ಮೇಷ: ಸಾಕಷ್ಟು ಭರವಸೆಯೊಂದಿಗೆ ನಿಮ್ಮ ವಾರವು ಪ್ರಾರಂಭಗೊಳ್ಳಲಿದೆ. ನಿಮ್ಮ ವೈಯಕ್ತಿಕ ಬದುಕಿನ ಕುರಿತು ಸಾಕಷ್ಟು ಚಿಂತೆ ನಿಮ್ಮನ್ನು ಕಾಡಬಹುದು. ವೈವಾಹಿಕ ಬದುಕಿನ ಚಿಂತೆಯು ನಿಮ್ಮ ಸಮಸ್ಯೆಗೆ ಕಾರಣವಾಗಿರಬಹುದು. ನಿಮ್ಮ ಮಕ್ಕಳಿಂದ ನೀವು ಸಂತಸ ಪಡೆಯಲಿದ್ದೀರಿ. ಆದರೆ ಜೀವನ ಸಂಗಾತಿಯ ಜೊತೆಗಿನ ಸಂಬಂಧದಲ್ಲಿ ಸಮಸ್ಯೆಗಳು ಇರಬಹುದು. ಈ ಸಂಬಂಧದಲ್ಲಿ ಸುಧಾರಣೆ ತರಲು ಯತ್ನಿಸಿ. ಪ್ರೇಮ ಸಂಬಂಧದಲ್ಲಿರುವವರು ತಮ್ಮ ಸುಂದರ ಸಂಬಂಧವನ್ನು ಆನಂದಿಸಲಿದ್ದಾರೆ. ನಿಮ್ಮ ನಡುವಿನ ಅಂತರವು ಕಡಿಮೆಯಾಗಲಿದೆ. ನೀವು ಪರಸ್ಪರ ಅರಿತುಕೊಳ್ಳಲು ಯತ್ನಿಸಲಿದ್ದೀರಿ. ಒಳ್ಳೆಯ ಕೆಲಸವನ್ನು ಮಾಡುವ ಮೂಲಕ ಅವರ ಮನಸ್ಸಿನಲ್ಲಿ ಸ್ಥಾನ ಪಡೆಯಲಿದ್ದೀರಿ. ವ್ಯಾಪಾರೋದ್ಯಮಿಗಳು ಸಾಕಷ್ಟು ಒತ್ತಡದಲ್ಲಿ ಕೆಲಸ ಮಾಡಬೇಕಾದೀತು. ಏನಾದರೂ ಒಳ್ಳೆಯದನ್ನು ಮಾಡಲು ನೀವು ಅವಕಾಶ ಪಡೆಯಲಿದ್ದೀರಿ. ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಉತ್ತಮ ಸಾಧನೆ ಮಾಡಲಿದ್ದಾರೆ. ಅವರ ಏಕಾಗ್ರತೆಯು ಹೆಚ್ಚಲಿದೆ. ನೀವು ಪ್ರಯಾಣಿಸಲು ಇಚ್ಛಿಸುವುದಾದರೆ, ವಾರದ ನಡುವಿನ ದಿನಗಳು ಉತ್ತಮ. ನಿಮ್ಮ ಆರೋಗ್ಯದ ಕುರಿತು ಕಾಳಜಿ ವಹಿಸಿ.
ವೃಷಭ: ಈ ವಾರದಲ್ಲಿ ನಿಮ್ಮ ಮಾನಸಿಕ ಒತ್ತಡ ಹೆಚ್ಚಲಿದೆ. ಆರಂಭದಲ್ಲಿ ನೀವು ಸಾಕಷ್ಟು ಒತ್ತಡಕ್ಕೆ ಒಳಗಾಗಬಹುದು. ಇದರಿಂದ ಹೊರ ಬರಲು ನೀವು ವಾರದ ನಡುವಿನ ದಿನಗಳ ತನಕ ಕಾಯಬೇಕು. ನಿಮ್ಮ ಖರ್ಚುವೆಚ್ಚಗಳಿಗೆ ನೀವು ಗಮನ ನೀಡಿದರೆ ಎಲ್ಲವೂ ಸರಿಯಾಗಲಿದೆ. ವಿವಾಹಿತ ವ್ಯಕ್ತಿಗಳು ತಮ್ಮ ಕೌಟುಂಬಿಕ ಬದುಕಿನಲ್ಲಿ ಒಂದಷ್ಟು ಸಮಸ್ಯೆಗಳನ್ನು ಎದುರಿಸಬಹುದು. ಜೀವನ ಸಂಗಾತಿಯ ಜೊತೆಗಿನ ಸಂಬಂಧವು ಹಳಸುವ ಸಾಧ್ಯತೆ ಇದ್ದು ಇದರಿಂದ ಸಮಸ್ಯೆಗಳು ಉಂಟಾಗಬಹುದು. ಆದರೆ ತಾಳ್ಮೆ ಕಳೆದುಕೊಳ್ಳಬೇಡಿ. ನಿಮ್ಮ ಪಾಲಿಗೆ ಒಳ್ಳೆಯ ಸಮಯ ಬರಲಿದೆ. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವಾರವು ಒಳ್ಳೆಯದು. ನಿಮ್ಮ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವುದಕ್ಕಾಗಿ ನೀವು ಒಂದಷ್ಟು ಧೈರ್ಯ ತೋರಬೇಕು ಹಾಗೂ ನಿಮ್ಮ ಪ್ರೇಮವನ್ನು ನಿಮ್ಮ ಪ್ರೇಮಿಯೊಂದಿಗೆ ಹಂಚಿಕೊಳ್ಳಬೇಕು. ಅನಗತ್ಯವಾಗಿ ಯಾರಿಗೂ ಹಣವನ್ನು ನೀಡಬೇಡಿ. ಇದನ್ನು ಹಿಂದಕ್ಕೆ ಪಡೆಯುವುದು ಕಷ್ಟಕರ. ಉದ್ಯೋಗದಲ್ಲಿರುವವರಿಗೆ ಈ ವಾರ ಉತ್ತಮ ಫಲ ದೊರೆಯಲಿದೆ. ನೀವು ಸಾಕಷ್ಟು ಓಡಾಡುವ ಅಗತ್ಯ ಬೀಳಬಹುದು. ಆದರೆ ಈ ಸಂದರ್ಭದಲ್ಲಿ ನಿಮ್ಮ ವ್ಯವಹಾರಕ್ಕೆ ಸಾಕಷ್ಟು ವೇಗ ದೊರೆಯಲಿದೆ.
ಮಿಥುನ: ಈ ವಾರವು ನಿಮಗೆ ಮುಂದಕ್ಕೆ ಹೆಜ್ಜೆ ಇಡಲು ಪ್ರೇರಣೆ ನೀಡಲಿದೆ. ಆದರೆ ಸಾಕಷ್ಟು ಸವಾಲುಗಳು ನಿಮಗೆ ಎದುರಾಗಲಿದ್ದು ನಿಮ್ಮ ದಾರಿಯಲ್ಲಿ ಅಡಚಣೆಯನ್ನುಂಟು ಮಾಡಬಹುದು. ಆದರೆ ತಾಳ್ಮೆಯಿಂದ ವರ್ತಿಸಿ ಈ ಸವಾಲುಗಳನ್ನು ನಿವಾರಿಸಲು ಯತ್ನಿಸಿ. ಆದಾಯದಲ್ಲಿ ಸಾಕಷ್ಟು ಹೆಚ್ಚಳ ಉಂಟಾಗಲಿದೆ. ಇದರಿಂದ ನಿಮ್ಮ ಆತ್ಮವಿಶ್ವಾಸದಲ್ಲಿ ವೃದ್ಧಿ ಕಾಣಿಸಿಕೊಳ್ಳಲಿದೆ. ಆದರೆ ನಿಮ್ಮ ಆರೋಗ್ಯದ ಕುರಿತು ಕಾಳಜಿ ವಹಿಸಿ. ಕೆಲಸದ ಸ್ಥಳದಲ್ಲಿ ಪರಿಸ್ಥಿತಿಯು ಅನುಕೂಲಕರವಾಗಿದೆ. ವ್ಯವಹಾರ ನಡೆಸಲು ಈ ಸಮಯ ಅನುಕೂಲಕರ. ಹೂಡಿಕೆಯಿಂದ ಲಾಭ ದೊರೆಯಲಿದೆ. ಈ ಹಿಂದೆ ಮಾಡಿದ ಹೂಡಿಕೆಗಳಿಗೆ ಫಲ ದೊರೆಯಲಿದೆ. ಸರ್ಕಾರಿ ವಲಯದ ಯಾವುದೇ ಯೋಜನೆಯಿಂದ ಲಾಭ ಗಳಿಸುವಲ್ಲಿ ಯಶಸ್ಚಿಯಾಗಲಿದ್ದೀರಿ. ಮನೆಯ ವಾತಾವರಣವು ಚೆನ್ನಾಗಿರಲಿದೆ. ನಿಮ್ಮ ಗೆಳೆಯರ ಜೊತೆ ಸಮಯ ಕಳೆಯಲು ನಿಮಗೆ ಅವಕಾಶ ಸಿಗಬಹುದು. ನಿಮ್ಮ ಪ್ರೇಮಿಯ ಆರೋಗ್ಯದಲ್ಲಿ ಕುಸಿತ ಉಂಟಾಗಬಹುದು. ವೈವಾಹಿಕ ಜೀವನ ಸಾಗಿಸುವವರ ಮುಖದಲ್ಲಿ ಸಂತಸ ಕಾಣಿಸಲಿದೆ. ವಾರದ ಕೊನೆಯ ಎರಡು ದಿನಗಳು ಪ್ರಯಾಣಕ್ಕೆ ಅತ್ಯುತ್ತಮ.
ಕರ್ಕಾಟಕ: ಈ ವಾರವು ನಿಮಗೆ ಶುಭ ಸುದ್ದಿಯನ್ನು ತರಲಿದೆ. ನಿಮ್ಮ ಕೆಲಸದ ಸ್ಥಳದಲ್ಲಿ ಬದಲಾವಣೆ ಉಂಟಾಗಬಹುದು. ಕೆಲಸ ಬದಲಾಯಿಸುವ ಕುರಿತು ನೀವು ಯೋಚಿಸಬಹುದು ಅಥವಾ ನಿಮಗೆ ವರ್ಗಾವಣೆಯಾಗಬಹುದು. ನಿಮ್ಮ ಕೆಲಸದ ಒತ್ತಡವು ಹೆಚ್ಚಾಗಬಹುದು. ಕುಟುಂಬಕ್ಕೆ ಹೆಚ್ಚು ಸಮಯವನ್ನು ಮೀಸಲಿಡಲು ಸಾಧ್ಯವಾಗದು. ಕುಟುಂಬದಲ್ಲಿ ಒತ್ತಡ ಹೆಚ್ಚಲಿದೆ. ನೀವು ಪರಸ್ಪರ ದೂರಬಹುದು. ಹೀಗಾಗಿ ಎಚ್ಚರಿಕೆಯಿಂದ ಇರಿ. ವ್ಯವಹಾರದ ವಿಚಾರದಲ್ಲಿ ಸಮಯವು ಅನುಕೂಲಕರವಾಗಿದೆ. ಇದರಿಂದ ನಿಮಗೆ ಲಾಭ ದೊರೆಯಲಿದೆ. ಉದ್ಯೋಗದಲ್ಲಿರುವವರು ಕಠಿಣ ಶ್ರಮ ಪಡಲಿದ್ದಾರೆ. ಆದರೆ ಕೆಲವೊಂದು ಸಮಸ್ಯೆಗಳು ಅವರನ್ನು ಬಾಧಿಸಬಹುದು. ವಿವಾಹಿತ ವ್ಯಕ್ತಿಗಳು ತಮ್ಮ ಕೌಟುಂಬಿಕ ಬದುಕಿನಲ್ಲಿ ಸಂತಸದ ಕ್ಷಣಗಳನ್ನು ಕಳೆಯಲಿದ್ದಾರೆ. ಜೀವನ ಸಂಗಾತಿಯ ಜೊತೆಗಿನ ಆಪ್ತತೆಯು ಹೆಚ್ಚಲಿದೆ. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವಾರವು ಸಾಧಾರಣ ಫಲ ನೀಡಲಿದೆ. ನಿಮ್ಮ ಕುಟುಂಬದ ಸದಸ್ಯರ ಸಮ್ಮತಿಯನ್ನು ಪಡೆದ ನಂತರವೇ ನಿಮ್ಮ ಸಂಬಂಧದಲ್ಲಿ ನೀವು ಮುಂದುವರಿಯಬೇಕು. ಪ್ರಯಾಣಿಸಲು ಈ ಸಮಯ ಅನುಕೂಲಕರ.
ಸಿಂಹ: ಈ ವಾರ ನಿಮಗೆ ಮಿಶ್ರ ಫಲಿತಾಂಶ ದೊರೆಯಲಿದೆ. ವಾರದ ಆರಂಭದಲ್ಲಿ ನೀವು ದೀರ್ಘ ಪ್ರಯಾಣಕ್ಕೆ ಹೋಗಬಹುದು. ಇದು ನಿಮಗೆ ದುಬಾರಿ ಎನಿಸಬಹುದು. ಆದರೆ ಯಾರಾದರೂ ಹೊಸ ವ್ಯಕ್ತಿಯನ್ನು ಭೇಟಿಯಾಗಲು ನಿಮಗೆ ಅವಕಾಶ ದೊರೆಯಬಹುದು. ಇದು ನಿಮಗೆ ಭವಿಷ್ಯದಲ್ಲಿ ಉಪಯೋಗಕ್ಕೆ ಬರಲಿದೆ. ಕೆಲಸದಲ್ಲಿ ನಿಮ್ಮ ಸ್ಥಾನವು ಚೆನ್ನಾಗಿರಲಿದೆ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಜನರು ಏನಾದರೂ ಹೊಸತು ಹಾಗೂ ಭಿನ್ನವಾದುದನ್ನು ಯೋಚಿಸಬೇಕು. ಎಲ್ಲರೂ ನಡೆದ ದಾರಿಯನ್ನು ಬಿಟ್ಟು ಏನಾದರೂ ಹೊತಸನ್ನು ಮಾಡಿದಾಗ ಮಾತ್ರವೇ ವ್ಯವಹಾರವನ್ನು ಅವರು ಮುಂದಕ್ಕೆ ಕೊಂಡೊಯ್ಯಬಹುದು. ನಿಮ್ಮ ಲಾಭ ಇದನ್ನು ಅವಲಂಬಿಸಿದೆ. ಈ ವಾರದಲ್ಲಿ ನಿಮ್ಮ ಆದಾಯವು ಸಾಮಾನ್ಯ ಮಟ್ಟದಲ್ಲಿರಲಿದೆ ಹಾಗೂ ಆರೋಗ್ಯವು ಚೆನ್ನಾಗಿರಲಿದೆ. ಈ ವಾರವು ಪ್ರೇಮ ಜೀವನಕ್ಕೆ ಒಳ್ಳೆಯದು. ನೀವು ನಿಮ್ಮ ಸಂಬಂಧದಲ್ಲಿ ಮುಂದೆ ಸಾಗಲಿದ್ದೀರಿ. ವಾರದ ಆರಂಭಿಕ ದಿನಗಳು ಪ್ರವಾಸಕ್ಕೆ ಹೋಗಲು ಅತ್ಯುತ್ತಮ. ವಿದ್ಯಾರ್ಥಿಗಳು ತಮ್ಮ ಅಧ್ಯಯನಕ್ಕೆ ಗಮನ ಹರಿಸುವಲ್ಲಿ ಸಮಸ್ಯೆ ಎದುರಿಸಲಿದ್ದಾರೆ.
ಕನ್ಯಾ: ಈ ವಾರದ ಆರಂಭವು ದುರ್ಬಲವಾಗಿದ್ದು ಏನಾದರೂ ವಿಷಯದ ಕುರಿತ ಒತ್ತಡವು ನಿಮ್ಮನ್ನು ಕಾಡಬಹುದು. ಇದರಿಂದಾಗಿ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಉಂಟಾಗಬಹುದು. ಆದರೆ ಇದರಿಂದ ಹೊರಬರಲು ನಿಮಗೆ ಅವಕಾಶ ಮತ್ತು ಆತ್ಮವಿಶ್ವಾಸ ಎರಡೂ ದೊರೆಯಬಹುದು. ಕೆಲವೊಂದು ಹೊಸ ಕೆಲಸಕ್ಕೆ ನೀವು ಹೆಚ್ಚಿನ ಗಮನ ನೀಡಬೇಕು. ಉದ್ಯೋಗದಲ್ಲಿರುವವರಿಗೆ ಈ ವಾರ ಉತ್ತಮ ಫಲ ದೊರೆಯಲಿದೆ. ನಿಮ್ಮ ಪ್ರಯತ್ನ ಹಾಗೂ ಕೆಲಸದ ವೇಗದ ಕಾರಣ ಕೆಲಸದ ಸ್ಥಳದಲ್ಲಿ ನಿಮ್ಮ ಸ್ಥಾನವು ಭದ್ರಗೊಳ್ಳಲಿದೆ. ವಿವಾಹಿತ ವ್ಯಕ್ತಿಗಳು ತಮ್ಮ ಕೌಟುಂಬಿಕ ಬದುಕಿನ ಒತ್ತಡದಿಂದ ಹೊರ ಬರಲಿದ್ದಾರೆ. ಅಲ್ಲದೆ ಜೀವನ ಸಂಗಾತಿಯ ಕುಟುಂಬದ ಜೊತೆಗೆ ಸಾಮರಸ್ಯವನ್ನು ಸುಧಾರಿಸಲು ಯತ್ನಿಸಲಿದ್ದಾರೆ. ನಿಮ್ಮ ಪ್ರೇಮಿಗಾಗಿ ಏನಾದರೂ ವಿಶೇಷವಾದುದನ್ನು ಯೋಜಿಸಬಹುದು. ವಾರದ ನಡುವಿನ ದಿನಗಳು ಪ್ರಯಾಣಿಸುವುದಕ್ಕೆ ಅನುಕೂಲಕರ. ಯಶಸ್ಸು ದೊರೆಯುವ ಎಲ್ಲಾ ಸಾಧ್ಯತೆಗಳಿವೆ. ಹೀಗಾಗಿ ಸಮಯವನ್ನು ಚೆನ್ನಾಗಿ ಬಳಸಿಕೊಳ್ಳಿ ಹಾಗೂ ಕಠಿಣ ಶ್ರಮವನ್ನು ಮುಂದುವರಿಸಿ.
ತುಲಾ: ಈ ವಾರ ನಿಮಗೆ ಸಾಮಾನ್ಯ ಫಲ ದೊರೆಯಲಿದೆ. ನಿಮ್ಮ ಮತ್ತು ನಿಮ್ಮ ಜೀವನ ಸಂಗಾತಿಯ ಆರೋಗ್ಯದ ಕುರಿತು ಕಾಳಜಿ ವಹಿಸಿ. ಇಲ್ಲದಿದ್ದರೆ ಯಾರಾದರೂ ಒಬ್ಬರ ಆರೋಗ್ಯವು ನಿಮ್ಮ ಚಿಂತೆಗೆ ಕಾರಣವೆನಿಸಬಹುದು. ಅಲ್ಲದೆ ನಿಮ್ಮ ಖರ್ಚುವೆಚ್ಚಗಳಲ್ಲಿ ಹೆಚ್ಚಳ ಉಂಟಾಗಬಹುದು. ಆದರೆ ನಿಮ್ಮ ಆದಾಯವು ಚೆನ್ನಾಗಿರಲಿದೆ. ನೀವು ಯಶಸ್ಸಿನ ಮೆಟ್ಟಿಲೇರಲಿದ್ದೀರಿ. ನೀವು ವ್ಯವಹಾರದಲ್ಲಿ ಯಶಸ್ಸು ಸಾಧಿಸಲಿದ್ದೀರಿ. ನಿಮ್ಮ ಸಂಗಾತಿಯ ಜೊತೆಗೆ ಕಲಹ ಉಂಟಾಗುವ ಸಾಧ್ಯತೆ ಇದೆ. ಅವರ ಕುರಿತು ಕಾಳಜಿ ವಹಿಸಿ. ಅವರೊಂದಿಗೆ ಉತ್ತಮ ಬಾಂಧವ್ಯ ಕಾಪಾಡಲು ಯತ್ನಿಸಿ. ಈ ವಾರದಲ್ಲಿ ಉದ್ಯೋಗದಲ್ಲಿರುವವರು ಸಾಕಷ್ಟು ಏರುಪೇರನ್ನು ಕಾಣಲಿದ್ದಾರೆ. ನಿಮ್ಮ ಕೆಲಸದ ಮೇಲೆ ಗಮನ ನೀಡಲು ನಿಮಗೆ ಸಾಧ್ಯವಾಗದೆ ಇರಬಹುದು. ಕೆಲಸದಲ್ಲಿ ನೀವು ಸಮಸ್ಯೆ ಎದುರಿಸಬಹುದು. ನೀವು ನಿಮ್ಮ ಕುಟುಂಬದ ಸದಸ್ಯರಿಂದ ಬೆಂಬಲ ಪಡೆಯಲಿದ್ದೀರಿ. ಮುಂದಿನ ಹಂತಕ್ಕೆ ಹೆಜ್ಜೆ ಇಟ್ಟು ಮದುವೆಗೆ ಸಿದ್ಧತೆ ಮಾಡಲು ಪ್ರಾರಂಭಿಸಬಹುದು. ವಿವಾಹಿತ ಜನರು ತಮ್ಮ ವೈವಾಹಿಕ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಲಿದ್ದಾರೆ. ಈಗ ಸಮಯವು ಅನುಕೂಲಕರವಾಗಿದೆ. ನಿಮ್ಮ ಆರೋಗ್ಯದ ಕುರಿತು ಕಾಳಜಿ ವಹಿಸಿ.
ವೃಶ್ಚಿಕ: ಈ ವಾರ ನಿಮಗೆ ಸಾಧಾರಣವಾಗಿ ಫಲಪ್ರದ ಎನಿಸಲಿದೆ. ಖರ್ಚುವೆಚ್ಚವು ವಿಪರೀತವಾಗಿ ಹೆಚ್ಚಲಿದ್ದು ನೀವು ಈ ಕುರಿತು ಗಮನ ನೀಡಲೇಬೇಕು. ಇಲ್ಲದಿದ್ದರೆ ಹಣಕಾಸಿನ ಸ್ಥಿತಿಯಲ್ಲಿ ಕುಸಿತ ಉಂಟಾಗಬಹುದು. ನಿಮ್ಮ ಒಂದಷ್ಟು ಉಳಿತಾಯವು ಖರ್ಚಾಗಬಹುದು. ಆದರೆ ಧೈರ್ಯ ಕಳೆದುಕೊಳ್ಳಬೇಡಿ. ಮುಂದಿನ ದಿನಗಳಲ್ಲಿ ಲಾಭ ದೊರೆಯಲಿದೆ. ಉದ್ಯೋಗದಲ್ಲಿರುವವರು ಸಾಕಷ್ಟು ಓಡಾಡಬೇಕು. ಪ್ರಯಾಣದಿಂದಾಗಿ ಆಯಾಸ ಅಥವಾ ಆನಾರೋಗ್ಯ ಉಂಟಾಗಬಹುದು. ಹೀಗಾಗಿ ಎಚ್ಚರಿಕೆಯಿಂದ ಇರಿ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು. ಶುದ್ಧ ನೀರು ಮತ್ತು ಒಳ್ಳೆಯ ಆಹಾರವನ್ನು ಸೇವಿಸುವುದು ಅಗತ್ಯ. ಮನೆಯ ಆಹಾರವನ್ನು ಸೇವಿಸುವುದು. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರಿಗೆ ಸಾಮಾನ್ಯ ಫಲ ದೊರೆಯಲಿದೆ. ವಿವಾಹಿತ ವ್ಯಕ್ತಿಗಳು ಕುಟುಂಬದಲ್ಲಿ ಒತ್ತಡ ಅನುಭವಿಸಲಿದ್ದಾರೆ. ಅನಗತ್ಯ ಚಿಂತೆಗಳು ಅವರ ಸಂಬಂಧವನ್ನು ದುರ್ಬಲಗೊಳಿಸಬಹುದು. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವಾರವು ಸಾಮಾನ್ಯ ವಾರವೆನಿಸಲಿದೆ. ನಿಮ್ಮ ಪ್ರೇಮಿಯ ಇಚ್ಛೆಯನ್ನು ಈಡೇರಿಸಲು ನೀವು ಯತ್ನಿಸಬಹುದು. ವಾರದ ಆರಂಭಿಕ ದಿನಗಳು ಪ್ರವಾಸಕ್ಕೆ ಹೋಗಲು ಉತ್ತಮ. ವಿದ್ಯಾರ್ಥಿಗಳಿಗೆ ತಮ್ಮ ಅಧ್ಯಯನಕ್ಕೆ ಗಮನ ನೀಡದೆ ಇರಬಹುದು.
ಧನು: ಈ ವಾರದಲ್ಲಿ ನೀವು ಎದುರಾಳಿಗಳನ್ನು ಹಿಂದಿಕ್ಕಲಿದ್ದೀರಿ. ವ್ಯವಹಾರದಲ್ಲಿ ಕ್ಷಿಪ್ರವಾಗಿ ನೀವು ಮುಂದುವರಿಯಲಿದ್ದೀರಿ. ನೀವು ಅಳವಡಿಸಿಕೊಂಡಿರುವ ಕಾರ್ಯತಂತ್ರವು ನಿಮ್ಮ ವ್ಯವಹಾರವನ್ನು ಮುಂದಕ್ಕೆ ಕೊಂಡೊಯ್ಯಲು ಸಹಕಾರಿಯಾಗಲಿದೆ. ಅಲ್ಲದೆ ನಿಮಗೆ ಸಾಕಷ್ಟು ಲಾಭ ದೊರೆಯಲಿದೆ. ಸರ್ಕಾರಿ ವಲಯದಿಂದ ಏನಾದರೂ ಪ್ರಯೋಜನ ದೊರೆಯುವ ಸಾಧ್ಯತೆ ಇದೆ. ಉದ್ಯೋಗದಲ್ಲಿರುವ ವೃತ್ತಿಪರರು ಸರ್ಕಾರಿ ಯೋಜನೆಯ ಲಾಭ ಪಡೆಯಲಿದ್ದಾರೆ. ನಿಮ್ಮ ಕೆಲಸದಲ್ಲಿ ನೀವು ಪ್ರಾವಿಣ್ಯತೆ ಗಳಿಸಲಿದ್ದು ನಿಮ್ಮ ಕೆಲಸವು ನಿಮಗೆ ಉತ್ತಮ ಫಲಿತಾಂಶ ಗಳಿಸಲಿದೆ. ಆರೋಗ್ಯದಲ್ಲಿನ ಕುಸಿತವು ನಿಮ್ಮ ಚಿಂತೆಗೆ ಕಾರಣವಾದೀತು. ನಿಮ್ಮ ಕುಟುಂಬದ ಸದಸ್ಯರ ಪಾಲಿನ ಜವಾಬ್ದಾರಿಯನ್ನು ಈಡೇರಿಸಲಿದ್ದೀರಿ. ಅವರ ಬೆಂಬಲವನ್ನು ನೀವು ಪಡೆಯಲಿದ್ದೀರಿ. ವಿವಾಹಿತ ವ್ಯಕ್ತಿಗಳು ತಮ್ಮ ಕೌಟುಂಬಿಕ ಬದುಕಿನಲ್ಲಿ ಸಂತಸ ಅನುಭವಿಸಲಿದ್ದಾರೆ. ನಿಮ್ಮ ಜೀವನ ಸಂಗಾತಿಯ ಕಾರಣ ದೊಡ್ಡ ಪ್ರಮಾಣದ ಪ್ರಯೋಜನವನ್ನು ನೀವು ಗಳಿಸಲಿದ್ದೀರಿ. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವಾರವು ದುರ್ಬಲ ವಾರವೆನಿಸಲಿದೆ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಜನರು ತಮ್ಮ ವ್ಯವಹಾರ ಪಾಲುದಾರರ ಕಾರಣ ಒಳ್ಳೆಯ ಲಾಭ ಗಳಿಸಲಿದ್ದಾರೆ. ವಾರದ ಆರಂಭಿಕ ದಿನವು ಪ್ರಯಾಣಕ್ಕೆ ಅತ್ಯುತ್ತಮ.
ಮಕರ: ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ವಾರದ ಆರಂಭದಲ್ಲಿ ಮಕ್ಕಳಿಂದ ಏನಾದರೂ ಒಳ್ಳೆಯ ಸುದ್ದಿ ದೊರೆಯುತ್ತದೆ. ಈ ಕಾಲವು ವೈವಾಹಿಕ ಬದುಕಿಗೆ ಅನುಕೂಲಕರ. ಜೀವನ ಸಂಗಾತಿಯು ನಿಮ್ಮೊಂದಿಗೆ ಪ್ರೀತಿಯಿಂದ ಮಾತನಾಡಲಿದ್ದಾರೆ. ಅತ್ತೆ ಮಾವಂದಿರ ಜೊತೆಗಿನ ಸಂಬಂಧವು ಚೆನ್ನಾಗಿರಲಿದೆ. ವಾರದ ಆರಂಭಿಕ ದಿನಗಳು ನಿಮ್ಮ ಪ್ರೇಮ ಬದುಕಿಗೆ ಉತ್ತಮ. ನಿಮ್ಮ ಪ್ರೇಮಿಯು ಅವರ ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳಬಹುದು. ಇದನ್ನು ನೀವು ಇಷ್ಟಪಡಬಹುದು. ಅಲ್ಲದೆ ಅವರ ಮೇಲಿನ ಆತ್ಮವಿಶ್ವಾಸವು ಹೆಚ್ಚಲಿದೆ. ಉದ್ಯೋಗದಲ್ಲಿರುವವರಿಗೆ ಇದು ವಿಶೇಷ ವಾರ ಎನಿಸಲಿದೆ. ಸಂಬಳದಲ್ಲಿ ಹೆಚ್ಚಳ ಉಂಟಾಗುವ ಸಾಧ್ಯತೆ ಇದೆ. ಅತಿಯಾದ ಆತ್ಮವಿಶ್ವಾಸದಿಂದ ಯಾವುದೇ ತಪ್ಪನ್ನು ಮಾಡಬೇಡಿ. ತಂದೆಯ ಆರೋಗ್ಯದಲ್ಲಿ ಕುಸಿತ ಉಂಟಾಗಬಹುದು. ಹೀಗಾಗಿ ಅವರ ಕುರಿತು ಕಾಳಜಿ ವಹಿಸಿ. ನಿಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು.
ಕುಂಭ: ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ವಾರದ ಆರಂಭದಲ್ಲಿ ಕೆಲವು ಅತಿಥಿಗಳು ನಿಮ್ಮ ಮನೆಗೆ ಬರಲಿದ್ದು ಅವರೊಂದಿಗೆ ಕಾಲ ಕಳೆಯುವುದನ್ನು ನೀವು ಆನಂದಿಸಲಿದ್ದೀರಿ. ಅದೃಷ್ಟದ ಬಲದಿಂದ ವ್ಯವಹಾರದಲ್ಲಿ ನೀವು ಉತ್ತಮ ಯಶಸ್ಸನ್ನು ಗಳಿಸಲಿದ್ದೀರಿ. ನಿಮ್ಮ ಸಂಸ್ಥೆಯು ಪ್ರಗತಿ ಸಾಧಿಸಲಿದೆ. ನೀವು ಸಮಾಜದಲ್ಲಿ ಗೌರವ ಗಳಿಸಲಿದ್ದೀರಿ. ಕಾಲ ಕಳೆದಂತೆ ಪರಿಸ್ಥಿತಿಯು ನಿಯಂತ್ರಣಕ್ಕೆ ಬರಲಿದೆ. ಕೆಲಸದ ಮೇಲೆ ಗಮನ ನೀಡಲು ನಿಮಗೆ ಸಾಧ್ಯವಾಗಲಿದೆ. ವಿವಾಹಿತ ವ್ಯಕ್ತಿಗಳು ತಮ್ಮ ಕೌಟುಂಬಿಕ ಜೀವನದಲ್ಲಿ ಸಂತಸ ಅನುಭವಿಸಲಿದ್ದಾರೆ. ತಮ್ಮ ಜೀವನ ಸಂಗಾತಿಯ ಜೊತೆ ಎಲ್ಲಾದರೂ ಹೋಗಲು ಯೋಜನೆ ರೂಪಿಸಬಹುದು. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ಈ ವಾರವು ತುಂಬಾ ಅನುಕೂಲಕರ. ಮನಸ್ಸಿನಲ್ಲಿ ಏನನ್ನೂ ಬಚ್ಚಿಟ್ಟುಕೊಳ್ಳದೆ ಎಲ್ಲವನ್ನೂ ನಿಮ್ಮ ಪ್ರೇಮಿಗೆ ಹೇಳಿ ಬಿಡಿ. ಇದು ಪರಸ್ಪರ ನಂಬಿಕೆಯನ್ನು ಹೆಚ್ಚಿಸಲಿದೆ. ಗೆಳೆಯರ ಬೆಂಬಲವು ಕೆಲಸದಲ್ಲಿ ಯಶಸ್ಸನ್ನು ತರಲಿದೆ. ವಿದ್ಯಾರ್ಥಿಗಳಿಗೆ ಇದು ಸಕಾಲ. ನಿಮ್ಮ ಕಠಿಣ ಶ್ರಮವು ಉತ್ತಮ ಫಲಿತಾಂಶ ತರಲಿದೆ. ವಾರದ ನಡುವಿನ ದಿನಗಳು ಪ್ರಯಾಣಿಸಲು ಅನುಕೂಲಕರ.
ಮೀನ: ಈ ವಾರ ನಿಮಗೆ ಸಾಮಾನ್ಯ ಫಲ ದೊರೆಯಲಿದೆ. ವಾರದ ಆರಂಭದಲ್ಲಿ ನೀವು ಒಂದಷ್ಟು ಹಣವನ್ನು ಹೂಡಿಕೆ ಮಾಡಬೇಕಾದೀತು. ಏಕೆಂದರೆ ಆರ್ಥಿಕ ಸ್ಥಿತಿಯು ಈ ಸಮಯದಲ್ಲಿ ಸ್ವಲ್ಪ ದುರ್ಬಲವಾಗಿದೆ. ವಾರದ ನಡುವಿನ ದಿನಗಳು ನಿಮ್ಮ ಪಾಲಿಗೆ ಉತ್ತಮ. ನಿಮ್ಮ ಖರ್ಚುವೆಚ್ಚಗಳಲ್ಲಿ ಇಳಿಕೆ ಉಂಟಾಗಲಿದ್ದು ಆದಾಯದಲ್ಲಿ ಏರಿಕೆ ಉಂಟಾಗಲಿದೆ. ವಾರದ ಕೊನೆಯ ದಿನಗಳಲ್ಲಿ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಉಂಟಾಗಲಿದೆ. ಕೌಟುಂಬಿಕ ಬದುಕು ಸಂತಸದಿಂದ ಕೂಡಿರಲಿದೆ. ಕೌಟುಂಬಿಕ ಬದುಕಿನಲ್ಲಿ ಸಣ್ಣಪುಟ್ಟ ಸಂಘರ್ಷ ಉಂಟಾದರೂ ನಿಮ್ಮ ಸಂಬಂಧವು ಒಟ್ಟಾರೆಯಾಗಿ ಚೆನ್ನಾಗಿರಲಿದೆ. ನೀವು ಯಾರನ್ನಾದರೂ ಪ್ರೀತಿಸುತ್ತಿದ್ದರೆ ನಿಮ್ಮ ಸಂಬಂಧಕ್ಕೆ ಬದ್ಧರಾಗಿರಿ ಹಾಗೂ ನಿಮ್ಮ ಪ್ರೇಮಿಯ ಮನಸ್ಸನ್ನು ಗೆಲ್ಲಲು ಯತ್ನಿಸಿ. ಪ್ರಾಮಾಣಿಕತೆಯಿಂದ ಯತ್ನಿಸಿದರೆ ಯಶಸ್ಸು ದೊರೆಯಲಿದೆ. ನೀವು ಅಧ್ಯಯನ ಮಾಡಿದರೆ ನಿಮ್ಮ ಕಠಿಣ ಶ್ರಮಕ್ಕೆ ತಕ್ಕುದಾದ ಶ್ರಮ ದೊರೆಯಲಿದೆ. ವಾರದ ಕೊನೆಯ ದಿನಗಳು ಪ್ರವಾಸಕ್ಕೆ ಹೋಗಲು ಅತ್ಯುತ್ತಮ.