ETV Bharat / bharat

ಹೆಚ್​​ಐವಿ ಸೋಂಕಿತೆಯ ವಿವಾಹವಾದ ಶಿಕ್ಷಕ: ಸೇವೆಗೆ ಮರುಸೇರ್ಪಡೆಗೆ ಮಕ್ಕಳ ಪೋಷಕರ ವಿರೋಧ

author img

By

Published : Feb 22, 2023, 9:37 AM IST

ಹೆಚ್​​ಐವಿ ಸೋಂಕಿತೆಯ ವಿವಾಹವಾದ ಶಿಕ್ಷಕ- ಮಾನಸಿಕ ಅಸ್ವಸ್ಥ ಶಾಲೆಯ ಶಿಕ್ಷಕ- ಶಿಕ್ಷಕರಿಗೆ ರಜೆ ನೀಡಿದ ಆಡಳಿತ ಮಂಡಳಿ- ಶಿಕ್ಷಕ ಸೇವೆಗೆ ಮರುಸೇರಲು ಪೋಷಕರ ವಿರೋಧ- ಸರ್ಕಾರದ ಗಮನ ಸೆಳೆದ ಶಿಕ್ಷಕ

ಹೆಚ್​​ಐವಿ ಸೋಂಕಿತೆಯ ವಿವಾಹವಾದ ಶಿಕ್ಷಕ
ಹೆಚ್​​ಐವಿ ಸೋಂಕಿತೆಯ ವಿವಾಹವಾದ ಶಿಕ್ಷಕ

ಕೋಲ್ಕತ್ತಾ: ಇಲ್ಲಿನ ಮಾನಸಿಕ ಅಸ್ವಸ್ಥ ಮಕ್ಕಳ ಸಂಸ್ಥೆಯಲ್ಲಿ ಕೆಲಸ ಮಾಡುವ ಶಿಕ್ಷಕರೊಬ್ಬರು ಹೆಚ್​ಐವಿ ಸೋಂಕಿತ ಮಹಿಳೆಯನ್ನು ವಿವಾಹವಾಗಿದ್ದು, ಶಾಲಾ ಆಡಳಿತ ಮಂಡಳಿ ಮತ್ತು ಪೋಷಕರ ಮಧ್ಯೆ ಬಿಕ್ಕಟ್ಟು ಸೃಷ್ಟಿಸಿದೆ. ಇದರ ಪರಿಹಾರಕ್ಕಾಗಿ ಸರ್ಕಾರವೇ ಮಧ್ಯಪ್ರವೇಶಿಸಿದೆ.

ಉತ್ತರ ಪರಗಣ ಜಿಲ್ಲೆಯ ನಿವಾಸಿಯಾಗಿದ್ದ ಶಿಕ್ಷಕ ಕೆಲ ದಿನಗಳ ಹಿಂದೆ ಹೆಚ್​ಐವಿ ಸೋಂಕಿತೆಯನ್ನು ವಿವಾಹವಾಗಿದ್ದರು. ಶಿಕ್ಷಕರ ಈ ದಿಟ್ಟ ನಡೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಇವರ ಬಗ್ಗೆ ಮೆಚ್ಚುಗೆಯೂ ವ್ಯಕ್ತವಾಗಿದೆ. ಆದರೆ, ಇದು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುವ ಬಗ್ಗೆ ಪೋಷಕರು ಆತಂಕಗೊಂಡಿದ್ದು, ಶಿಕ್ಷಕರನ್ನು ಸೇವೆಗೆ ಮರು ಸೇರ್ಪಡೆ ಮಾಡಿಕೊಳ್ಳದಂತೆ ಆಡಳಿತ ಮಂಡಳಿ ಮೇಲೆ ಒತ್ತಡ ಹಾಕಿದ್ದಾರೆ.

ಇದರಿಂದ ಶಾಲಾ ಆಡಳಿತ ಮಂಡಳಿ ಶಿಕ್ಷಕರಿಗೆ 90 ದಿನಗಳ ಕಡ್ಡಾಯ ರಜೆ ನೀಡಿ ಕಳುಹಿಸಿದೆ. ಪೋಷಕರು ತಮ್ಮ ಮಕ್ಕಳ ಬಗ್ಗೆ ಆತಂಕಗೊಂಡಿದ್ದು, ಶಿಕ್ಷಕರ ಮರುಸೇವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದರ ವಿರುದ್ಧ ಶಿಕ್ಷಕರೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತಮ್ಮ ಸೇವೆಗೆ ಅಡ್ಡಿಪಡಿಸುತ್ತಿರುವ ಬಗ್ಗೆ ಸರ್ಕಾರದ ಗಮನಕ್ಕೆ ತಂದಿದ್ದಾರೆ.

ಶಾಲೆಯಲ್ಲಿ ಬಿಕ್ಕಟ್ಟು ಸೃಷ್ಟಿಯಾದ ಕಾರಣ ಸರ್ಕಾರದ ಆಡಳಿತಾಧಿಕಾರಿ ಜನರಲ್ ಬಿಪ್ಲಬ್ ರಾಯ್ ಮಧ್ಯಪ್ರವೇಶಿಸಿ ಪೋಷಕರಿಗೆ ಸೋಂಕಿನ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಪೋಷಕರು, ಆಡಳಿತ ಮಂಡಳಿ ಮತ್ತು ಶಿಕ್ಷಕರನ್ನು ಪ್ರತ್ಯೇಕವಾಗಿ ತಮ್ಮ ಕಚೇರಿಗೆ ಆಹ್ವಾನಿಸಿ ಅಹವಾಲು ಸ್ವೀಕರಿಸಿದ್ದಾರೆ. ನಡದ ಘಟನೆ ಮತ್ತು ಸೋಂಕಿನ ಬಗ್ಗೆ ತಪ್ಪು ತಿಳಿವಳಿಕೆ ಉಂಟಾಗಿದೆ ಎಂದು ಶಿಕ್ಷಕರು ತಿಳಿಸಿದ್ದಾರೆ.

ಹೆಚ್‌ಐವಿ ಕುರಿತು ಜಾಗೃತಿ ಅಭಿಯಾನಗಳನ್ನು ಪ್ರಾರಂಭಿಸಲು ಆರೋಗ್ಯ ಇಲಾಖೆಗೆ ಮನವಿ ಮಾಡುವೆ. ದಂಪತಿಗೆ ಸಂಪೂರ್ಣ ಬೆಂಬಲ ನೀಡಲಾಗುವುದು. ಭವಿಷ್ಯದಲ್ಲಿ ಅವರಿಗೆ ಯಾವುದೇ ಸಹಾಯ ಬೇಕಾದಲ್ಲಿ ನೆರವಿಗೆ ನಿಲ್ಲಲಾಗುವುದು ಎಂದು ಎಚ್‌ಐವಿ ಪಾಸಿಟಿವ್ ವ್ಯಕ್ತಿಗಳ ಉದ್ಯೋಗಕ್ಕೆ ಸಂಬಂಧಿಸಿದ ಕಾನೂನುಗಳ ಬಗ್ಗೆ ಶಾಲಾ ಅಧಿಕಾರಿಗಳಿಗೆ ತಿಳಿಸಲಾಗಿದೆ. ನಂತರ ಅವರು ಶಿಕ್ಷಕರನ್ನು ಸಂಸ್ಥೆಗೆ ಮರುಸೇರ್ಪಡೆ ಮಾಡಿಕೊಳ್ಳಲೂ ಒಪ್ಪಿದ್ದಾರೆ ಎಂದು ಆಡಳಿತಾಧಿಕಾರಿ ತಿಳಿಸಿದರು.

ಶಾಲಾ ಮಂಡಳಿಯ ಪ್ರತಿಕ್ರಿಯೆ: ಶಿಕ್ಷಕರನ್ನು ನಾವು ಶಾಲೆಯಿಂದ ಹೊರಗಿಟ್ಟಿಲ್ಲ. 'ಮಾನಸಿಕ ತೊಂದರೆ ಇರುವ ಮಕ್ಕಳ ಶಾಲೆ ಇದಾಗಿರುವುದರಿಂದ ಅವರು ಕೆಲವೊಮ್ಮೆ ಕೋಪಗೊಂಡು ಯಾರನ್ನಾದರೂ ಕಚ್ಚುವುದು, ಗೀಚುವುದು ಮಾಡುತ್ತಾರೆ. ಈ ವೇಳೆ ಶಿಕ್ಷಕರಿಂದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಉಂಟಾಗದಿರಲಿ ಎಂಬ ಕಾರಣಕ್ಕಾಗಿ ರಜೆ ನೀಡಲಾಗಿದೆ. ಪೋಷಕರ ಒತ್ತಡವೂ ಇದಕ್ಕೆ ಕಾರಣವಾಗಿತ್ತು. ಆದರೆ, ಅವರು ಬಯಸಿದಲ್ಲಿ ಮತ್ತೆ ಸೇವೆಗೆ ಸೇರಬಹುದು. ಆದಾಗ್ಯೂ, ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಸಮಸ್ಯೆಯ ಬಗ್ಗೆ ಯೋಚಿಸುವಂತೆ ಸಲಹೆ ನೀಡಲಾಗಿದೆ ಎಂದು ಶಾಲೆಯ ಮುಖ್ಯಸ್ಥ ಡಾ.ರಂಜನ್ ಮೊಂಡಲ್ ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಹೆಚ್​ಐವಿ ಸೋಂಕಿತೆಯ ವಿವಾಹವಾಗಿರುವ ಶಿಕ್ಷಕರು, ಶಾಲೆಗೆ ಸೇರಬೇಕೋ ಮರುಸೇರ್ಪಡೆ ಆಗಬೇಕೋ ಬೇಡವೋ ಎಂದು ಯೋಚಿಸುತ್ತೇನೆ. ಕಳೆದ ಕೆಲವು ದಿನಗಳಿಂದ ಏನು ನಡೆಯುತ್ತಿದೆ ಎಂಬುದನ್ನು ಮೊದಲು ತಿಳಿದುಕೊಳ್ಳುವೆ. ಆಮೇಲೆ ಮುಂದಿನ ನಿರ್ಧಾರ ಮಾಡುವೆ ಎಂದು ಹೇಳಿದರು.

ಓದಿ: ಅಮೆರಿಕದ ಜೊತೆಗಿನ ರಷ್ಯಾ ಅಣು ಒಪ್ಪಂದ ಅಮಾನತು: ಉಕ್ರೇನ್​ ಮೇಲೆ ಪರಮಾಣು ಸಿಡಿತಲೆ ದಾಳಿ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.