ETV Bharat / bharat

ವಿಮಾನ ಪ್ರಯಾಣದ ವೇಳೆ ಇನ್ಮುಂದೆ ಮಾಸ್ಕ್ ಧರಿಸುವುದು ಕಡ್ಡಾಯವಲ್ಲ!

ನಿಗದಿತ ವಿಮಾನಗಳ ಪ್ರಯಾಣದ ವೇಳೆ ಈವರೆಗೆ ಜಾರಿಯಲ್ಲಿದ್ದ ಮಾಸ್ಕ್​ ಧರಿಸುವ ನಿರ್ಬಂಧವನ್ನು ಇಂದಿನಿಂದ ಸಡಿಲಗೊಳಿಸಲಾಗಿದೆ.

Wearing masks not mandatory anymore in flights in India

author img

By

Published : Nov 16, 2022, 8:01 PM IST

ನವದೆಹಲಿ: ವಿಮಾನ ಪ್ರಯಾಣದಲ್ಲಿ ಇನ್ನು ಮುಂದೆ ಮಾಸ್ಕ್ ಧರಿಸುವುದು ಕಡ್ಡಾಯವಲ್ಲ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಹೇಳಿದೆ. ದೇಶದಲ್ಲಿ ಕೋವಿಡ್ -19 ಪ್ರಕರಣಗಳು ಕ್ಷೀಣಿಸುತ್ತಿದ್ದು ಇದನ್ನು ಗಮನದಲ್ಲಿಟ್ಟು ವಿಮಾನ ಪ್ರಯಾಣದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

ಈ ವರೆಗೆ ಮಾಸ್ಕ್​ ಧರಿಸದವರಿಗೆ ದಂಡ ಹಾಕಲಾಗುತ್ತಿತ್ತು. ಆದರೆ, ಇಂದಿನಿಂದ ಮಾಸ್ಕ್​ ಧರಿಸುವುದು ಅಗತ್ಯವಿಲ್ಲ ಎಂದು ಹೇಳಿದ್ದು, ಪ್ರಯಾಣಿಕರು ತಮ್ಮ ಇಷ್ಟದಂತೆ ಇರಬಹುದು ಎಂದಿದೆ. ಆರೋಗ್ಯ ಸಚಿವಾಲಯದೊಂದಿಗೆ ಪರಿಶೀಲನಾ ಸಭೆ ನಡೆಸಿದ ಬಳಿಕ ನಾಗರಿಕ ವಿಮಾನಯಾನ ಸಚಿವಾಲಯ ಈ ನಿರ್ಧಾರವನ್ನು ಪ್ರಕಟಿಸಿದೆ.

ಇದುವರೆಗೂ ವಿಮಾನಗಳಲ್ಲಿ ಪ್ರಯಾಣಿಸುವಾಗ ಮಾಸ್ಕ್ ಅಥವಾ ಫೇಸ್ ಕವರ್‌ಗಳನ್ನು ಧರಿಸುವುದು ಕಡ್ಡಾಯವಾಗಿತ್ತು. ವಿಮಾನಗಳಲ್ಲಿ ಕೋವಿಡ್ 19 ಸೋಂಕು ಹರಡದಂತೆ ತಡೆಯಲು ಈ ಕ್ರಮ ಕೈಗೊಳ್ಳಲಾಗಿತ್ತು. ಅಲ್ಲದೇ ಮಾಸ್ಕ್​​ ಧರಿಸದವರಿಗೆ ದಂಡ ಸಹ ವಿಧಿಸುವ ನಿಯಮ ಹೇರಲಾಗಿತ್ತು.

ಈ ಎಲ್ಲ ನಿಯಮಗಳು ಇನ್ನು ಮುಂದೆ ಪಾಲನೆಯಾಗುವುದಿಲ್ಲ. ನಿಮಗೆ ಇಷ್ಟವಿದ್ದರೆ ಮಾಸ್ಕ್​ ಧರಿಸಬಹುದು. ಇಲ್ಲವೇ ಹಾಗೆಯೇ ಪ್ರಯಾಣ ಮಾಡಬಹುದು. ಮಾಸ್ಕ್ ಬಳಕೆಗೆ ಸಂಬಂಧಿಸಿದಂತೆ ದಂಡದ ಯಾವುದೇ ಉಲ್ಲೇಖವನ್ನು ಘೋಷಿಸಬೇಕಾಗಿಲ್ಲ ಎಂದು ಸಚಿವಾಲಯ ಹೇಳಿದೆ.

ಇದನ್ನೂ ಓದಿ: ಆದಾಯ ತೆರಿಗೆ ವಂಚನೆ ಆರೋಪ: ಆಸ್ಪತ್ರೆ, ಲ್ಯಾಬ್, ಡಯಾಗ್ನಸ್ಟಿಕ್ ಸೆಂಟರ್‌ಗಳ ಮೇಲೆ‌ ಐಟಿ ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.