ಜೆಮ್ಶೆಡ್ಪುರ(ಜಾರ್ಖಂಡ್): ರಾಜ್ಯದ ಜನತೆಗೆ ವಿಶ್ವದರ್ಜೆಯ ವೈದ್ಯಕೀಯ ಸೌಲಭ್ಯ ನೀಡಲಾಗುವುದು ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಹೇಳಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ರಾಜ್ಯದಲ್ಲಿರುವ ಪ್ರಮುಖ ವೈದ್ಯಕೀಯ ಆಸ್ಪತ್ರೆ ಹಾಗೂ ಕಾಲೇಜ್ ಎಂಜಿಎಂನ ಚಿತ್ರಣ ಮಾತ್ರ ವಿಭಿನ್ನವಾಗಿದೆ.
![Water entered burn ward of MGM Hospital](https://etvbharatimages.akamaized.net/etvbharat/prod-images/16365431_mgm.jpg)
ನಿನ್ನೆ ರಾತ್ರಿ ಸುರಿದ ಮಳೆಯಿಂದಾಗಿ ಆಸ್ಪತ್ರೆಯ ಬಹುತೇಕ ವಾರ್ಡ್ನೊಳಗೆ ನೀರು ನುಗ್ಗಿದೆ. ಹೀಗಾಗಿ, ರೋಗಿಗಳು ಸಂಕಷ್ಟ ಅನುಭವಿಸುವಂತಾಗಿದೆ. ತಾವು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಬೆಡ್ನಿಂದ ಕಳೆಗಡೆ ಕಾಲಿಡಲು ಕಷ್ಟ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರೋಗಿಗಳು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ವಾರ್ಡ್ನೊಳಗೆ ನೀರು ನುಗ್ಗಿರುವ ಕಾರಣ ಆಸ್ಪತ್ರೆಯಲ್ಲಿ ಶುಶ್ರೂಷಕರಾಗಿ ಕೆಲಸ ಮಾಡ್ತಿದ್ದವರು ನೀರು ಹೊರಹಾಕುವ ಕೆಲಸದಲ್ಲಿ ಮಗ್ನರಾಗಿರುವುದು ಕಂಡು ಬಂದಿದೆ. ಜೊತೆಗೆ ರೋಗಿಗಳು ಅನೇಕ ಗಂಟೆಗಳ ಕಾಲ ಬೆಡ್ ಮೇಲೆ ಕುಳಿತುಕೊಳ್ಳುವಂತೆ ಸೂಚನೆ ನೀಡಿರುವ ಘಟನೆ ಸಹ ನಡೆದಿದೆ.
-
#WATCH झारखंड: एमजीएम चिकित्सा महाविद्यालय अस्पताल जमशेदपुर में बारिश के बाद जलभराव देखा गया। अस्पताल में मरीजों और स्टाफ को परेशानी का सामना करना पड़ रहा है। pic.twitter.com/vTX6pFHqMN
— ANI_HindiNews (@AHindinews) September 13, 2022 " class="align-text-top noRightClick twitterSection" data="
">#WATCH झारखंड: एमजीएम चिकित्सा महाविद्यालय अस्पताल जमशेदपुर में बारिश के बाद जलभराव देखा गया। अस्पताल में मरीजों और स्टाफ को परेशानी का सामना करना पड़ रहा है। pic.twitter.com/vTX6pFHqMN
— ANI_HindiNews (@AHindinews) September 13, 2022#WATCH झारखंड: एमजीएम चिकित्सा महाविद्यालय अस्पताल जमशेदपुर में बारिश के बाद जलभराव देखा गया। अस्पताल में मरीजों और स्टाफ को परेशानी का सामना करना पड़ रहा है। pic.twitter.com/vTX6pFHqMN
— ANI_HindiNews (@AHindinews) September 13, 2022
ಇದನ್ನೂ ಓದಿ: ಗದಗ: ಔಷಧ ಉಗ್ರಾಣಕ್ಕೆ ನುಗ್ಗಿದ ಮಳೆ ನೀರು.. ಅಂದಾಜು 4 ಕೋಟಿ ಮೌಲ್ಯದ ಔಷಧಗಳು ಜಲಾವೃತ
ಮಳೆ ನೀರಿನ ಜೊತೆಗೆ ವಾರ್ಡ್ನೊಳಗೆ ಅಪಾರ ಪ್ರಮಾಣದಲ್ಲಿ ಕಸ ನುಗ್ಗಿರುವ ಕಾರಣ, ಅಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ರೋಗಿಗಳಿಗೆ ಮತ್ತಷ್ಟು ಸೋಂಕು ತಗಲುವ ಅಪಾಯವಿದೆ ಎನ್ನಲಾಗ್ತಿದೆ. ಕಳೆದ ಎರಡು ದಿನಗಳಿಂದ ಮಹಾರಾಷ್ಟ್ರ, ಜಾರ್ಖಂಡ್, ಹರಿಯಾಣ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಮಳೆಯಾರ್ಭಟ ಜೋರಾಗಿದ್ದು, ಜನರು ಹಲವು ಮಸ್ಯೆಗಳನ್ನು ಎದುರಿಸುವಂತಾಗಿದೆ.