ಬೋಲಾಪುರ್ (ಪಶ್ಚಿಮ ಬಂಗಾಳ): ನಾವೆಲ್ಲರೂ ಯಾವ ಅನಿಲವನ್ನು ಉಸಿರಾಡುತ್ತಿದ್ದೇವೆ? ಬಿಳಿ ತಲೆಗೂದಲಿನ ವ್ಯಕ್ತಿಯೊಬ್ಬರು ಆಹ್ಲಾದಕರ ಸ್ಮೈಲ್ನೊಂದಿಗೆ ಶಾಲಾ ವಿದ್ಯಾರ್ಥಿಗಳ ಗುಂಪಿಗೆ ಪ್ರಶ್ನಿಸಿದರು. ಅವರ ಪ್ರೀತಿಯುತ ನಡವಳಿಕೆಯಿಂದ ಸಂತಸಗೊಂಡ ಮಕ್ಕಳು ನಂತರ ಮರಗಳನ್ನು ನೆಡುವ ಮತ್ತು ಪರಿಸರವನ್ನು ಉಳಿಸುವ ಮಹತ್ವವನ್ನು ಸಂತೋಷದಿಂದ ಆಲಿಸಿದರು.
ಇವರು ಡಾ. ಸುರ್ಪಿಯೋ ಕುಮಾರ್ ಸಾಧು. ವೃತ್ತಿಯಲ್ಲಿ ಶಾಲಾ ಶಿಕ್ಷಕ ಮತ್ತು ಪ್ರವೃತ್ತಿಯಿಂದ ಪರಿಸರ ಹೋರಾಟಗಾರ. ಕಳೆದ 35 ವರ್ಷಗಳಿಂದ ಇವರು ಸೈಕಲ್ ಮೇಲೆ ಶಾಲೆಗೆ ಹೋಗುವುದನ್ನು ಅಕ್ಕಪಕ್ಕದವರು ನೋಡುತ್ತಿದ್ದಾರೆ. ಮೋಟರ್‌ಸೈಕಲ್ ಓಡಿಸುವುದು ತಿಳಿದಿದ್ದರೂ, ಸಾಧು ತನ್ನ ಸೈಕಲ್‌ಗೆ ಆದ್ಯತೆ ನೀಡುತ್ತಾರೆ. ಏಕೆಂದರೆ ಸೈಕಲ್ ಪರಿಸರ ಸ್ನೇಹಿಯಾಗಿರುವುದರಿಂದ ಅದೇ ಅವರಿಗೆ ಇಷ್ಟ.
ಸೈಕಲ್ ಮೇಲೆ ಪ್ಲಾಸ್ಟಿಕ್ ತ್ಯಜಿಸಿ, ಮರಗಳನ್ನು ನೆಡಿ, ಪರಿಸರ ಉಳಿಸಿ ಎಂಬ ಫಲಕಗಳನ್ನು ಅಳವಡಿಸಲಾಗಿದೆ. ಇಂತಹ ಫಲಕಗಳನ್ನು ಬಳಸುವುದರ ಹಿಂದಿನ ಕಾರಣವನ್ನು ಕೇಳಿದಾಗ ಸಾಧು, ಜನ ಕೆಲವೊಮ್ಮೆ ನಿಂತು ನನ್ನ ಸೈಕಲ್‌ನಲ್ಲಿ ಬರೆದಿರುವುದನ್ನು ಓದುತ್ತಾರೆ. ಅವುಗಳನ್ನು ಓದಿದ ನಂತರ ಯಾರಾದರೊಬ್ಬರು ಒಂದು ಮರವನ್ನು ನೆಟ್ಟರೆ ಅದೇ ನನಗೆ ತುಂಬಾ ತೃಪ್ತಿಯ ವಿಷಯ ಎನ್ನುತ್ತಾರೆ.
ವಿಶ್ವಭಾರತಿ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡಿದ ನಂತರ ಮತ್ತು ಕೃಷಿಯಲ್ಲಿ ಸಂಶೋಧನೆಯನ್ನು ಪೂರ್ಣಗೊಳಿಸಿದ ನಂತರ, ಮುರ್ಷಿದಾಬಾದ್ ಜಿಲ್ಲೆಯ ರಘುನಾಥಗಂಜ್‌ನ ಶಾಲೆಯೊಂದರಲ್ಲಿ ಶಿಕ್ಷಕರಾಗಿ ಸೇರಿದರು. ಅಲ್ಲಿ 19 ವರ್ಷಗಳ ಕಾಲ ಕಲಿಸಿದ ನಂತರ ಅವರು ಬೋಲ್ಪುರ ಹೈಯರ್ ಸೆಕೆಂಡರಿ ಶಾಲೆಗೆ ಸೇರಿದರು. ಕಳೆದ 25 ವರ್ಷಗಳಿಂದ ಅಲ್ಲಿಯೇ ಪಾಠ ಮಾಡುತ್ತಿದ್ದಾರೆ. ಹಸಿರನ್ನು ಹೆಚ್ಚಿಸುವ ನಿಟ್ಟಿನಲ್ಲಿ ತಮ್ಮ ಶಾಲೆಯಲ್ಲಿ ಗಿಡಗಳನ್ನು ನೆಟ್ಟಿದ್ದಾರೆ.
ಬೋಲ್ಪುರೆಯ ಸುರುಲ್ ಗ್ರಾಮದವರಾದ ಸಾಧು ಶಿಕ್ಷಕರಾಗಿ ಸಾಕಷ್ಟು ಪ್ರಶಂಸೆ ಗಳಿಸಿದ್ದು, ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಶಿಕ್ಷಾ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ವರ್ಷದ ಸೆಪ್ಟೆಂಬರ್‌ನಲ್ಲಿ ನಿವೃತ್ತರಾಗಲಿದ್ದಾರೆ. ಆದರೆ ಅವರು ಬದುಕಿರುವವರೆಗೂ ಪರಿಸರಕ್ಕಾಗಿ ತಮ್ಮ ಕೆಲಸವನ್ನು ಮುಂದುವರಿಸಲು ನಿರ್ಧರಿಸಿದ್ದಾರೆ.
ಇದನ್ನೂ ಓದಿ: ಜಪಾನ್ ತಂತ್ರದ ಮೂಲಕ ಪರಿಸರ ರಕ್ಷಣೆ.. 2000 ಗಿಡ ನೆಟ್ಟು ಮಾದರಿಯಾದ ತಮಿಳುನಾಡಿನ ಹಳ್ಳಿ..