ಡಯಟಿಂಗ್ ಕಿರುಕುಳ: ಗೃಹಿಣಿ ಆತ್ಮಹತ್ಯೆ
author img

By

Published : Mar 10, 2021, 5:20 PM IST

ಮೇಡ್ಚಲ್, ತೆಲಂಗಾಣ: ಡಯಟಿಂಗ್ ಮಾಡುವಂತೆ ಪತಿ ಒತ್ತಾಯಿಸುತ್ತಿದ್ದ ಕಾರಣದಿಂದ ಗೃಹಿಣಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಮೇಡ್ಚಲ್ ನಗರದ ಬಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶ್ರೀಲತಾ (28) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿಯಾಗಿದ್ದು, 8 ವರ್ಷದ ಹಿಂದೆ ಶಿವಕುಮಾರ್ ಎಂಬಾತನನ್ನು ಮದುವೆಯಾಗಿದ್ದಳು. ಮೊದಲಿಗೆ ಹೆಚ್ಚಿಗೆ ವರದಕ್ಷಿಣೆ ತರಲು ಪತ್ನಿಯನ್ನು ಪೀಡಿಸುತ್ತಿದ್ದ ಶಿವಕುಮಾರ್, ಇತ್ತೀಚೆಗೆ ಹೆಚ್ಚು ಕಿರುಕುಳ ನೀಡುತ್ತಿದ್ದ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಸಿಡಿ ಪ್ರಕರಣ: ದೂರು ವಾಪಸ್ ಪಡೆದ ಬಳಿಕ ದಿನೇಶ್ ಕಲ್ಲಹಳ್ಳಿ ಮೊದಲ ಪ್ರತಿಕ್ರಿಯೆ

ವರದಕ್ಷಿಣೆ ಮಾತ್ರವಲ್ಲದೇ ಇತ್ತೀಚೆಗೆ ಶ್ರೀಲತಾ ದಪ್ಪಗಾಗಿರುವುದನ್ನು ಹೀಯಾಳಿಸುತ್ತಿದ್ದ ಶಿವಕುಮಾರ್, ಐದು ಲಕ್ಷ ರೂಪಾಯಿಯನ್ನು ತನ್ನ ಮನೆಯವರಿಂದ ತಂದು, ತೆಳ್ಳಗಾಗುವಂತೆ ಒತ್ತಾಯ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇದರಿಂದ ಖಿನ್ನತೆಗೆ ಒಳಗಾದ ಶ್ರೀಲತಾ ಕೆರೆಯೊಂದಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಕುರಿತು ಸನತ್​​ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಇನ್ನು ಶ್ರೀಲತಾ ಮತ್ತು ಶಿವಕುಮಾರ್ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.