ETV Bharat / bharat

ವಿಶಾಖಪಟ್ಟಣಂ ಆಂಧ್ರಪ್ರದೇಶದ ಹೊಸ ರಾಜಧಾನಿಯಾಗಲಿದೆ: ನಾನೂ ಕೂಡ ಕಾತರನಾಗಿದ್ದೇನೆ; ಜಗನ್​ ಘೋಷಣೆ - ಸುಪ್ರೀಂ ಕೋರ್ಟ್‌

ವಿಶಾಖಪಟ್ಟಣಂ ಆಂದ್ರಪ್ರದೇಶ ಹೊಸ ರಾಜಧಾನಿ ಆಗಲಿದೆ- ನಾನೂ ಅಲ್ಲಿಗೆ ಹೋಗಲು ಸಿದ್ಧನಾಗಿದ್ದೇನೆ - ಮಾರ್ಚ್ 3 ಹಾಗೂ 4ರಂದು ವಿಶಾಖಪಟ್ಟಣಂದಲ್ಲಿ ಜಾಗತಿಕ ಹೂಡಿಕೆದಾರರ ಶೃಂಗಸಭೆ

CM Jagan Reddy
ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ
author img

By

Published : Jan 31, 2023, 4:52 PM IST

Updated : Jan 31, 2023, 5:10 PM IST

ವಿಜಯವಾಡ (ಆಂಧ್ರಪ್ರದೇಶ): ಮುಖ್ಯಮಂತ್ರಿ ಜಗನ್ ವಿಶಾಖ ರಾಜಧಾನಿ ಕುರಿತು ಮಾತನಾಡಿದ್ದಾರೆ. ಶೀಘ್ರದಲ್ಲೇ ರಾಜ್ಯದ ರಾಜಧಾನಿಯನ್ನು ವಿಶಾಖಪಟ್ಟಣಕ್ಕೆ ಸ್ಥಳಾಂತರಿಸಲಾಗುವುದು ಎಂದು ಅವರು ಪುನರುಚ್ಚರಿಸಿದ್ದಾರೆ. ದೆಹಲಿಯಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಭಾಗವಹಿಸಿದ್ದ ಜಗನ್, ಅದೇ ಸ್ಥಳದಿಂದ ವಿಚಾರವನ್ನು ಈ ಘೋಷಣೆ ಮಾಡಿದರು. ವಿಶಾಖಪಟ್ಟಣಕ್ಕೆ ಶಿಫ್ಟ್ ಆಗುವುದಾಗಿಯೂ ಅವರು ಪ್ರಕಟಿಸಿದ್ದಾರೆ. ಮಾ.3 ಮತ್ತು 4ರಂದು ವಿಶಾಖಪಟ್ಟಣದಲ್ಲಿ ಹೂಡಿಕೆದಾರರ ಸಮಾವೇಶ ನಡೆಯಲಿದೆ ಎಂದು ಘೋಷಿಸಿದ ಜಗನ್, ಸಮಾವೇಶದಲ್ಲಿ ಭಾಗವಹಿಸುವ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಅಲ್ಲಿಗೂ ಬರುವಂತೆ ತಿಳಿಸಿದರು. ವಿಶಾಖಪಟ್ಟಣದಲ್ಲಿ ಮತ್ತೊಮ್ಮೆ ಎಲ್ಲರನ್ನು ಭೇಟಿಯಾಗುವುದಾಗಿ ತಿಳಿಸಿದರು.

ಜಗನ್​​​​ ಹೇಳಿದ್ದಿಷ್ಟು: ನಾನು ನಿಮ್ಮನ್ನು ವಿಶಾಖಕ್ಕೆ ಆಹ್ವಾನಿಸುತ್ತೇನೆ. ವಿಶಾಖಪಟ್ಟಣಂ ರಾಜಧಾನಿಯಾಗಲಿದೆ. ಇನ್ನು ಕೆಲವೇ ತಿಂಗಳುಗಳಲ್ಲಿ ನಾನು ಕೂಡ ವಿಶಾಖಪಟ್ಟಣಕ್ಕೆ ಶಿಫ್ಟ್ ಆಗಲಿದ್ದೇನೆ. ವಿಶಾಖಪಟ್ಟಣಂನಲ್ಲಿ ನಿಮ್ಮನ್ನು ಮತ್ತೆ ಭೇಟಿಯಾಗುವ ಭರವಸೆ ಇದೆ. ಮಾರ್ಚ್ 3 ಮತ್ತು 4 ರಂದು ವಿಶಾಖಪಟ್ಟಣದಲ್ಲಿ ಹೂಡಿಕೆದಾರರ ಸಮಾವೇಶ ನಡೆಯಲಿದೆ" - ಸಿಎಂ ಜಗನ್

ಸುಪ್ರೀಂ ಕೋರ್ಟ್‌ನಲ್ಲಿ ಈ ಕುರಿತಂತೆ ಪ್ರಕರಣ ಬಾಕಿಯಿರುವ ಬೆನ್ನಲ್ಲೆ ಸಿಎಂ ಜಗನ್ ರೆಡ್ಡಿ ನೀಡಿರುವ ಈ ಹೇಳಿಕೆ ಭಾರೀ ಮಹತ್ವ ಪಡೆದುಕೊಂಡಿದೆ. ರಾಷ್ಟ್ರ ರಾಜಧಾನಿಯಲ್ಲಿ ಇಂದು ನಡೆದ ಅಂತಾರಾಷ್ಟ್ರೀಯ ಹೂಡಿಕೆದಾರರ ಸಮಾವೇಶದಲ್ಲಿ ರೆಡ್ಡಿ ಹೊಸ ರಾಜಧಾನಿಯ ವಿಚಾರದ ಬಗ್ಗೆ ಅವರು ಮಾತನಾಡಿದರು. ಸಭೆ ಉದ್ದೇಶಿಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ವಿಶಾಖಪಟ್ಟಣದಿಂದ ರಾಜ್ಯದ ಆಡಳಿತ ಆರಂಭಿಸುವುದು ಎಂದು ತಿಳಿಸಿದರು.

ವಿಶಾಖಪಟ್ಟಣಂ ರಾಜ್ಯಪಾಲರ ನಿವಾಸ ಆಗಲಿದೆ: "ವಿಶಾಖಪಟ್ಟಣದಲ್ಲಿ ನಡೆಯಲಿರುವ ಶೃಂಗಸಭೆಗೆ ನಿಮ್ಮೆಲ್ಲರನ್ನೂ ವೈಯಕ್ತಿಕವಾಗಿ ಆಹ್ವಾನಿಸಲು ನಾನು ಬಯಸುತ್ತೇನೆ. ತಾವು ಮಾತ್ರವಲ್ಲದೇ ವಿದೇಶದಲ್ಲಿರುವ ನಿಮ್ಮ ಸಹೋದ್ಯೋಗಿಗಳಿಗೆ ನಮ್ಮನ್ನು ಭೇಟಿ ಮಾಡಿ ಹಾಗೂ ನೀವೇ ಗಮನಿಸಿದಂತೆ ಒಳ್ಳೆಯ ಮಾತಗಳನ್ನು ಹೇಳಲು ವಿನಂತಿಸುತ್ತೇನೆ. ಇದರಿಂದ ನಮ್ಮ ಆಂಧ್ರಪ್ರದೇಶದಲ್ಲಿ ವ್ಯಾಪಾರ ಮಾಡುವುದು ಕೂಡಾ ತುಂಬಾ ಅನುಕೂಲವಾಗುತ್ತದೆ ಎಂದು ಸಿಎಂ ರೆಡ್ಡಿ ಇದೇ ವೇಳೆ ಉದ್ಯಮಿಗಳಲ್ಲಿ ಮನವಿ ಮಾಡಿದರು.

ವೈಜಾಗ್ ಎಂದು ಕರೆಯಲ್ಪಡುವ ವಿಶಾಖಪಟ್ಟಣವು ರಾಜ್ಯಪಾಲರ ನಿವಾಸವಾಗಿಯೂ ಕಾರ್ಯನಿರ್ವಹಿಸುತ್ತದೆ. ಇನ್ನೂ ಅಮರಾವತಿಯಿಂದಲೇ ಶಾಸಕಾಂಗ ಕಾರ್ಯ ನಿರ್ವಹಣೆ ನಡೆಯಲಿದೆ ಎಂದು ಸಿಎಂ ರೆಡ್ಡಿ ಹೇಳಿದ್ದಾರೆ. ಸುಪ್ರೀಂ ಕೋರ್ಟ್​ನಲ್ಲಿ ಬಾಕಿಯಿರುವ ಪ್ರಕರಣದ ಹಿನ್ನೆಲೆಯಲ್ಲಿ ಸಿಎಂ ರೆಡ್ಡಿ ಅವರು ಈ ಮಾತುಗಳು ಭಾರೀ ಚರ್ಚೆಗೆ ಗ್ರಾಸವಾಗಿವೆ.

33 ಸಾವಿರ ಎಕರೆ ಭೂಮಿ ರೈತರಿಂದ ಸ್ವಾಧೀನ: ಜಗನ್‌ ಅವರ ಈ ನೂತನ ಘೋಷಣೆ ಹಿನ್ನೆಲೆ ಕೃಷ್ಣಾ ನದಿಯ ದಂಡೆಯ ಮೇಲೆ ಅಮರಾವತಿ ಹೆಸರಿನಲ್ಲಿ ನಿರ್ಮಾಣವಾಗಬೇಕಿದ್ದ ರಾಜಧಾನಿ ಯೋಜನೆಗೆ ಕೊಕ್ಕೆಬಿದ್ದಿದೆ. ಆಂಧ್ರಪ್ರದೇಶ ರಾಜ್ಯದಿಂದ ತೆಲಂಗಾಣ ವಿಭಜನೆಯಾದ ಬಳಿಕ 10 ವರ್ಷ ಹೈದರಾಬಾದ್​ ನಗರವನ್ನೇ ರಾಜಧಾನಿಯಾಗಿ ಹೊಂದಲು ಅವಕಾಶ ನೀಡಲಾಗಿತ್ತು. ಆದರೆ ಆಗಿನ ಸಿಎಂ ಚಂದ್ರಬಾಬು ನಾಯ್ಡು ಅಮರಾವತಿಯನ್ನು ಆಂಧ್ರಪ್ರದೇಶದ ರಾಜಧಾನಿಯಾಗಿ ಘೋಷಣೆ ಮಾಡಿದ್ದರು.

ಅಮರಾವತಿಯನ್ನು ನೂತನ ರಾಜಧಾನಿಯಾಗಿ ನಿರ್ಮಿಸುವ ಯೋಜನೆಗೆ 33 ಸಾವಿರ ಎಕರೆ ಭೂಮಿಯನ್ನು ರೈತರಿಂದ ಜಮೀನ ಸ್ವಾಧೀನ ಮಾಡಿಕೊಳ್ಳಲಾಗಿತ್ತು. ಆದರೆ, ಜಗನ್​ಮೋಹನ್​ ರೆಡ್ಡಿ ಅಧಿಕಾರಕ್ಕೆ ಬಂದ ಮೇಲೆ ಮೂರು ರಾಜಧಾನಿಗಳನ್ನು ಘೋಷಣೆ ಮಾಡಿದ್ದರು. ಈ ವಿಚಾರ ಈಗ ಸುಪ್ರೀಂಕೋರ್ಟ್ ಅಂಗಳದಲ್ಲಿದೆ. ಹೀಗಿದ್ದರೂ ಜಗನ್​ ವಿಶಾಖಪಟ್ಟಣಕ್ಕೆ ರಾಜಧಾನಿ ಶಿಫ್ಟ್​ ಆಗಲಿದೆ ಎಂದು ಹೇಳಿದ್ದಾರೆ.

ಜಗನ್​ ಅಧಿಕಾರಕ್ಕೆ ಬಂದ ಮೇಲೆ ಅಮರಾವತಿ ಶಾಸಕಾಂಗ ರಾಜಧಾನಿ ಆಗಿದ್ದರೆ, ಇನ್ನೂ ಕರ್ನೂಲ್‌ ನ್ಯಾಯಾಂಗದ ರಾಜಧಾನಿ ಮತ್ತು ವಿಶಾಂಖಪಟ್ಟಣ ಕಾರ್ಯಾಂಗದ ರಾಜಧಾನಿ ಆಗಿ ಕಾರ್ಯನಿರ್ವಹಿಸುತ್ತಿವೆ. 2022ರ ಮಾರ್ಚ್‌ನಲ್ಲಿ ಆಂಧ್ರಪ್ರದೇಶ ಹೈಕೋರ್ಟ್‌ ಕೂಡಾ ಮೂರು ರಾಜಧಾನಿ ಘೋಷಿಸಿದ್ದ ಜಗನ್​ ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಅಮರಾವತಿ ಅಭಿವೃದ್ಧಿಪಡಿಸಲು ಹೇಳಿತ್ತು.

ಇದನ್ನೂ ಓದಿ: ಕೇಂದ್ರ ಬಜೆಟ್ 2023: ಆದಾಯ ತೆರಿಗೆ ಕಡಿತದ ನಿರೀಕ್ಷೆಯಲ್ಲಿ ನೌಕರ ವರ್ಗ

Last Updated : Jan 31, 2023, 5:10 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.