ETV Bharat / bharat

ಚಂದ್ರನ ಮೇಲ್ಮೈಯಲ್ಲಿ ಪ್ರಗ್ಯಾನ್ ರೋವರ್​ಗಿರುವ ಅಪಾಯವೇನು?: ಮಾಹಿತಿ ನೀಡಿದ ಮೈಲಸ್ವಾಮಿ ಅಣ್ಣಾದೊರೈ - ಈಟಿವಿ ಭಾರತ ಕನ್ನಡ

ಚಂದ್ರನ ಮೇಲ್ಮೈಯಲ್ಲಿ ಪ್ರಗ್ಯಾನ್ ರೋವರ್‌ಗೆ ಅಪಾಯವಿದೆ ಎಂದು ಇಸ್ರೋ ಮಾಜಿ ಮುಖ್ಯಸ್ಥ ಮೈಲಸ್ವಾಮಿ ಅಣ್ಣಾದೊರೈ ಹೇಳಿದರು.

Mylaswamy Annadurai
ಮೈಲಸ್ವಾಮಿ ಅಣ್ಣಾದೊರೈ
author img

By ETV Bharat Karnataka Team

Published : Oct 24, 2023, 9:27 AM IST

ಕೊಯಮತ್ತೂರು (ತಮಿಳುನಾಡು): ಚಂದ್ರನ ಮೇಲ್ಮೈಯಲ್ಲಿ ಪ್ರಗ್ಯಾನ್ ರೋವರ್‌ಗೆ ಅಪಾಯವಿದೆ. ಭೂಮಿಯ ಮೇಲಿರುವಂತೆ ಚಂದ್ರನ ಮೇಲೂ ಉಲ್ಕಾಶಿಲೆಗಳು ಬೀಳುವುದು ಸಹಜ ಮತ್ತು ಚಂದ್ರನಲ್ಲಿ ಅನಿಲಗಳು ಇಲ್ಲದಿರುವುದರಿಂದ ಇಂತಹ ಪತನದ ಸಾಧ್ಯತೆ ಇದೆ ಎಂದು ಇಸ್ರೋ ಮಾಜಿ ಮುಖ್ಯಸ್ಥ ಮೈಲಸ್ವಾಮಿ ಅಣ್ಣಾದೊರೈ ಹೇಳಿದ್ದಾರೆ.

ಅಣ್ಣಾದೊರೈ ಅವರು ನಿನ್ನೆ (ಅಕ್ಟೋಬರ್​ 23) ಕೊಯಮತ್ತೂರಿನಲ್ಲಿ ಖಾಸಗಿ ದಂತ ಆಸ್ಪತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, "ಸ್ವಾತಂತ್ರ್ಯದ ನಂತರ ಜನರ ಜೀವಿತಾವಧಿ 30 ರಿಂದ 72ಕ್ಕೆ ಏರಿಕೆಯಾಗಿದೆ. ಹೃದ್ರೋಗ ಎಷ್ಟು ಮುಖ್ಯವೋ, ಹಲ್ಲಿನ ಅಂಶವೂ ಅಷ್ಟೇ ಮುಖ್ಯ. ಹೃದ್ರೋಗ ಶಸ್ತ್ರ ಚಿಕಿತ್ಸೆಯು ಹಲವು ಬದಲಾವಣೆಗಳನ್ನು ಕಂಡಿರುವಂತೆ ಹಲ್ಲಿನ ಚಿಕಿತ್ಸೆಯೂ ಜಾಗತಿಕವಾಗಿ ಹಲವು ಬದಲಾವಣೆಗಳಿಗೆ ಒಳಗಾಗುತ್ತಿದೆ" ಎಂದರು.

"ವಿಕ್ರಮ್ ಲ್ಯಾಂಡರ್‌ನ ಜೀವಿತಾವಧಿ ಕೇವಲ 14 ದಿನಗಳು ಮತ್ತು ಅದರ ಜೀವಿತಾವಧಿಯು ಪೂರ್ಣಗೊಂಡಿದೆ. ಪ್ರಜ್ಞಾನ್ ಫ್ರೀಕ್ವೆನ್ಸಿ ಮತ್ತು ವಿಕ್ರಂ ಫ್ರೀಕ್ವೆನ್ಸಿ ಸಮ್ಮಿಶ್ರಣ ಮಾಡಿದರೆ ಮಾತ್ರ ಮಾಹಿತಿ ಲಭ್ಯವಾಗಲಿದೆ. ಪ್ರಗ್ಯಾನ್ ಈಗ ಜೀವಂತವಾಗಿದ್ದರೂ, ಸಂದೇಶಗಳ ವಿನಿಮಯ ಇರುವುದಿಲ್ಲ" ಎಂದು ತಿಳಿಸಿದರು.

ರೋವರ್​ಗೆ ಹೊಸ ಅಪಾಯವೇನು? ಎಂಬ ಪ್ರಶ್ನೆಗೆ ಉತ್ತರಿಸಿದ ಅಣ್ಣಾದೊರೈ, "ಉಲ್ಕಾಶಿಲೆಗಳು ಚಂದ್ರನ ಮೇಲೆ ಬೀಳುವುದು ಮತ್ತು ಭೂಮಿಯ ಮೇಲೂ ಬೀಳುವುದು ಸಹಜವಲ್ಲವೇ? ಆದರೆ, ಭೂಮಿಯಲ್ಲಿ ಅನಿಲ ಇರುವುದರಿಂದ ಅದು ಉರಿದು ಹೋಗುತ್ತವೆ. ಚಂದ್ರನಲ್ಲಿ ಅಂತಹದ್ದೇನೂ ಇಲ್ಲದಿರುವುದರಿಂದ ಉಲ್ಕಾಶಿಲೆಗಳು ಬೀಳುವ ಸಾಧ್ಯತೆಯಿದೆ. ಇದರಿಂದ ರೋವರ್​ಗೆ ಅಪಾಯ ಆಗಬಹುದು" ಎಂದರು.

ಇದನ್ನೂ ಓದಿ: ಇಸ್ರೋ 'ಗಗನಯಾನ'ಕ್ಕೆ ಸಿದ್ಧತೆ: ಮೂವರು ಗಗನಯಾತ್ರಿಗಳು ಭೂಮಿಯಿಂದ 400 ಕಿ.ಮೀ ಎತ್ತರದ ಕಕ್ಷೆಗೆ- ಬಾಹ್ಯಾಕಾಶ ತಜ್ಞ ಗಿರೀಶ್ ಲಿಂಗಣ್ಣ ವಿವರಣೆ

"ಗಗನಯಾನ ಯೋಜನೆಯನ್ನು ಗರಿಷ್ಠ ಮುಂಜಾಗ್ರತಾ ಕ್ರಮವಾಗಿ ಕೈಗೊಳ್ಳಲಾಗಿದ್ದು, ಇದೊಂದು ಸಣ್ಣ ಭಾಗವಾಗಿದೆ. ಗಗನಯಾನ ಮಿಷನ್​ ಅನ್ನು ಕೊನೆಯ ಸೆಕೆಂಡ್​ನಲ್ಲಿ ನಿಲ್ಲಿಸಲಾಯಿತು. ಮುಂದಿನ ಅರ್ಧ ಗಂಟೆಯಲ್ಲಿ ಮರು ಪ್ರಾರಂಭಿಸಲಾಯಿತು. ಇದು ಭಾರತೀಯ ಬಾಹ್ಯಾಕಾಶಕ್ಕೆ ಉತ್ತಮವಾಗಿದೆ. ಇನ್ನೂ ಹಲವು ಹಂತಗಳನ್ನು ದಾಟಬೇಕಿದೆ. ಇದು ಕೇವಲ ಮೊದಲ ಹಂತ ಮಾತ್ರ" ಎಂದು ಹೇಳಿದರು.

"ಕುಲಶೇಖರಪಟ್ಟಣಂ ಯೋಜನೆಗೆ (ಇಸ್ರೋದ ಎರಡನೇ ರಾಕೆಟ್​ ಉಡಾವಣಾ ಕೇಂದ್ರವು ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿದೆ) ಉಡಾವಣಾ ಪ್ಯಾಡ್​ ಸ್ಥಾಪಿಸುವುದರ ಜೊತೆಗೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕು. ಇಂಧನ ಉತ್ಪಾದನೆ ಸೇರಿದಂತೆ ಹಲವು ಯೋಜನೆಗಳೊಂದಿಗೆ ಕೆಲಸ ಮಾಡಲು ಇದು ಆರ್ಥಿಕ ಉಡಾವಣಾ ಪ್ಯಾಡ್ (economical launch pad) ಆಗುತ್ತದೆ. ಪ್ರಸ್ತುತ ಸಣ್ಣ ಉಪಗ್ರಹಗಳನ್ನು ಉಡಾವಣೆ ಮಾಡಲಾಗುತ್ತಿದೆ" ಎಂದರು.

"ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಪ್ರಗತಿಯು ವಾಣಿಜ್ಯಿಕವಾಗಿ ಅನೇಕ ದೇಶಗಳನ್ನು ಭಾರತದತ್ತ ಆಕರ್ಷಿಸುತ್ತಿದೆ. ಚಂದ್ರನತ್ತ ಮನುಷ್ಯರನ್ನು ಕಳುಹಿಸಲು ಅಮೆರಿಕ ಪ್ರಯತ್ನಿಸುತ್ತಿದೆ. ಕೆಲವೇ ವರ್ಷಗಳಲ್ಲಿ ಅದು ಸಕ್ಸಸ್​ ಆಗಬಹುದು. ಆದರೆ, ಭಾರತ ಇದನ್ನು ಸಾಧಿಸಲು ಸುಮಾರು 10 ವರ್ಷಗಳನ್ನು ತೆಗದುಕೊಳ್ಳಬಹುದು" ಎಂದು ತಿಳಿಸಿದರು.

ಇದನ್ನೂ ಓದಿ: ಇಸ್ರೋ ಗಗನಯಾನ; ಪರೀಕ್ಷಾರ್ಥ ಉಡಾವಣೆ ಮುಂದಿನ ಯೋಜನೆಗಳಿಗೆ ಪ್ರಮುಖ ಹೆಜ್ಜೆ: ಬಾಹ್ಯಾಕಾಶ ತಜ್ಞರ ಅಭಿಮತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.