ETV Bharat / bharat

ಎರಡು ರಾಜ್ಯಗಳ ಚುನಾವಣೆಗೆ ಮತ ಹಾಕುವ ಜನರು: ಇವರಿಗೆ ಸಿಗುತ್ತೆ ಎರಡೆರಡು ಸರ್ಕಾರಗಳ ಸೌಲಭ್ಯ! - ಮಹಾರಾಷ್ಟ್ರ ತೆಲಂಗಾಣ ಗಡಿಭಾಗದ ಜನರು

Telangana and Maharashtra border villages: ಪ್ರಜಾಪ್ರಭುತ್ವದಲ್ಲಿ ಒಬ್ಬರು ಒಂದು ಮತ ಮಾತ್ರ ಹಾಕಬೇಕು. ಆದರೆ, ಈ ಗ್ರಾಮಗಳ ಜನರು ಎರಡು ರಾಜ್ಯಗಳ ಚುನಾವಣೆಗಳಲ್ಲಿ ಭಾಗವಹಿಸಿ ಎರಡೂ ಕಡೆ ಮತ ಹಾಕುತ್ತಾರೆ.

ಎರಡು ರಾಜ್ಯಗಳ ಚುನಾವಣೆಗೆ ಮತ ಹಾಕುವ ಜನರು
ಎರಡು ರಾಜ್ಯಗಳ ಚುನಾವಣೆಗೆ ಮತ ಹಾಕುವ ಜನರು
author img

By ETV Bharat Karnataka Team

Published : Nov 12, 2023, 10:04 PM IST

ಹೈದರಾಬಾದ್​: ಅಪರೂಪದ ವಿದ್ಯಮಾನವೊಂದರಲ್ಲಿ ತೆಲಂಗಾಣ ಮತ್ತು ಮಹಾರಾಷ್ಟ್ರ ಗಡಿಯಲ್ಲಿರುವ ಕೆಲ ಗ್ರಾಮಗಳ ಮತದಾರರು ಎರಡೂ ರಾಜ್ಯಗಳ ಚುನಾವಣೆಗಳಲ್ಲಿ ಮತದಾನ ಮಾಡುತ್ತಾರೆ. ಇವರಿಗೆ ಇಬ್ಬರು ಸಿಎಂಗಳು, ಎರಡು ಚುನಾವಣಾ ಗುರುತಿನ ಚೀಟಿ, ಎರಡು ಪಡಿತರ ಚೀಟಿ, ಎರಡು ಶಾಲೆಗಳು ಸೇರಿದಂತೆ ಎಲ್ಲವೂ ಇಲ್ಲಿ ಎರಡೆರಡು.

ಮಹಾರಾಷ್ಟ್ರ ಮತ್ತು ತೆಲಂಗಾಣ ನಡುವಿನ ಗಡಿ ವಿವಾದ ಬಗೆಹರಿಯದ ಹಿನ್ನೆಲೆ ಈ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದ್ದು, ಇಲ್ಲಿನ ಜನರು ಎರಡು ರಾಜ್ಯಗಳ ಸರ್ಕಾರಗಳಿಂದ ಸವಲತ್ತುಗಳನ್ನು ಪಡೆದುಕೊಳ್ಳುತ್ತಾರೆ. ಆಂಧ್ರದ ಈಗಿನ ಕೊಮರಾಮ್​ಭೀಮ್​ ಜಿಲ್ಲೆಯ ಕೆರಮೇರಿ ಮಂಡಲಕ್ಕೆ ಸೇರಿರುವ ಪರಂದೋಳಿ, ಕೋಟ, ಶಂಕರಲೊಡ್ಡಿ, ಲೆಂಡಿಜಾಲ, ಮುಕುಡನಗುಡ, ಮಹಾರಾಜಗುಡ, ಅಂತಾಪುರ, ಇಂದ್ರನಗರ, ಪದ್ಮಾವತಿ, ಎಸ್ಸಾಪುರ, ಬೋಳಪತ್ತಾರ್ ಮತ್ತು ಗೌರಿ ಗ್ರಾಮಗಳಿಗಾಗಿ ಮಹಾರಾಷ್ಟ್ರ, ತೆಲಂಗಾಣ ಕಾನೂನು ಹೋರಾಟ ನಡೆಸುತ್ತಿವೆ.

1956 ರಲ್ಲಿ ಭಾಷಾವಾರು ರಾಜ್ಯಗಳ ಮರುವಿಂಗಡಣೆಯ ವೇಳೆ ಈ 12 ಗ್ರಾಮಗಳನ್ನು ಆಂಧ್ರಪ್ರದೇಶದಲ್ಲಿ ಸೇರಿಸಲಾಯಿತು. ಆದರೆ, ಇವು ಭೌಗೋಳಿಕ ಮತ್ತು ಸಾಂಸ್ಕೃತಿಕವಾಗಿ ಮಹಾರಾಷ್ಟ್ರಕ್ಕೆ ಹತ್ತಿರವಾಗಿವೆ. ಈ ಗ್ರಾಮಗಳಲ್ಲಿ 9,246 ಜನಸಂಖ್ಯೆ ಇದ್ದು, ಈ ಪೈಕಿ 3,283 ಮತದಾರರು ಇದ್ದಾರೆ. ಮಹಾರಾಷ್ಟ್ರ ಸರ್ಕಾರ 1987 ರಲ್ಲಿ ಈ ಗ್ರಾಮಗಳನ್ನು ತನ್ನ ಚಂದ್ರಾಪುರ ಜಿಲ್ಲೆಯ ಜಿವಿಟಿ ತಾಲೂಕಿಗೆ ಸೇರಿಸಿಕೊಂಡಿತು. ಬಳಿಕ ಇಲ್ಲಿ ಪಂಚಾಯತ್ ಚುನಾವಣೆಗಳನ್ನು ನಡೆಸಿತ್ತು.

ಈ ಹಳ್ಳಿಗಳ ಅರಣ್ಯ ಪ್ರದೇಶವು ಕೊಮರಾಮ್​ ಭೀಮ್​ ಜಿಲ್ಲೆಯ ಕಾಗಜ್‌ನಗರ ವಿಭಾಗಕ್ಕೆ ಸೇರುತ್ತದೆ. ಗಡಿ ವಿವಾದ ಬಗೆಹರಿಸಲು ಎರಡೂ ರಾಜ್ಯಗಳು ಜಂಟಿಯಾಗಿ ಕೆ.ಕೆ. ನಾಯ್ಡು ಆಯೋಗವನ್ನು ರಚಿಸಿದವು. ನಂತರದಲ್ಲಿ ಈ ಎಲ್ಲ ಹಳ್ಳಿಗಳು ಆಂಧ್ರಪ್ರದೇಶ(ಇಂದಿನ ತೆಲಂಗಾಣ)ಕ್ಕೆ ಸೇರಿದ್ದು ಎಂದು ಹೈಕೋರ್ಟ್ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಮಹಾರಾಷ್ಟ್ರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಪ್ರಕರಣ ಇನ್ನೂ ವಿಚಾರಣೆ ಹಂತದಲ್ಲಿದೆ.

ಈ ಹಳ್ಳಿಗಳಿಗೆ ಎರಡೆರಡು ಸರ್ಕಾರ: ಪಂಚರಾಜ್ಯ ಚುನಾವಣೆಗಳಲ್ಲಿ ತೆಲಂಗಾಣ ವಿಧಾನಸಭೆಗೂ ಚುನಾವಣೆ ನಡೆಯಲಿದ್ದು, ಈ ಗ್ರಾಮಗಳ ಜನರು ಮತದಾನ ಮಾಡಲಿದ್ದಾರೆ. ಮಹಾರಾಷ್ಟ್ರ ಚುನಾವಣೆಗೂ ಮತ ಹಾಕುತ್ತಾರೆ. ಇದರೊಂದಿಗೆ ಲೋಕಸಭೆ ಚುನಾವಣೆಯಲ್ಲೂ ಮತ ಚಲಾಯಿಸುತ್ತಾರೆ. ಪ್ರತಿ ಕುಟುಂಬವು ಎರಡು ಪಡಿತರ ಚೀಟಿ, ಎರಡು ಪಿಂಚಣಿಗಳು, ಎರಡು ಮತದಾರರ ಗುರುತಿನ ಚೀಟಿ, ಎರಡು ರಾಜ್ಯಗಳ ವಿದ್ಯುತ್ ಕಂಬಗಳು, ಎರಡು ಶಾಲೆಗಳು, ಎರಡು ಅಂಗನವಾಡಿ ಕೇಂದ್ರಗಳು ಮತ್ತು ಆರೋಗ್ಯ ಕೇಂದ್ರಗಳು ಹೊಂದಿವೆ. ಇಲ್ಲಿನವರು ಇಬ್ಬರು ಸರಪಂಚ್‌ಗಳು, ಇಬ್ಬರು ಶಾಸಕರು, ಇಬ್ಬರು ಸಿಎಂಗಳು ಮತ್ತು ಇಬ್ಬರು ಸಂಸದರ ವ್ಯಾಪ್ತಿಗೆ ಬರುತ್ತಾರೆ.

ಇದನ್ನೂ ಓದಿ: ಯೋಧರೊಂದಿಗೆ ಬೆಳಕಿನ ಹಬ್ಬ ಆಚರಿಸಿದ ಮೋದಿ: 'ದೇಶ ನಿಮಗೆ ಋಣಿ' ಎಂದ ಪ್ರಧಾನಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.