ಬರೇಲಿ( ಉತ್ತರ ಪ್ರದೇಶ): ವಿವಾಹಿತ ಮಹಿಳೆಯೋರ್ವಳು ಪತಿ ಹಾಗೂ ಇಬ್ಬರು ಮಕ್ಕಳನ್ನ ಬಿಟ್ಟು ಐವರು ಮಕ್ಕಳ ತಂದೆ ಜೊತೆ ಓಡಿ ಹೋಗಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದ್ದು, ಗಂಡ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.
ಬರೇಲಿ ಜಿಲ್ಲೆಯ ಫತೇಗಂಜ್ ಪೊಲೀಸ್ ಠಾಣೆಯ ಮಾಧೋಪುರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇಬ್ಬರು ಮಕ್ಕಳನ್ನ ಮನೆಯಲ್ಲಿ ಬಿಟ್ಟು, 9 ತಿಂಗಳ ಮಗುವಿನೊಂದಿಗೆ ಮಹಿಳೆ ಪರಾರಿಯಾಗಿದ್ದಾಳೆ. ಇದೀಗ ಓಡಿಹೋಗಿರುವ ಹೆಂಡತಿಯನ್ನ ಹುಡುಕಿಕೊಡುವಂತೆ ಗಂಡ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.
ಇದನ್ನೂ ಓದಿರಿ: ರವಿಶಾಸ್ತ್ರಿಗಿಂತಲೂ ರಾಹುಲ್ ಭಾಯ್ ತುಂಬಾ ಭಿನ್ನ, ಪ್ರೇರಣಾ ಶೈಲಿ ವಿಭಿನ್ನ ಎಂದ ಶಿಖರ್
ಕೂಲಿ ಕೆಲಸ ಮಾಡಿಕೊಂಡು ಅಬ್ದುಲ್ಲಾ ತನ್ನ ಕುಟುಂಬದೊಂದಿಗೆ ಜೀವನ ನಡೆಸುತ್ತಿದ್ದನು. ಇವರಿಗೆ ಮೂವರು ಮಕ್ಕಳಿದ್ದರು. ಆದರೆ ಈತನ ಹೆಂಡತಿ ಅದೇ ಗ್ರಾಮದಲ್ಲಿ ವಾಸವಾಗಿದ್ದ ಅಕೀಲ್ ಜೊತೆ ಪ್ರೀತಿಯ ಬಲೆಯಲ್ಲಿ ಬಿದ್ದು, ಇದೀಗ ಓಡಿ ಹೋಗಿದ್ದಾಳೆ. ಅಕೀಲ್ ಐವರು ಮಕ್ಕಳ ತಂದೆ ಎಂದು ಹೇಳಲಾಗುತ್ತಿದೆ. ಘಟನೆ ಬಗ್ಗೆ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಎಸ್ಪಿ ರಾಜ್ಕುಮಾರ್ ಅಗರ್ವಾಲ್ ತಿಳಿಸಿದ್ದಾರೆ.