ಮುಂಬೈ: ಎನ್‌ಸಿಬಿಯ ಮುಂಬೈ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಯುಪಿಎಸ್ಸಿ ತೇರ್ಗಡೆ ಹೊಂದಿರುವ ಹಾಗೂ ಅವರ ಜನನ ಪ್ರಮಾಣ ಪತ್ರ ಕುರಿತಂತೆ ಹಲವಾರು ಅನುಮಾನಗಳು ವ್ಯಕ್ತವಾದ ಬೆನ್ನಲ್ಲೇ ವಾಂಖೆಡೆ ಮೊದಲ ಪತ್ನಿಯ ತಂದೆ ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ.
ವಾಂಖೆಡೆ ಮಧ್ಯದ ಹೆಸರು ದಾವೂದ್, ಅವರು ಇಸ್ಲಾಂ ಅನುಯಾಯಿಗಳಾಗಿದ್ದಾರೆ ಎಂದು ಡಾ. ಜಹೀದ್ ಖುರೇಷಿ ಹೇಳಿದ್ದಾರೆ. ತಮ್ಮ ಮಗಳು ಶಬಾನಾ ಸಮೀರ್ ವಾಂಖೆಡೆಯನ್ನು ಮದುವೆಯಾದಾಗ, ಅವರು ಇಸ್ಲಾಂ ಧರ್ಮವನ್ನು ಆಚರಿಸುತ್ತಿದ್ದರು ಮತ್ತು ಮಸೀದಿಗಳಿಗೆ ಭೇಟಿ ನೀಡುತ್ತಿದ್ದರು ಎಂದಿದ್ದಾರೆ.
ಇದಕ್ಕೂ ಮೊದಲು ಸಮೀರ್ ವಾಂಖೆಡೆ ಅವರು ಮುಸ್ಲಿಮರಾಗಿ ಜನಿಸಿದರು, ಆದರೆ ಅವರು ಹಿಂದೂ ಎಸ್‌ಸಿ ವರ್ಗಕ್ಕೆ ಸೇರಿದವರು ಎಂದು ತೋರಿಸಲು ಜಾತಿ ಪ್ರಮಾಣಪತ್ರ ಸೇರಿದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ನಂತರ ಕೋಟಾದಡಿ ಯುಪಿಎಸ್ಸಿ ಮೂಲಕ ಕೆಲಸ ಗಿಟ್ಟಿಸಿದ್ದಾರೆ ಎಂದು ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಆರೋಪಿಸಿದ್ದರು.
ಮಲಿಕ್ ಅವರ ಆರೋಪದ ಬಳಿಕ, ವಾಂಖೆಡೆ ಅವರ ತಂದೆ ಜ್ಞಾನದೇವ್ ಕಚ್ರುಜಿ ವಾಂಖೆಡೆ ಓರ್ವ ಹಿಂದೂ ಆಗಿದ್ದು, ಅವರ ತಾಯಿ ಜಹೀದಾ ಮುಸ್ಲಿಂ ಆಗಿದ್ದರು. ತಂದೆ ಜೂನ್ 2007ರಲ್ಲಿ ಪುಣೆಯ ರಾಜ್ಯ ಅಬಕಾರಿ ಇಲಾಖೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಆಗಿ ನಿವೃತ್ತರಾದರು ಎಂದು ಎನ್ಸಿಬಿ ಅಧಿಕಾರಿ ಹೇಳಿದ್ದರು.
ಡಾ.ಶಬಾನಾ ಮತ್ತು ಸಮೀರ್ ನಡುವೆ 2006ರಲ್ಲಿ ವಿವಾಹ ನಡೆದಿತ್ತು. ಆದರೆ, ಬಳಿಕ ಇಬ್ಬರೂ ವಿಚ್ಛೇದನ ಪಡೆದಿದ್ದರು. ಸಮೀರ್ ಅವರ ಜನನ ಪ್ರಮಾಣ ಪತ್ರಬ ವಿವಾದ ಎದ್ದ ಬಳಿಕ ನಮಗೆ ಈ ಬಗ್ಗೆ ತಿಳಿಯಿತು. ಆದರೆ, ಸಮೀರ್ ನಾನೊಬ್ಬ ಹಿಂದೂ ಎಂದು ಹೇಳಿಕೊಂಡಾಗ ನನಗೆ ಹಲವರು ಪ್ರಶ್ನೆ ಮಾಡಿದರು. ಹಿಂದೂ ಎಂದು ತಿಳಿದಿದ್ದರೂ ಹೇಗೆ ವಿವಾಹ ಮಾಡಿಕೊಟ್ಟಿರಿ ಎಂದು ಕೇಳುತ್ತಿದ್ದರು. ಆದರೆ, ವಿವಾಹ ಸಂದರ್ಭದಲ್ಲಿ ಅವರು ಇಸ್ಲಾಂ ಅನುಸರಿಸುತ್ತಿದ್ದರು. ಅವರ ತಂದೆ ಹೆಸರು ದಾವೂದ್ ಎಂಬುದಾಗಿತ್ತು ಎಂದಿದ್ದಾರೆ.
ಇದನ್ನೂ ಓದಿ: ವಂಚನೆ ಆರೋಪ: ಡ್ರಗ್ಸ್ ಕೇಸ್ ಸಾಕ್ಷಿದಾರ ಕಿರಣ್ ಗೋಸಾವಿ ಬಂಧನ