ಮೇಷ: ಈ ವಾರ ನಿಮಗೆ ಅದ್ಭುತ ಫಲ ದೊರೆಯಲಿದೆ. ನಿಮ್ಮ ಪ್ರೇಮದ ಬದುಕು ಮತ್ತು ಸಂಬಂಧವು ಅದ್ಭುತವಾಗಿರಲಿದೆ. ಅಲ್ಲದೆ ನೀವು ಸಣ್ಣ ಪ್ರಮಾಣದ ವಿರಾಮದ ಪ್ರವಾಸಕ್ಕೆ ಯೋಜನೆ ರೂಪಿಸಬಹುದು. ಈ ಮೂಲಕ ಸಣ್ಣಪುಟ್ಟ ವಿವಾದಗಳು ಬಗೆಹರಿಯಲಿವೆ. ಸಂಬಂಧದಲ್ಲಿರುವವರು ಏನಾದರೂ ಆಸಕ್ತಿದಾಯಕ ವಿಚಾರವನ್ನು ಯೋಜಿಸಬೇಕು ಅಥವಾ ಡಿನ್ನರ್‌ಗಾಗಿ ಹೊರ ಹೋಗಬೇಕು. ಅಲ್ಲದೆ ನಿಮ್ಮ ಸಂಬಂಧ ಮತ್ತು ಭವಿಷ್ಯದ ಕುರಿತು ನಿಮ್ಮ ಸಂಗಾತಿಗೆ ನಿಮ್ಮ ಬದ್ಧತೆಯನ್ನು ವ್ಯಕ್ತಪಡಿಸಿ. ಕಾರ್ಯಸ್ಥಳದಲ್ಲಿ ಜಾಗರೂಕರಾಗಿರಿ. ಏಕೆಂದರೆ ಇದು ಸಾಧಾರಣ ಸಮಯವಾಗಿದೆ. ನಿಮ್ಮ ಕೆಲಸದ ಫಲಿತಾಂಶದಲ್ಲಿ ಏರುಪೇರು ಉಂಟಾಗಬಹುದು. ನಿಮ್ಮ ಸಹೋದ್ಯೋಗಿಗಳೊಂದಿಗೆ ವಾದಕ್ಕಿಳಿಯಬೇಡಿ. ಏಕೆಂದರೆ ಇದು ಕೆಲಸದ ಸ್ಥಳದಲ್ಲಿ ಒತ್ತಡದ ವಾತಾವರಣವನ್ನು ರೂಪಿಸಬಹುದು. ವ್ಯಾಪಾರೋದ್ಯಮಿಗಳಿಗೆ ಈ ವಾರವು ಫಲಪ್ರದ ಎನಿಸಲಿದೆ. ವಿದ್ಯಾರ್ಥಿಗಳ ಪಾಲಿಗೆ ಈ ವಾರವು ಚೆನ್ನಾಗಿರಲಿದೆ. ಅವರು ತಮ್ಮ ಅಧ್ಯಯನದ ಮೇಲೆ ಏಕಾಗ್ರತೆ ಸಾಧಿಸಲಿದ್ದಾರೆ. ಅವರು ಪೂರಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳುವುದು ಒಳ್ಳೆಯದು. ಈ ವಾರದಲ್ಲಿ ಆರೋಗ್ಯವು ಚೆನ್ನಾಗಿರಲಿದೆ. ಆದರೂ ನಿಮ್ಮ ಆಹಾರಕ್ರಮದ ಕುರಿತು ನೀವು ಕಾಳಜಿ ವಹಿಸಬೇಕು ಹಾಗೂ ಕರಿದ ತಿಂಡಿಗಳನ್ನು ದೂರವಿಡಬೇಕು. ನೀವು ಪ್ರಯಾಣಕ್ಕೆ ಯೋಜನೆ ರೂಪಿಸುವುದಾದರೆ ಈ ವಾರದ ಆರಂಭಿಕ ದಿನಗಳು ಸಕಾಲ.
ವೃಷಭ: ಈ ವಾರವು ಸರಾಸರಿ ಫಲಿತಾಂಶಗಳೊಂದಿಗೆ ಪ್ರಾರಂಭಗೊಳ್ಳಲಿದೆ. ಆದರೆ ವಾರಾಂತ್ಯವು ಅತ್ಯುತ್ತಮ ಸಮಯವಾಗಿ ಪರಿಣಮಿಸಲಿದೆ. ವಿವಾಹಿತ ವ್ಯಕ್ತಿಗಳು ಮತ್ತು ಸಂಬಂಧದಲ್ಲಿರುವವರ ಪಾಲಿಗೆ ಈ ವಾರವು ಸಾಮಾನ್ಯ ವಾರವೆನಿಸಲಿದೆ. ಹೂಡಿಕೆ ಮಾಡಲು ಇಚ್ಛಿಸುವವರು ವಾರದ ಮಧ್ಯ ಭಾಗದಲ್ಲಿ ಹೂಡಿಕೆ ಮಾಡುವುದು ಒಳ್ಳೆಯದು. ಈ ವಾರದಲ್ಲಿ ಅದೃಷ್ಟವು ನಿಮ್ಮ ಪರವಾಗಿದೆ. ಈ ವಾರದಲ್ಲಿ ನಿಮ್ಮ ಸಂಗಾತಿಯೊಂದಿಗೆ ನೀವು ದೀರ್ಘ ಪ್ರವಾಸ ಅಥವಾ ವಿರಾಮಕ್ಕೆ ಯೋಜಿಸಬಹುದು. ಈ ವಾರದಲ್ಲಿ ನಿಮ್ಮ ಕೌಟುಂಬಿಕ ಜೀವನವು ಅದ್ಭುತವಾಗಿರಲಿದೆ. ಉದ್ಯೋಗದಲ್ಲಿರುವವರಿಗೆ ಅವರ ಇಚ್ಛೆಯಂತೆ ವರ್ಗಾವಣೆಗೊಳ್ಳುವ ಅವಕಾಶ ಸಿಗಬಹುದು. ಈ ವಾರದಲ್ಲಿ ವ್ಯಾಪಾರೋದ್ಯಮಿಗಳ ವ್ಯವಹಾರದಲ್ಲಿ ಒಳ್ಳೆಯ ಪ್ರಗತಿ ದೊರೆಯಲಿದೆ. ನಿಮ್ಮ ಸುಯೋಗವು ಆದಾಯದಲ್ಲಿ ಒಂದಷ್ಟು ಗಳಿಕೆಯನ್ನು ತಂದು ಕೊಡಲಿದೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಮೇಲೆ ಚೆನ್ನಾಗಿ ಗಮನ ನೀಡಬೇಕಾಗುತ್ತದೆ. ಹೀಗೆ ಮಾಡಲು ಅವರಿಗೆ ಸಾಧ್ಯವಾಗದೆ ಇದ್ದಲ್ಲಿ ಅವರು ಧ್ಯಾನವನ್ನು ಅಭ್ಯಸಿಸಬೇಕು. ಇದು ಅವರಿಗೆ ತಮ್ಮ ಅಧ್ಯಯನಗಳಲ್ಲಿ ಸಹಾಯ ಮಾಡುತ್ತದೆ. ಆರೋಗ್ಯದ ಸಮಸ್ಯೆ ಎದುರಿಸುತ್ತಿರುವ ಜನರು ಈ ವಾರದಲ್ಲಿ ಚೇತರಿಸಿಕೊಳ್ಳಲಿದ್ದಾರೆ. ಸಂತುಲಿತ ಆಹಾರವನ್ನು ಸೇವಿಸಿ ಮತ್ತು ಚೆನ್ನಾಗಿ ವ್ಯಾಯಾಮ ಮಾಡಿ. ನೀವು ಪ್ರಯಾಣಕ್ಕೆ ಯೋಜನೆ ರೂಪಿಸುವುದಾದರೆ ಈ ವಾರದ ನಡುವಿನ ದಿನಗಳು ಸಕಾಲ.
ಮಿಥುನ: ಈ ವಾರವು ನಿಮ್ಮ ಕೆಲಸದಲ್ಲಿ ಅತ್ಯುತ್ತಮ ಫಲಿತಾಂಶ ತಂದುಕೊಡಲಿದೆ. ವಿವಾಹಿತ ವ್ಯಕ್ತಿಗಳ ಸಂಬಂಧವು ಈ ವಾರದಲ್ಲಿ ಸ್ಥಿರತೆಯನ್ನು ಹೊಂದಿರಲಿದೆ. ಯಾವುದೇ ನಿರ್ದಿಷ್ಟ ಕೆಲಸಕ್ಕೆ ಸಂಬಂಧಿಸಿದ ಯೋಚನಾ ವಿಧಾನದಲ್ಲಿ ಕುಟುಂಬದ ಸದಸ್ಯರ ನಡುವೆ ಒಂದಷ್ಟು ವಿವಾದಗಳು ಉಂಟಾಗಬಹುದು. ಸಂಬಂಧದಲ್ಲಿರುವವರು, ತಮ್ಮ ಸಂಗಾತಿಯು ಯಾವುದೇ ಕಾರಣಕ್ಕೆ ತಮ್ಮಿಂದಾಗಿ ಒತ್ತಡಕ್ಕೆ ಒಳಗಾಗದಂತೆ ನೋಡಿಕೊಳ್ಳಬೇಕು. ಈ ವಾರದಲ್ಲಿ ಸಾಕಷ್ಟು ಏರಿಳಿತ ಉಂಟಾಗುವ ಕಾರಣ ಅವರನ್ನು ತೃಪ್ತಿಪಡಿಸಲು ಯತ್ನಿಸಿ. ನೀವು ಸರ್ಕಾರಿ ಕೆಲಸದಲ್ಲಿ ವ್ಯವಹರಿಸುತ್ತಿದ್ದರೆ ನಿಮಗೆ ಯಶಸ್ಸು ದೊರೆಯಲಿದೆ. ವ್ಯಾಪಾರೋದ್ಯಮಿಗಳಿಗೆ ತಮ್ಮ ಕ್ಷೇತ್ರದಲ್ಲಿ ಸುಧಾರಣೆ ಮತ್ತು ಪ್ರಗತಿ ದೊರೆಯಲಿದೆ. ಉದ್ಯೋಗದಲ್ಲಿರುವವರು ತಮ್ಮ ಕೆಲಸದ ಮೇಲೆ ಉತ್ತಮ ಏಕಾಗ್ರತೆ ಸಾಧಿಸಲಿದ್ದಾರೆ. ಈ ವಾರದಲ್ಲಿ ವಿದ್ಯಾರ್ಥಿಗಳಿಗೆ ತಮ್ಮ ಅಧ್ಯಯನದ ಕುರಿತು ಸಂದೇಹ ಮೂಡಬಹುದು. ಅಲ್ಲದೆ ಅಧ್ಯಯನದ ಮೇಲೆ ಗಮನ ನೀಡಲು ಅವರಿಗೆ ಸಾಧ್ಯವಾಗದು. ನಿಮ್ಮ ಆಹಾರಕ್ರಮದ ಮೇಲೆ ಗಮನ ನೀಡಿ. ಏಕೆಂದರೆ ಈ ವಾರದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ನೀವು ಪ್ರಯಾಣಿಸಲು ಯೋಜಿಸುವುದಾದರೆ ಈ ವಾರಾಂತ್ಯವು ನಿಮಗೆ ಸೂಕ್ತ.
ಕರ್ಕಾಟಕ: ಈ ವಾರದಲ್ಲಿ ನಿಮಗೆ ಉತ್ತಮ ಫಲ ದೊರೆಯಲಿದೆ. ನಿಮ್ಮ ಸಂಗಾತಿಯ ಕುರಿತು ಕಾಳಜಿ ವಹಿಸಿ. ಏಕೆಂದರೆ ಅವರು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆ ಎದುರಿಸಬಹುದು. ಸಂಬಂಧದಲ್ಲಿರುವವರಿಗೆ ಈ ವಾರವು ಉತ್ತಮ ವಾರವೆನಿಸಲಿದೆ. ನಿಮ್ಮ ಕಠಿಣ ಸಂಬಂಧವನ್ನು ಉಳಿಸಿಕೊಳ್ಳಲು ಎಲ್ಲಾ ಪ್ತಯತ್ನವನ್ನು ನೀವು ಮಾಡಲಿದ್ದೀರಿ. ಈ ವಾರದಲ್ಲಿ ದುಡಿಯುವ ಜನರಿಗೆ ಮಿಶ್ರ ಫಲಿತಾಂಶ ದೊರೆಯಲಿದೆ. ಈ ವಾರದಲ್ಲಿ ನೀವು ಉತ್ತಮ ಸಾಧನೆ ಮಾಡಲಿದ್ದೀರಿ. ಕೆಲಸದ ಸ್ಥಳದಲ್ಲಿ ಕೆಲವು ಜನರು ನಿಮಗೆ ಅನುಕೂಲತೆ ಒದಗಿಸುವುದಿಲ್ಲ. ಇಂತಹ ಸನ್ನಿವೇಶಕ್ಕೆ ನೀವು ಸಿದ್ಧರಿರಬೇಕು. ಆದರೂ ನಿಮ್ಮ ಬದ್ಧತೆಯ ಕಾರಣ ಕಾರ್ಯಸ್ಥಳದಲ್ಲಿ ನೀವು ಯಶಸ್ಸು ಸಾಧಿಸಲಿದ್ದೀರಿ. ವ್ಯಾಪಾರೋದ್ಯಮದಲ್ಲಿ ತೊಡಗಿಸಿಕೊಂಡಿರುವವರಿಗೆ ಈ ವಾರವು ಅಷ್ಟೊಂದು ಅನುಕೂಲಕರವಾಗಿಲ್ಲ. ಅವರು ಸಾಕಷ್ಟು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಏಕೆಂದರೆ ವ್ಯವಹಾರದಲ್ಲಿ ಹೊಸ ಸದಸ್ಯರ ಪಾಲ್ಗೊಳ್ಳುವಿಕೆಯಿಂದ ನಿಮ್ಮ ಯೋಜನೆಗಳು ಮತ್ತು ಕಾರ್ಯತಂತ್ರಕ್ಕೆ ಧಕ್ಕೆಯಾಗಬಹುದು. ಇದು ವ್ಯವಹಾರಕ್ಕೆ ಒಳ್ಳೆಯದಲ್ಲ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯಬೇಕಾದರೆ ಕಠಿಣ ಅಧ್ಯಯನ ಮಾಡಬೇಕು. ನಿಮ್ಮ ಆರೋಗ್ಯವನ್ನು ಚೆನ್ನಾಗಿ ಕಾಪಾಡಿ. ಏಕೆಂದರೆ ಈ ವಾರದಲ್ಲಿ ಸಾಮಾನ್ಯ ಆರೋಗ್ಯ ನಿಮ್ಮದಾಗಲಿದೆ. ನೀವು ಪ್ರಯಾಣಕ್ಕೆ ಯೋಜನೆ ರೂಪಿಸುವುದಾದರೆ ಈ ವಾರದ ನಡುವಿನ ದಿನಗಳು ಸಕಾಲ.
ಸಿಂಹ: ಈ ವಾರದಲ್ಲಿ ನಿಮ್ಮ ಕುಟುಂಬದ ಸದಸ್ಯರ ನಡುವೆ ಸಮಾನತೆಯನ್ನು ನೀವು ಕಾಪಾಡಬೇಕು. ಏಕೆಂದರೆ ಕುಟುಂಬದ ಸದಸ್ಯರ ನಡುವೆ ಕೆಲವು ಸಮಸ್ಯೆಗಳು ಉಂಟಾಗಬಹುದು. ಹೀಗಾಗಿ ನಿಮ್ಮ ಬುದ್ಧಿವಂತಿಕೆಯನ್ನು ಬಳಸಿಕೊಳ್ಳಿ, ಚೆನ್ನಾಗಿ ಚರ್ಚಿಸಿ ಹಾಗೂ ನಿಮ್ಮ ಜ್ಞಾನದ ಪ್ರಕಾರ ಕುಟುಂಬದಲ್ಲಿ ಶಾಂತಿ ಕಾಪಾಡಲು ಯತ್ನಿಸಿ ಹಾಗೂ ಧನಾತ್ಮಕ ಮತ್ತು ಸಂತಸಭರಿತ ಮನೋಭಾವದೊಂದಿಗೆ ಮುಂದೆ ಸಾಗಿರಿ. ಸಂಬಂಧದಲ್ಲಿರುವವರು, ತಮ್ಮ ಪ್ರೇಮ ಸಂಗಾತಿಯ ಜೊತೆ ಮಾತನಾಡುವಾಗ ನಾಲಿಗೆಯ ಮೇಲೆ ನಿಯಂತ್ರಣವಿರಿಸಬೇಕು. ಸದ್ಯಕ್ಕೆ ನಿಮ್ಮ ಖರ್ಚುವೆಚ್ಚಗಳಲ್ಲಿ ಹೆಚ್ಚಳ ಉಂಟಾಗಬಹುದು ಹಾಗೂ ನಿಮ್ಮ ಎದುರಾಳಿಗಳು ಸಕ್ರಿಯರಾಗಬಹುದು. ಹೀಗಾಗಿ ಈ ವಾರದಲ್ಲಿ ನಿಮ್ಮ ಆರೋಗ್ಯಕ್ಕೆ ನೀವು ವಿಶೇಷ ಗಮನ ನೀಡಬೇಕು. ಉದ್ಯೋಗದಲ್ಲಿರುವವರಿಗೆ ಈ ವಾರವು ಪ್ರಯೋಜನಕಾರಿ ಎನಿಸಲಿದೆ. ನೀವು ಕಠಿಣ ಶ್ರಮ ಪಡಲಿದ್ದು, ಇದರ ಫಲಿತಾಂಶವನ್ನು ನೋಡಲಿದ್ದೀರಿ. ವ್ಯಾಪಾರೋದ್ಯಮಿಗಳಿಗೆ ತಮ್ಮ ನಿಯೋಜನೆಯಲ್ಲಿ ಪ್ರಗತಿ ಸಾಧಿಸಲು ಇದು ಸಕಾಲ. ವಿದೇಶಕ್ಕೆ ಪ್ರಯಾಣಿಸಲು ನಿಮಗೆ ಅವಕಾಶ ದೊರೆಯಲಿದೆ. ಈ ಬಾರಿ ವಿದ್ಯಾರ್ಥಿಗಳು ಉತ್ತಮ ಶೈಕ್ಷಣಿಕ ಪ್ರಗತಿ ಸಾಧಿಸಲಿದ್ದಾರೆ. ಆದರೆ ಅಧ್ಯಯನದಲ್ಲಿ ಅವರು ಸಮಸ್ಯೆಗಳನ್ನು ಎದುರಿಸಬಹುದು ಅಥವಾ ಅವರ ಸಂಗಡಿಗರ ಕಾರಣ ಏಕಾಗ್ರತೆ ಸಾಧಿಸಲು ಅವರಿಗೆ ಸಾಧ್ಯವಾಗದು. ಇದರ ಪರಿಣಾಮವಾಗಿ ವಿದ್ಯಾರ್ಥಿಗಳು ಹೆಚ್ಚಿನ ಶ್ರಮ ಪಡಬೇಕಾಗುತ್ತದೆ. ನಿಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಬಹುದು. ಅಲ್ಲದೆ ನೀವು ಅನಾರೋಗ್ಯಕ್ಕೆ ತುತ್ತಾಗಬಹುದು. ಹೀಗಾಗಿ ಆರೋಗ್ಯದತ್ತ ಗಮನ ಹರಿಸುವುದು ಒಳ್ಳೆಯದು. ವಾರದ ನಡುವಿನ ದಿನಗಳು ಪ್ರಯಾಣಕ್ಕೆ ಅನುಕೂಲಕರ.
ಕನ್ಯಾ: ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವಾರವು ಸವಾಲಿನಿಂದ ಕೂಡಿರಲಿದೆ. ನಿಮ್ಮ ಸಂಬಂಧವು ಅಗ್ನಿಪರೀಕ್ಷೆಗೆ ಒಳಗಾಗಲಿದೆ. ಅಷ್ಟೇ ಅಲ್ಲದೆ ನಿಮ್ಮ ಸಂಬಂಧವು ಅನೇಕ ಸಮಸ್ಯೆಗಳನ್ನು ಎದುರಿಸಲಿದೆ. ಇದನ್ನು ಮೀರಿ ನಿಲ್ಲಲು ನೀವು ಕಠಿಣ ಶ್ರಮ ಪಡಬೇಕಾದೀತು. ವಿವಾಹಿತ ವ್ಯಕ್ತಿಗಳ ಮನೆಯ ಜೀವನ ಗುಣಮಟ್ಟದಲ್ಲಿ ಸುಧಾರಣೆ ಉಂಟಾಗಲಿದೆ. ನಿಮ್ಮ ಬಂಧವು ಇನ್ನಷ್ಟು ಗಟ್ಟಿಗೊಳ್ಳಲಿದೆ ಹಾಗೂ ನಿಮ್ಮ ಜೀವನ ಸಂಗಾತಿಯು ನಿಮಗೆ ಅನುಕೂಲಕರ ಒಪ್ಪಂದ ಒಂದನ್ನು ತರಲಿದ್ದಾರೆ. ನಿಮ್ಮ ಕಠಿಣವಾಗಿ ದುಡಿದರೆ ಹಾಗೂ ಅವರ ಸಲಹೆಯನ್ನು ಪಾಲಿಸಿದರೆ ನೀವು ಯಶಸ್ಸನ್ನು ಗಳಿಸಲಿದ್ದೀರಿ. ಉದ್ಯಮಿಗಳಿಗೆ ಇದು ಅದ್ಭುತ ಸಮಯ. ನಿಮ್ಮ ಪ್ರಯತ್ನಗಳಿಗೆ ಯಶಸ್ಸು ದೊರೆಯಲಿದೆ ಹಾಗೂ ನಿಮ್ಮ ಕಂಪನಿಯು ಲಾಭದತ್ತ ಸಾಗಲಿದೆ. ಈ ದಿನಗಳಲ್ಲಿ ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಮೇಲೆ ಏಕಾಗ್ರತೆ ಸಾಧಿಸಲು ಹೆಣಗಾಡಲಿದ್ದಾರೆ. ಅನೇಕ ಜನರು ನಿಮ್ಮ ಅಧ್ಯಯನದಲ್ಲಿ ಅಡಚಣೆ ಉಂಟು ಮಾಡಲು ಪ್ರಯತ್ನಿಸಲಿದ್ದಾರೆ. ಹೀಗಾಗಿ ಅಂತಹ ವ್ಯಕ್ತಿಗಳಿಂದ ದೂರವಿರಿ ಮತ್ತು ನಿಮ್ಮ ಅಧ್ಯಯನಕ್ಕೆ ಗಮನ ನೀಡಿರಿ. ಈ ಮೂಲಕ ನಿಮ್ಮ ಅಧ್ಯಯನದಲ್ಲಿ ನೀವು ಯಶಸ್ಸು ಗಳಿಸಬಹುದು. ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ. ಸ್ಥಿರ ಆಹಾರ ಕ್ರಮವನ್ನು ಪಾಲಿಸಿ ಮತ್ತು ಮಸಾಲೆಯುಕ್ತ ಆಹಾರಗಳಿಂದ ದೂರವಿರಿ. ವಾರದ ನಡುವೆ ಪ್ರಯಾಣಿಸುವುದು ಅನುಕೂಲಕರ.
ತುಲಾ: ಈ ವಾರದಲ್ಲಿ ನಿಮ್ಮ ಕೌಟುಂಬಿಕ ಜೀವನವನ್ನು ಸಂತಸದಿಂದ ಕಳೆಯಲಿದ್ದೀರಿ. ಅಲ್ಲದೆ ನಿಮ್ಮ ಕುಟುಂಬದ ಸದಸ್ಯರ ಜೊತೆಗಿನ ನಿಮ್ಮ ಸಂಬಂಧವು ಸದೃಢವಾಗಿರಲಿದೆ. ವಿಶೇಷ ವಿಷಯಗಳ ಕುರಿತು ಕುಟುಂಬದಲ್ಲಿ ಕೆಲವೊಂದು ಚರ್ಚೆಗಳು ಉಂಟಾಗಬಹುದು. ಇದರಲ್ಲಿ ನೀವು ಸಕ್ರಿಯ ಪಾತ್ರ ವಹಿಸಲಿದ್ದೀರಿ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಸಾಮಾನ್ಯ ಮಟ್ಟದಲ್ಲಿರಲಿದೆ. ನಿಮ್ಮ ಸಂಬಂಧದಲ್ಲಿ ಉಂಟಾಗುವ ಸಂಘರ್ಷಕ್ಕೆ ನೀವು ಬಲಿಯಾಗಬಹುದು. ಹೀಗಾಗಿ ಎಚ್ಚರಿಕೆಯಿಂದ ಇರಿ. ಸಂಬಂಧದಲ್ಲಿರುವರಿಗೆ ಈ ವಾರವು ಉತ್ತಮ ಫಲ ನೀಡಲಿದೆ. ನಿಮ್ಮನ್ನು ಕಾಡುತ್ತಿರುವ ಪ್ರಶ್ನೆಗಳಿಗೆ ನಿಮ್ಮ ಸಂಗಾತಿಯ ಬಳಿ ಉತ್ತರ ಕೇಳಬಹುದು. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರಿಗೆ ಇದು ಸಕಾಲ. ನೀವು ಹೊಸ ವ್ಯವಹಾರವನ್ನು ಪ್ರಯತ್ನಿಸಬಹುದು. ಆದರೆ ನೀವು ಎಚ್ಚರಿಕೆಯಿಂದ ಹಾಗೂ ಎಲ್ಲಾ ಆಯಾಮಗಳಲ್ಲಿ ಚರ್ಚಿಸುವ ಮೂಲಕ ಹೆಜ್ಜೆ ಇಡಬೇಕು. ಇಲ್ಲದಿದ್ದರೆ ನಷ್ಟ ಉಂಟಾಗಬಹುದು. ಸಂಬಳಕ್ಕೆ ದುಡಿಯುವ ಜನರು ತಮ್ಮ ಕಾರ್ಯಸ್ಥಳದಲ್ಲಿ ಕಠಿಣ ಶ್ರಮದಿಂದ ದುಡಿಯಬೇಕು. ತಮ್ಮ ಉತ್ತಮ ಕಾರ್ಯಕ್ಷಮತೆಯೊಂದಿಗೆ ಅವರು ತಮ್ಮ ಹಿರಿಯರ ಗಮನ ಸೆಳೆಯಲಿದ್ದಾರೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನಗಳಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ಯಾವುದೇ ಗುರಿಯನ್ನು ಸಾಧಿಸಲು ಸಾಧ್ಯವಾಗುತ್ತದೆ. ಆಧುನಿಕ ವರ್ಕೌಟ್‌ಗಳನ್ನು ಅಭ್ಯಸಿಸುವ ಜನರಿಗೆ ಇದು ಸಕಾಲ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯದಲ್ಲಿ ಈ ದಿನಗಳಲ್ಲಿ ಏರಿಳಿತ ಉಂಟಾಬಹುದು. ಹೀಗಾಗಿ ಉತ್ತಮ ಆರೋಗ್ಯ ಕ್ರಮ ಕಾಪಾಡಬೇಕು ಮತ್ತು ನಿಮ್ಮ ಆರೋಗ್ಯದ ಕುರಿತು ಕಾಳಜಿ ವಹಿಸಬೇಕು.
ವೃಶ್ಚಿಕ: ಈ ವಾರವು ನಿಮಗೆ ಮತ್ತು ನಿಮ್ಮ ಕುಟುಂಬದ ಸದಸ್ಯರಿಗೆ ಸಕಾಲ. ಕುಟುಂಬದಲ್ಲಿ ಪ್ರೀತಿ ವಾತ್ಸಲ್ಯದ ಭಾವ ನೆಲೆಸಲಿದೆ. ಪ್ರತಿಯೊಬ್ಬರು ಪರಸ್ಪರ ಸಂಪರ್ಕದಲ್ಲಿರುತ್ತಾರೆ. ಈ ವಾರವು ಜೋಡಿಗಳಿಗೆ ಅನುಕೂಲಕರ. ನಿಮ್ಮ ಪ್ರೇಮಿಯನ್ನು ನಿಮ್ಮ ಕುಟುಂಬದ ಸದಸ್ಯರಿಗೆ ನೀವು ಪರಿಚಯಿಸಬಹುದು. ಅವರು ನಿಮ್ಮ ನಿರ್ಧಾರವನ್ನು ಸ್ವೀಕರಿಸಲಿದ್ದು ಈ ಮೂಲಕ ಮನೆಯ ಕಡೆಯಿಂದ ನಿಮಗೆ ಸಂತಸ ಲಭಿಸಲಿದೆ. ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಬಹುದು. ನಿಮ್ಮ ಆತ್ಮ ನಂಬಿಕೆಯು ದೃಢಗೊಳ್ಳಲಿದೆ. ಈ ಕಾರಣದಿಂದಾಗಿ ನೀವು ಪ್ರತಿ ಕೆಲಸವನ್ನು ಶೀಘ್ರವೇ ಹಾಗೂ ಸಂಪೂರ್ಣ ಪ್ರಾಮಾಣಿಕತೆಯಿಂದ ಮುಗಿಸಲು ಯತ್ನಿಸಲಿದ್ದೀರಿ. ಇದರ ಪರಿಣಾಮವಾಗಿ ಯಶಸ್ಸು ನಿಮ್ಮ ಪರವಾಗಿ ಮುಂದುವರಿಯಲಿದೆ. ಉದ್ಯೋಗದಲ್ಲಿರುವವರು ತಮ್ಮೆಲ್ಲ ಶಕ್ತಿಯನ್ನು ಕೆಲಸದ ಮೇಲೆ ವ್ಯಯಿಸಲಿದ್ದಾರೆ. ತಮ್ಮ ಸಾಮರ್ಥ್ಯದ ಅದ್ಭುತ ಶಕ್ತಿಯನ್ನು ಪ್ರದರ್ಶಿಸುವ ಮೂಲಕ ಅವರು ತಮ್ಮ ಕೆಲಸವನ್ನು ಗಟ್ಟಿಗೊಳಿಸಲಿದ್ದಾರೆ. ಇದು ಧನಾತ್ಮಕ ಪರಿಣಾಮವನ್ನುಂಟು ಮಾಡಲಿದೆ. ತಮ್ಮ ಕೆಲಸಗಳಿಗಾಗಿ ವ್ಯಾಪಾರೋದ್ಯಮಿಗಳು ಹೊಸ ಸಂಪನ್ಮೂಲಗಳ ವ್ಯಾಪಕ ಬಳಕೆ ಮಾಡಲಿದ್ದಾರೆ. ಇವರು ದೊಡ್ಡ ಪ್ರಮಾಣದ ಸರ್ಕಾರಿ ಟೆಂಡರ್ ಪಡೆಯುವಲ್ಲಿ ಯಶಸ್ವಿಯಾಗಲಿದ್ದಾರೆ. ಇದರಿಂದಾಗಿ ಇವರು ಉತ್ತಮ ಲಾಭ ಗಳಿಸಲಿದ್ದಾರೆ. ವಿದ್ಯಾರ್ಥಿಗಳು ಈ ವಾರದಲ್ಲಿ ಧನಾತ್ಮಕ ಪರಿಣಾಮವನ್ನು ಕಾಣಲಿದ್ದಾರೆ. ನಿಮ್ಮ ಪ್ರಯತ್ನಗಳಿಗೆ ಫಲ ದೊರೆಯಲಿದೆ. ನಿಮ್ಮ ಅಧ್ಯಯನದಲ್ಲಿ ಮುನ್ನಡೆ ಸಾಧಿಸಲಿದ್ದೀರಿ. ಈ ಬಾರಿ ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಕಾಣಿಸದು. ಇನ್ನೊಂದೆಡೆ ಋತುಮಾನಕ್ಕೆ ಸಂಬಂಧಿಸಿದ ಕಾಯಿಲೆಗಳ ಕುರಿತು ಎಚ್ಚರಿಕೆ ವಹಿಸಬೇಕು. ಯಾವುದೇ ಸಮಸ್ಯೆ ಉಂಟಾದಲ್ಲಿ ನಿರ್ಲಕ್ಷ್ಯ ತೋರಬೇಡಿ. ಅಲ್ಲದೆ ವೈದ್ಯರ ಸಲಹೆಯನ್ನು ಪಾಲಿಸಿ. ನೀವು ಪ್ರಯಾಣಿಸಲು ಇಚ್ಛಿಸುವುದಾದರೆ ಈ ವಾರವು ಸಕಾಲ.
ಧನು: ಈ ವಾರದಲ್ಲಿ ನೀವು ಇಚ್ಛಾಶಕ್ತಿಯನ್ನು ಅಭಿವೃದ್ಧಿಪಡಿಸಿಕೊಳ್ಳಲಿದ್ದೀರಿ. ಭಾವನೆಗಳ ವಿಚಾರದಲ್ಲಿ ಸಂತಸ ನೆಲೆಸಲಿದೆ. ಇತರರಲ್ಲಿ ಪ್ರೀತಿ ನೆಲೆಸಲಿದೆ. ನಿಮ್ಮ ಕುರಿತು ನೀವು ಉತ್ತಮ ಭಾವನೆಯನ್ನು ಹೊಂದಲಿದ್ದು, ಇತರರಿಗೆ ಸಹಾಯ ಮಾಡಲು ನಿಮಗೆ ಸಾಧ್ಯವಾಗುತ್ತದೆ. ವಿವಾಹಿತ ವ್ಯಕ್ತಿಗಳ ಪರಿಸ್ಥಿತಿ ಚೆನ್ನಾಗಿರಲಿದೆ. ನಿಮ್ಮ ವೈವಾಹಿಕ ಸಂಬಂಧದಲ್ಲಿ ಆತ್ಮವಿಶ್ವಾಸವನ್ನು ತೋರಲಿದ್ದೀರಿ. ನಿಮ್ಮ ಜೀವನ ಸಂಗಾತಿಯ ಕೆಲಸದಲ್ಲಿ ನೀವು ನೆರವು ನೀಡಲಿದ್ದೀರಿ. ಪ್ರೇಮ ಸಂಬಂಧದಲ್ಲಿರುವ ಜನರನ್ನು ತಮ್ಮ ಸಂಬಂಧದ ಪ್ರಣಯವು ಸೆಳೆಯದು. ಅಲ್ಲದೆ ನಿಮ್ಮ ಅನ್ಯೋನ್ಯತೆಯು ತಗ್ಗಲಿದೆ. ಹೀಗಾಗಿ ನಿಮ್ಮ ಪ್ರೇಮಿಯು ಅವರ ಎಲ್ಲಾ ಗೌಪ್ಯ ವಿಚಾರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದಾರೆ. ಉದ್ಯೋಗಿಗಳಿಗೆ ಈ ವಾರವು ಅತ್ಯುತ್ತಮ ವಾರ ಎನಿಸಲಿದೆ. ಆದರೆ ನೀವು ಯಾರೊಂದಿಗಾದರೂ ಸಂಘರ್ಷಕ್ಕೆ ಒಳಗಾಗುವ ಸಾಧ್ಯತೆ ಇದೆ. ಹೀಗಾಗಿ ಎಚ್ಚರಿಕೆಯಿಂದ ಇರಿ. ವ್ಯವಹಾರದಲ್ಲಿ ತೊಡಗಿರುವವರಿಗೆ ಈ ವಾರವು ತುಂಬಾ ಒಳ್ಳೆಯದು. ಆದರೆ ಒಂದಷ್ಟು ಎಚ್ಚರಿಕೆಯಿಂದ ಹೆಜ್ಜೆ ಇಡಿ. ತಕ್ಕುದಲ್ಲದ ವ್ಯಕ್ತಿಯಿಂದ ಕೆಲಸ ಮಾಡಿಸಿಕೊಳ್ಳಬೇಡಿ. ವಿದ್ಯಾರ್ಥಿಗಳು ತಮ್ಮ ಅಧ್ಯಯನಗಳಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ಅನೇಕ ಸಾಧನೆಗಳ ಕಾರಣ ಮನಸ್ಸಿಗೆ ತೃಪ್ತಿ ದೊರೆಯಲಿದೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ ಸದ್ಯಕ್ಕೆ ಯಾವುದೇ ಗಂಭೀರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವುದಿಲ್ಲ. ಆದರೆ ಆಹಾರ ಮತ್ತು ಪಾನೀಯಗಳ ಸೇವನೆಯಲ್ಲಿ ನಿರಂತರತೆಯನ್ನು ಕಾಯ್ದು ಕೊಳ್ಳಬೇಕು. ಹೆಚ್ಚು ಪೋಷಕಾಂಶಗಳನ್ನು ಹೊಂದಿರುವ ಆಹಾರವನ್ನು ದೂರವಿಡುವುದು ಒಳ್ಳೆಯದು. ಪ್ರಯಾಣಿಸುವುದಕ್ಕೆ ಇದು ಸಕಾಲ.
ಮಕರ: ಈ ವಾರ ನಿಮಗೆ ಸಾಮಾನ್ಯವಾಗಿ ಲಾಭದಾಯಕ ಎನಿಸಲಿದೆ. ವಿವಾಹಿತ ವ್ಯಕ್ತಿಗಳ ಬದುಕು ಒತ್ತಡದ ಪರಿಸ್ಥಿತಿಯಲ್ಲಿ ಮುಂದುವರಿಯಬಹುದು. ನಿಮ್ಮ ಜೀವನ ಸಂಗಾತಿಯ ಮಾತುಗಳನ್ನು ಕೇಳಲು ಅರ್ಥಮಾಡಿಕೊಳ್ಳಲು ನೀವು ಸಿದ್ಧರಿರದೆ ಇರಬಹುದು. ಪ್ರೇಮದ ಬದುಕು ಸಾಗಿಸುವವರಿಗೆ ಇದು ಸಾಮಾನ್ಯ ವಾರ ಎನಿಸಲಿದೆ. ಆದರೆ ನಿಮ್ಮ ಒರಟು ವರ್ತನೆಯು ನಿಮ್ಮ ಪ್ರೇಮಿಯನ್ನು ನೋಯಿಸಬಹುದು. ಈ ವಾರದಲ್ಲಿ ನಿಮ್ಮ ಆದಾಯವು ಚೆನ್ನಾಗಿರಲಿದೆ. ಖರ್ಚುವೆಚ್ಚಗಳಲ್ಲಿ ಹೆಚ್ಚಳ ಉಂಟಾಗಲಿದೆ. ಕಾರ್ಯಸ್ಥಳದಲ್ಲಿರುವ ಜನರು ತಮ್ಮ ಕೆಲಸದ ಕುರಿತು ಧನಾತ್ಮಕ ಮನೋಭಾವ ಹೊಂದಲಿದ್ದಾರೆ. ವ್ಯವಹಾರದಲ್ಲಿ ತೊಡಗಿರುವವರಿಗೆ ಈ ವಾರವು ಒಳ್ಳೆಯ ಫಲಿತಾಂಶ ತರಲಿದೆ. ನೀವು ವಿದ್ಯಾರ್ಥಿ ಆಗಿದ್ದರೆ, ಅಧ್ಯಯನಕ್ಕಾಗಿ ನೀವು ಪ್ರಶಾಂತ ಪರಿಸರವನ್ನು ಕಂಡುಕೊಳ್ಳಬೇಕು. ನಿಮ್ಮ ಅಧ್ಯಯನದ ಅವಧಿಯನ್ನು ನೀವು ವಿಸ್ತರಿಸಬೇಕು ಮತ್ತು ವೇಳಾಪಟ್ಟಿಯನ್ನು ರಚಿಸಿ ಅದನ್ನು ಪಾಲಿಸಬೇಕು. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ ಭವಿಷ್ಯದ ಕುರಿತು ನಿಮಗೆ ಚಿಂತೆ ಕಾಡಬಹುದು. ನಿಮ್ಮ ದುರ್ಬಲ ಆರೋಗ್ಯದ ಕಾರಣ ನೀವು ಕಾಯಿಲೆಗೆ ಈಡಾಗಬಹುದು. ವಿಚಿತ್ರ ಚಡಪಡಿಕೆ ಮತ್ತು ಮಾನಸಿಕ ಒತ್ತಡ ನಿಮ್ಮನ್ನು ಕಾಡಬಹುದು. ತಲೆನೋವು, ಜ್ವರ ಅಥವಾ ಗಾಯ ಉಂಟಾಗಬಹುದು. ಈ ವಾರವು ಪ್ರಯಾಣಿಸುವುದಕ್ಕೆ ಅನುಕೂಲಕರ.
ಕುಂಭ: ಈ ವಾರದಲ್ಲಿ ಬದುಕಿನಲ್ಲಿ ಸಂತಸ ನೆಲೆಸಲಿದೆ. ಮನೆಯಲ್ಲಿ ಅದ್ಭುತ ವಾತಾವರಣ ನೆಲೆಸಲಿದೆ. ನೀವು ಪರಸ್ಪರ ಚೆನ್ನಾಗಿ ಅರ್ಥ ಮಾಡಿಕೊಳ್ಳಲಿದ್ದೀರಿ. ಅಲ್ಲದೆ ಪರಸ್ಪರರ ಅಗತ್ಯತೆಯನ್ನು ಪೂರೈಸಲಿದ್ದೀರಿ. ನೀವು ಒಟ್ಟಿಗೆ ಶಾಪಿಂಗ್‌ಗೆ ಹೋಗಬಹುದು. ಸಂಬಂಧದಲ್ಲಿರುವ ಜನರು ರೊಮ್ಯಾಂಟಿಕ್ ಕ್ಷಣಗಳನ್ನು ಆನಂದಿಸಬಹುದು. ಅಲ್ಲದೆ ಪರಸ್ಪರ ಮುಕ್ತವಾಗಿ ಸಮಯ ಕಳೆಯಬಹುದು. ನಿಮ್ಮ ಪ್ರೇಮ ಬದುಕನ್ನು ನೀವು ಮುಕ್ತವಾಗಿ ಆನಂದಿಸಲಿದ್ದೀರಿ. ನಿಮ್ಮ ಖರ್ಚುವೆಚ್ಚಗಳಲ್ಲಿ ಶೀಘ್ರ ಏರಿಕೆ ಉಂಟಾಗಲಿದೆ. ಇದು ನಿಮ್ಮ ಚಿಂತೆಗೆ ಕಾರಣವಾಗಬಹುದು. ಆದರೆ ಆದಾಯದಲ್ಲೂ ಹೆಚ್ಚಳ ಉಂಟಾಗಬಹುದು. ಹೀಗಾಗಿ ಸಮತೋಲನ ಸಾಧಿಸಲು ನಿಮಗೆ ಸಾಧ್ಯವಾಗುತ್ತದೆ. ವಿದೇಶಕ್ಕೆ ಹೋಗುವ ನಿಮ್ಮ ಕನಸು ನನಸಾಗಲಿದೆ. ಉದ್ಯೋಗದಲ್ಲಿರುವವರು ತಮ್ಮ ಕೆಲಸದ ಕಾರಣ ಸಾಕಷ್ಟು ಪ್ರಯಾಣ ಮಾಡಬೇಕಾದೀತು. ವ್ಯಾಪಾರೋದ್ಯಮಿಗಳು ತಮ್ಮ ಕಾಮಗಾರಿಯಲ್ಲಿ ಉತ್ತಮ ಡೀಲು ಅಥವಾ ಸವಲತ್ತುಗಳನ್ನು ಪಡೆಯಲಿದ್ದಾರೆ. ಈ ವಾರದಲ್ಲಿ ವಿದ್ಯಾರ್ಥಿಗಳಿಗೆ ನಿರೀಕ್ಷೆಗಿಂತಲೂ ಹೆಚ್ಚಿನ ಯಶಸ್ಸು ದೊರೆಯಲಿದೆ. ನಿಮ್ಮ ಕಠಿಣ ಶ್ರಮಕ್ಕೆ ಯಶಸ್ಸು ದೊರೆಯಲಿದೆ. ಇದು ಉತ್ತಮ ಫಲಿತಾಂಶವನ್ನೂ ನೀಡಲಿದೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ಈ ವಾರದಲ್ಲಿ ನಿಮ್ಮ ಆರೋಗ್ಯದ ಕುರಿತು ನೀವು ಸಾಕಷ್ಟು ಕಾಳಜಿ ವಹಿಸಬೇಕು. ಸಣ್ಣಪುಟ್ಟ ಸಮಸ್ಯೆಗಳನ್ನು ನಿರ್ಲಕ್ಷಿಸಬೇಡಿ. ಮನೆಮದ್ದುಗಳ ಬದಲಿಗೆ ವೈದ್ಯರನ್ನು ಭೇಟಿ ಮಾಡಿ. ವಾರದ ಕೊನೆಯ ಕೆಲವು ದಿನಗಳು ಪ್ರವಾಸಕ್ಕೆ ಹೋಗಲು ಅತ್ಯುತ್ತಮ.
ಮೀನ: ವಿವಾಹಿತ ವ್ಯಕ್ತಿಗಳು ಈ ವಾರದಲ್ಲಿ ತಮ್ಮ ಕೌಟುಂಬಿಕ ಬದುಕಿನಲ್ಲಿ ಸಂತಸ ಅನುಭವಿಸಲಿದ್ದಾರೆ. ಆದರೆ ನಿಮ್ಮ ಸಂಗಾತಿ ಹೇಳುವ ಯಾವುದಾದರೂ ಮಾತು ನಿಮಗೆ ಬೇಸರ ತರಿಸಬಹುದು ಮಾತ್ರವಲ್ಲದೆ ವಾತಾವರಣವನ್ನು ಹಾಳುಗೆಡವಬಹುದು. ಪ್ರೇಮದ ಬದುಕು ಸಾಗಿಸುವವರು ತಮ್ಮ ಸಂಬಂಧದಲ್ಲಿ ಒಂದಷ್ಟು ಅಸಮಾಧಾನ ಅನುಭವಿಸಬಹುದು. ಅಲ್ಲದೆ ತಮ್ಮ ಸಂಗಾತಿಗೆ ಯಾವುದಾದರೂ ರೀತಿಯಲ್ಲಿ ವಿವರಿಸಲು ಯತ್ನಿಸಬಹುದು. ವಾರದ ಆರಂಭದಲ್ಲಿ ನಿಮ್ಮ ಕೆಲಸದಲ್ಲಿ ನೀವು ತೊಡಗಿಸಿಕೊಳ್ಳಲಿದ್ದೀರಿ. ಆದರೆ ಕಚೇರಿಯಲ್ಲಿ ಗಾಸಿಪ್ ಮಾಡದೆ ಕೆಲಸದಲ್ಲಿ ಗಮನ ನೀಡುವುದು ಒಳ್ಳೆಯದು. ವ್ಯವಹಾರದಲ್ಲಿ ತೊಡಗಿರುವ ಜನರು ಹಠಾತ್ ಆಗಿ ಒಳ್ಳೆಯ ಲಾಭ ಗಳಿಸಲಿದ್ದಾರೆ. ಇದರ ಕಾರಣ ಅವರ ಆತ್ಮವಿಶ್ವಾಸದಲ್ಲಿ ವೃದ್ಧಿ ಉಂಟಾಗಲಿದೆ. ಅವರು ಮುಂದೆ ಸಾಗಿ ಎಚ್ಚರಿಕೆಯಿಂದ ಕೆಲಸ ಮಾಡಲಿದ್ದಾರೆ. ಈ ವಾರದ ಕೊನೆಯ ದಿನಗಳಲ್ಲಿ ನಿಮಗೆ ಹೆಚ್ಚು ಖರ್ಚುವೆಚ್ಚ ಉಂಟಾಗಬಹುದು. ಹೀಗಾಗಿ ಎಚ್ಚರಿಕೆಯಿಂದ ಹೆಜ್ಜೆ ಇಡಿ. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ, ಅವರು ಈಗ ತಮ್ಮ ಅಧ್ಯಯನಗಳಲ್ಲಿ ಸಮಸ್ಯೆಗಳನ್ನು ಎದುರಿಸಬಹುದು. ನಿಮ್ಮ ಕೆಲವು ಮಿತ್ರರು ನಿಮ್ಮ ಅಧ್ಯಯನದಲ್ಲಿ ಅಡಚಣೆ ಉಂಟು ಮಾಡಬಹುದು. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯದಲ್ಲಿ ಈಗ ಸುಧಾರಣೆ ಉಂಟಾಗಲಿದೆ. ಯಾವುದೇ ದೊಡ್ಡ ಕಾಯಿಲೆ ನಿಮಗೆ ಕಾಡುವುದಿಲ್ಲ. ವಾರದ ಆರಂಭಿಕ ದಿನಗಳು ಪ್ರಯಾಣಕ್ಕೆ ಅತ್ಯುತ್ತಮ.