ETV Bharat / bharat

ಹೊಸ ನಾಯಕತ್ವದೊಂದಿಗೆ ರಿಲಯನ್ಸ್ ಮುನ್ನುಗ್ಗಲಿದೆ: ಮುಖೇಶ್ ಅಂಬಾನಿ - ರಿಲಯನ್ಸ್ ಕುಟುಂಬ

ರಿಲಯನ್ಸ್​ ಕುಂಟುಂಬದ ಆಕಾಶ್ ಅಧ್ಯಕ್ಷತೆಯ ಜಿಯೋ ವಿಶ್ವದ ಅತ್ಯುತ್ತಮ 5G ನೆಟ್‌ವರ್ಕ್ - ಕೈಗಾರಿಕೋದ್ಯಮಿ ಇಶಾ ನೇತೃತ್ವದ ಚಿಲ್ಲರೆ ವ್ಯಾಪಾರ ಅತ್ಯಂತ ವೇಗದಲ್ಲಿ ಬೆಳೆದಿದೆ. ನೀತಾ ನಾಯಕತ್ವದಡಿ ರಿಲಯನ್ಸ್ ಫೌಂಡೇಶನ್ ಸಾಮಾಜಿಕ ಸೇವಾ ಕಾರ್ಯ ಮುಂದುವರಿಕೆ. ಆಲದ ಮರದಂತೆ ರಿಲಯನ್ಸ್ ದೊಡ್ಡ ಕಂಪನಿ ಬೆಳೆಯುತ್ತಲೇ ಇರುತ್ತದೆ ಎಂದು ಮುಖೇಶ್ ಅಂಬಾನಿ ಭರವಸೆ

mukesh ambani
ರಿಲಯನ್ಸ್ ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ
author img

By

Published : Dec 29, 2022, 4:43 PM IST

Updated : Dec 29, 2022, 5:10 PM IST

ನವದೆಹಲಿ: ದೈತ್ಯ ರಿಲಯನ್ಸ್ ಸಂಸ್ಥೆಯು ಯುವ ನಾಯಕತ್ವ ಮತ್ತು ಯುವ ಪ್ರತಿಭೆಗಳನ್ನು ಸಶಕ್ತವಾಗಿ ಕಾರ್ಯಗತಗೊಳಿಸಲು ಶ್ರಮಿಸುತ್ತಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ತಿಳಿಸಿದ್ದಾರೆ. ಧೀರೂಭಾಯಿ ಅಂಬಾನಿ ಅವರ ಜನ್ಮದಿನ ನಡೆದ ರಿಲಯನ್ಸ್ ಫ್ಯಾಮಿಲಿ ಡೇ ಸಂದರ್ಭದಲ್ಲಿ, ತೈಲದಿಂದ ದೂರ ಸಂಪರ್ಕ ಮತ್ತು ಚಿಲ್ಲರೆ ವ್ಯಾಪಾರವನ್ನು ಹೊಂದಿರುವ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸ್ವಯಂ ಪರಿವರ್ತನೆಯ ವ್ಯಾಪಕ ಪ್ರಯಾಣವನ್ನು ಆರಂಭಿಸಿದೆ ಎಂದು ಹೇಳಿದ್ದಾರೆ.

ಯಂಗ್ ಟ್ಯಾಲೆಂಟ್‌: ಹೊಸ ನಾಯಕತ್ವದಡಿ ಬಂಡವಾಳ ತೊಡಗಿಸುವುದರೊಂದಿಗೆ ಅಂದರೆ ಯುವ ನಾಯಕತ್ವ ಬಳಸಿಕೊಂಡು ರಿಲಯನ್ಸ್ ಅನ್ನು ಸಬಲಗೊಳಿಸುವುದು. ಯಂಗ್ ಟ್ಯಾಲೆಂಟ್‌ನೊಂದಿಗೆ ಮತ್ತೆ ಹೊಸ ಟ್ಯಾಲೆಂಟ್ ಕ್ಯಾಪಿಟಲ್‌ನೊಂದಿಗೆ ರಿಲಯನ್ಸ್ ಅನ್ನು ಸಂಪದ್ಬರಿತಗೊಳಿಸುವುದಾಗಿದೆ ಎಂದು ಸಲಹೆ ನೀಡಿದ್ದಾರೆ. ಅವಕಾಶ ಹಾಗೂ ಜವಾಬ್ದಾರಿ ಬಗ್ಗೆ ಅರಿತಿರುವ ರಿಲಯನ್ಸ್ ಸಮಗ್ರ ಸ್ವಯಂ ಪರಿವರ್ತನೆಯ ಪ್ರಯಾಣ ಪ್ರಾರಂಭಿಸಿದೆ. 2022ರ ಅಂತ್ಯವು ರಿಲಯನ್ಸ್ ಅನ್ನು ದಾಟಲಿದೆ. ಇನ್ನು ಐದು ವರ್ಷಗಳಲ್ಲಿ ರಿಲಯನ್ಸ್ ತನ್ನ ಐವತ್ತು ವರ್ಷಗಳನ್ನು ಪೂರ್ಣಗೊಳಿಸಲಿದೆ ಎಂದು ಮಾಹಿತಿ ನೀಡಿದರು.

5G ನೆಟ್‌ವರ್ಕ್: ಆಕಾಶ್ ಅವರ ಅಧ್ಯಕ್ಷತೆಯಲ್ಲಿ, ಜಿಯೋ ಭಾರತದಾದ್ಯಂತ ವಿಶ್ವದ ಅತ್ಯುತ್ತಮ 5G ನೆಟ್‌ವರ್ಕ್ ಅನ್ನು ಪ್ರಾರಂಭಿಸುತ್ತಿದೆ ಮತ್ತು ಈ ಸೇವೆಯನ್ನು ಪ್ರಾರಂಭಿಸುವ ತ್ವರಿತತೆ ವಿಶ್ವದಲ್ಲೇ ಅತ್ಯಂತ ವೇಗವಾಗಿದೆ. ಜಿಯೋ 5G ಸೇವೆಯು 2023 ರಲ್ಲಿ ಸಂಪೂರ್ಣವಾಗಿ ಪ್ರಾರಂಭವಾಗಲಿದೆ ಎಂದರು.

ಅನಂತ್​ ಅವರು ರಿಲಯನ್ಸ್​ ಇಂಡಸ್ಟ್ರಿ ಲಿಮಿಟೆಡ್​ ಸೇರಿದಂತೆ ಜಿಯೋ ಫ್ಲಾಟ್​ಫಾರ್ಮ ಮಂಡಳಿ ಹಾಗೂ ರಿಟೈಲ್​​ನಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಶ್ಲಾಘೀಸಿದರು.

ಚಿಲ್ಲರೆ ವ್ಯಾಪಾರ: ಕೈಗಾರಿಕೋದ್ಯಮಿ ಇಶಾ ಅವರ ನೇತೃತ್ವದಲ್ಲಿ ಚಿಲ್ಲರೆ ವ್ಯಾಪಾರವು ಅತ್ಯಂತ ವೇಗವಾಗಿ ಬೆಳೆದಿದೆ. ನಮ್ಮ ಚಿಲ್ಲರೆ ವ್ಯಾಪಾರ, ಉತ್ಪನ್ನಗಳ ಎಲ್ಲ ವರ್ಗಗಳಾದ್ಯಂತ, ಭಾರತದಲ್ಲಿ ಬಹಳ ವಿಶಾಲ ಮತ್ತು ಆಳವಾದ ವ್ಯಾಪಾರವಾಗಿ ಹೊರಹೊಮ್ಮಿದೆ ಎಂದು ಅವರು ಹೇಳಿದರು.

ಗಿಗಾ ಕಾರ್ಖಾನೆ: ಹೊಸ ಇಂಧನ ವ್ಯವಹಾರದ ಬಗ್ಗೆ ಅಂಬಾನಿ, ರಿಲಯನ್ಸ್‌ನ ಇತ್ತೀಚಿನ ಸ್ಟಾರ್ಟಪ್ ವ್ಯವಹಾರವು ಹೊಸ ಶಕ್ತಿಯಾಗಿದ್ದು, ಅದು ಕಂಪನಿ ಅಥವಾ ದೇಶವನ್ನು ಮಾತ್ರವಲ್ಲದೇ ಇಡೀ ಜಗತ್ತನ್ನು ಬದಲಾಯಿಸುವ ಶಕ್ತಿಯನ್ನು ಹೊಂದಿದೆ. ಅನಂತ್ ಈ ಮುಂಬರುವ ಮತ್ತು ಮುಂದಿನ ಪೀಳಿಗೆಯ ವ್ಯವಹಾರಕ್ಕೆ ಸೇರುತ್ತಿದ್ದಾರೆ ಮತ್ತು ಇದರೊಂದಿಗೆ ನಾವು ಜಾಮ್‌ನಗರದಲ್ಲಿ ನಮ್ಮ ಗಿಗಾ ಕಾರ್ಖಾನೆಗಳನ್ನು ಸಿದ್ಧಪಡಿಸುವ ಪ್ರಕ್ರಿಯೆಯನ್ನು ವೇಗಗೊಳಿಸಿದ್ದೇವೆ ಎಂದು ತಿಳಿಸಿದರು.

ರಿಲಯನ್ಸ್ ಫೌಂಡೇಶನ್: ಭಾರತದ ಅತಿ ದೊಡ್ಡ ಮತ್ತು ಬೆಲೆಬಾಳುವ ಕಾರ್ಪೊರೇಟ್ ಗ್ರೂಪ್ ರಿಲಯನ್ಸ್ ಕೂಡ ಭಾರತದ ಅತ್ಯಂತ 'ಹಸಿರು' ಕಾರ್ಪೊರೇಟ್ ಗ್ರೂಪ್ ಆಗಲಿದೆ. 2023 ರಿಲಯನ್ಸ್ ಫೌಂಡೇಶನ್‌ಗೆ ನವೀಕರಣ ಮತ್ತು ಪುನರುಜ್ಜೀವನದ ವರ್ಷವಾಗಿದೆ. ನೀತಾ ಅವರ ಸ್ಪೂರ್ತಿದಾಯಕ ನಾಯಕತ್ವದಡಿ ರಿಲಯನ್ಸ್ ಫೌಂಡೇಶನ್ ಶಿಕ್ಷಣ, ಆರೋಗ್ಯ, ಕ್ರೀಡೆ, ಮಹಿಳಾ ಸಬಲೀಕರಣ ಮತ್ತು ಪರಿಸರ ಸಂರಕ್ಷಣೆಯಲ್ಲಿ ಇನ್ನಷ್ಟು ಮಹತ್ವಾಕಾಂಕ್ಷೆಯ ಹೊಸ ಯೋಜನೆಗಳನ್ನು ಅಳವಡಿಸಿಕೊಂಡು ಕೆಲಸ ಮಾಡುತ್ತಿದೆ ಎಂದು ಹೇಳಿದರು.

ರಿಲಯನ್ಸ್ ಕುಟುಂಬ: ರಿಲಯನ್ಸ್ ದೈತ್ಯ ಕಂಪನಿ ಸಂಸ್ಥಾಪಕ ಅಧ್ಯಕ್ಷ ಧೀರೂಭಾಯಿ ಅಂಬಾನಿ ಅವರಿಗೆ ಗೌರವ ಸಲ್ಲಿಸಲು ಮತ್ತು ಒಂದು ದೊಡ್ಡ ರಿಲಯನ್ಸ್ ಕುಟುಂಬವಾಗಿ ಏಕತೆಯ ಉತ್ಸಾಹ ಆನಂದಿಸಲು ರಿಲಯನ್ಸ್ ಕುಟುಂಬ ದಿನವನ್ನು ಆಚರಿಸಲು ಒಗ್ಗಟ್ಟಾಗಿ ಬನ್ನಿ. ಧೀರೂಭಾಯಿ ಕುಟುಂಬಕ್ಕೂ ಇದೂ ಹೆಮ್ಮೆ ಎಂದು ಹೇಳಿದರು. ವರ್ಷಗಳು ಉರುಳುತ್ತವೆ. ದಶಕಗಳು ಕಳೆದು ಹೋಗುತ್ತವೆ. ಆಲದ ಮರದಂತೆ ರಿಲಯನ್ಸ್ ದೊಡ್ಡ ಕಂಪನಿಯಾಗಿ ಬೆಳೆಯುತ್ತಲೇ ಮುಂದೆ ಸಾಗುತ್ತದೆ ಎಂದು ಭರವಸೆ ವ್ಯಕ್ತ ಪಡಿಸಿದರು.

ಇದನ್ನೂಓದಿ:ಐಸಿಐಸಿಐ ಬ್ಯಾಂಕ್ ಮಾಜಿ ಸಿಇಒ ಚಂದಾ ಕೊಚ್ಚಾರ್​ ಸೇರಿ ಮೂವರಿಗೆ ಜನವರಿ 10ರವರೆಗೆ ನ್ಯಾಯಾಂಗ ಬಂಧನ

Last Updated : Dec 29, 2022, 5:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.