ಕೋಲ್ಕತಾ: ಏಪ್ರಿಲ್ 10 ರಂದು ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ನಾಲ್ಕನೇ ಹಂತದ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ 30 ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಿಜೆಪಿ ಸಂಸದ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಇತರ ಕೇಂದ್ರ ಸಚಿವರು ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿದ್ದಾರೆ.
ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ ಮುಖಾಮುಖಿಯಾದ ಬಿಜೆಪಿ - ಕಾಂಗ್ರೆಸ್ ನಾಯಕರು
ಈ ಪಟ್ಟಿಯಲ್ಲಿ ನಿತಿನ್ ಗಡ್ಕರಿ, ಡೆಬ್ರಾ (ಪಶ್ಚಿಮ ಮೆದಿನಾಪುರ) ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಾರತಿ ಘೋಷ್, ಸ್ಮೃತಿ ಇರಾನಿ, ಮಿಥುನ್ ಚಕ್ರವರ್ತಿ, ಮನೋಜ್ ತಿವಾರಿ, ಜಾನ್ ಬಾರ್ಲಾ ಮತ್ತು ಸುವೇಂದು ಅಧಿಕಾರಿ ಸಹ ಸೇರಿದ್ದಾರೆ.
ಮತದಾನದ ಮೊದಲ ಎರಡು ಹಂತಗಳಲ್ಲಿ ಮತದಾರರು ಕ್ರಮವಾಗಿ 79.9 ಮತ್ತು 80.43 ರಷ್ಟು ಮತದಾನ ಮಾಡಿದ್ದಾರೆ.
ಇದನ್ನೂ ಓದಿ: ಎಂ.ಕೆ.ಸ್ಟಾಲಿನ್ ಅಳಿಯ ಸಬರೀಸನ್ ನಿವಾಸದ ಮೇಲೆ ಐಟಿ ದಾಳಿ
ಮೂರನೇ ಹಂತದಲ್ಲಿ 31 ಸ್ಥಾನಗಳಿಗೆ ಏಪ್ರಿಲ್ 6 ರಂದು ಮತದಾನ ನಡೆಯಲಿದೆ. 44 ಸ್ಥಾನಗಳಿಗೆ ಏಪ್ರಿಲ್ 10 ರಂದು ನಾಲ್ಕನೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಇದಲ್ಲದೇ, ಏಪ್ರಿಲ್ 17 ರಂದು ಐದನೇ ಹಂತದಲ್ಲಿ 45 ಸ್ಥಾನಗಳಿಗೆ ಮತದಾನ ನಡೆಯಲಿದೆ.
ಆರನೇ ಹಂತ ಏಪ್ರಿಲ್ 22 ರಂದು ನಿಗದಿಯಾಗಿದ್ದು, 43 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಏಪ್ರಿಲ್ 26 ರಂದು ಏಳನೇ ಹಂತದಲ್ಲಿ 36 ಸ್ಥಾನಗಳಿಗೆ ಮತದಾನ ನಡೆಯಲಿದೆ. ಅಂತಿಮವಾಗಿ, ಎಂಟನೇ ಹಂತವು ಏಪ್ರಿಲ್ 29 ರಂದು ನಿಗದಿಯಾಗಿದ್ದು, 35 ಸ್ಥಾನಗಳಿಗೆ ಮತದಾನ ನಡೆಯಲಿದೆ. ಮತ ಎಣಿಕೆ ಮೇ 2 ರಂದು ನಡೆಯಲಿದೆ.