ನವದೆಹಲಿ: ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಅವರು ಕೊಡಗಿನಲ್ಲಿ ಹುಲಿಯೊಂದು ನೀರಿನ ಟಬ್ನಲ್ಲಿ ಕಾಲಕಳೆದ ವಿಡಿಯೋವೊಂದನ್ನು ತಮ್ಮ ಟ್ವಿಟರ್ನಲ್ಲಿ ಹಂಚಿಕೊಂಡಿದ್ದರು. ಆದ್ರೆ ಈ ಪೋಸ್ಟ್ ಕಂಡು ಖ್ಯಾತ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ರೀಟ್ವೀಟ್ ಮಾಡಿ, ತಾವು ದಕ್ಷಿಣ ಭಾರತದಲ್ಲಿ ಕಳೆದ ಸುಂದರ ದಿನಗಳನ್ನು ನೆನಪಿಸಿಕೊಂಡರು.
-
Spent most of my childhood holidays at our home in Kodagu, just six miles from Nagarhole game sanctuary. NEVER lucky enough to see a tiger. And this chap comes to someone’s home to use their ‘bathtub.’ Magnificent. When a Tiger uses a Jacuzzi it becomes a ‘Ticuzzi’ https://t.co/OjixxCEXJ2
— anand mahindra (@anandmahindra) December 10, 2020 " class="align-text-top noRightClick twitterSection" data="
">Spent most of my childhood holidays at our home in Kodagu, just six miles from Nagarhole game sanctuary. NEVER lucky enough to see a tiger. And this chap comes to someone’s home to use their ‘bathtub.’ Magnificent. When a Tiger uses a Jacuzzi it becomes a ‘Ticuzzi’ https://t.co/OjixxCEXJ2
— anand mahindra (@anandmahindra) December 10, 2020Spent most of my childhood holidays at our home in Kodagu, just six miles from Nagarhole game sanctuary. NEVER lucky enough to see a tiger. And this chap comes to someone’s home to use their ‘bathtub.’ Magnificent. When a Tiger uses a Jacuzzi it becomes a ‘Ticuzzi’ https://t.co/OjixxCEXJ2
— anand mahindra (@anandmahindra) December 10, 2020
ಜೈರಾಮ್ ರಮೇಶ್ ಈ ವಿಡಿಯೋವನ್ನು ವಾಟ್ಸ್ಆ್ಯಪ್ನಲ್ಲಿ ತಮ್ಮ ಮಿತ್ರರೊಬ್ಬರಿಂದ ಸ್ವೀಕರಿಸಿದ್ದರು. ಯಾರದೋ ಮನೆ ಹಿತ್ತಲಿನಲ್ಲಿ ನೀರು ತುಂಬಿದ್ದ ಟಬ್ ಒಂದರಲ್ಲಿ ದೊಡ್ಡ ಹುಲಿಯೊಂದು ಟಬ್ ಸುತ್ತಲೂ ತಿರುಗಿ ಕೊನೆಗೆ ಆ ಟಬ್ಗೆ ಇಳಿದು ಕೆಲ ಕಾಲ ಇದ್ದು ಸಂತೋಷಪಡುತ್ತಿರುವ ವಿಡಿಯೋವನ್ನು ತಮ್ಮ ಟ್ವಿಟರ್ನಲ್ಲಿ ಹಂಚಿಕೊಂಡಿದ್ದರು.
'ಏನು ಅಸಂಭವನೀಯ ಘಟನೆ' ಎಂದು ರಮೇಶ್ ತಮ್ಮ ಟ್ವೀಟರ್ನಲ್ಲಿ ಬರೆದು ಆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಮೂರು ದಿನಗಳ ನಂತರ, ಮಹೀಂದ್ರಾ ಸಮೂಹದ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು, ರಿಟ್ವೀಟ್ ಮಾಡಿ 'ಭವ್ಯವಾದ' ವಿಡಿಯೋ ಕಂಡುಬಂದಿದೆ ಎಂದಿದ್ದಾರೆ.
ಇದನ್ನೂ ಓದಿ: ಏಲೂರು ನಿಗೂಢ ಕಾಯಿಲೆ ರಹಸ್ಯ ಬಯಲು: ಸಾವಯವ ಕೃಷಿ ಪ್ರೋತ್ಸಾಹಿಸುವಂತೆ ಸಿಎಂ ಸೂಚನೆ
ಆನಂದ್ ಮಹೀಂದ್ರಾ ಅವರು ತಮ್ಮ ಬಾಲ್ಯದ ರಜಾದಿನಗಳನ್ನು ಹೆಚ್ಚಾಗಿ ಕರ್ನಾಟಕದ ನಾಗರಹೊಳೆ ಅಭಯಾರಣ್ಯದಿಂದ ಆರು ಮೈಲಿ ದೂರದಲ್ಲಿರುವ ತಮ್ಮ ಕೊಡಗು ಕುಟುಂಬದ ಮನೆಯಲ್ಲಿ ಕಳೆಯುತ್ತಿದ್ದರಂತೆ.
ಆದರೆ ಆಗ ಮಹೀಂದ್ರಾ ಅವರು ಹುಲಿಯನ್ನು ನೋಡಿಲ್ಲ ಎಂದು ಹೇಳಿದ್ದಾರೆ. ಈ ಹುಲಿಯ ವಿಡಿಯೋ ಮಾತ್ರ ಅವನನ್ನು ಸಂಪೂರ್ಣವಾಗಿ ರಂಜಿಸಿ ಅವರ ಬಾಲ್ಯವನ್ನು ಮೆಲುಕು ಹಾಕುವಂತೆ ಮಾಡಿತು.
ಜಾಕೂಝಿ(ಬಾತ್ ಟಬ್) ಯನ್ನು ಹುಲಿ ಬಳಸಿದಾಗ ಅದು ಟಿಕೂಝಿ ಆಗುತ್ತದೆ ಎಂದು ಆನಂದ್ ಮಹೀಂದ್ರಾ ಟ್ವೀಟ್ಗೆ ಪೂರ್ಣವಿರಾಮ ಇಟ್ಟಿದ್ದಾರೆ.