ETV Bharat / bharat

ಕೊರಿಯಾ ಪ್ರಜೆಯಿಂದ 5000 ರೂಪಾಯಿ ಲಂಚ ಪಡೆದ ಟ್ರಾಫಿಕ್ ಪೊಲೀಸ್.. ವಿಡಿಯೋ ವೈರಲ್​ - ವಿಡಿಯೋ ವೈರಲ್​

ದೆಹಲಿಯಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕೊರಿಯಾ ಪ್ರಜೆಯೊಬ್ಬರಿಂದ ಟ್ರಾಫಿಕ್ ಪೊಲೀಸ್​ ಸಿಬ್ಬಂದಿ 5000 ರೂಪಾಯಿ ಲಂಚ ಪಡೆಯುತ್ತಿರುವ ವಿಡಿಯೋ ವೈರಲ್​ ಆಗಿದೆ.

Video shows Delhi Traffic Police official taking Rs 5000 bribe from Korean National; suspended
ಕೊರಿಯಾ ಪ್ರಜೆಯಿಂದ 5000 ರೂಪಾಯಿ ಲಂಚ ಪಡೆದ ಟ್ರಾಫಿಕ್ ಪೊಲೀಸ್.. ವಿಡಿಯೋ ವೈರಲ್​
author img

By

Published : Jul 23, 2023, 11:09 PM IST

ನವದೆಹಲಿ: ದೆಹಲಿಯಲ್ಲಿ ಟ್ರಾಫಿಕ್ ಪೊಲೀಸ್​ ಸಿಬ್ಬಂದಿಯೊಬ್ಬರು ಕೊರಿಯಾ ಪ್ರಜೆಯಿಂದ 5000 ರೂಪಾಯಿ ಲಂಚ ಪಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಇದರ ಬೆನ್ನಲ್ಲೇ ಆರೋಪಿ ಪೊಲೀಸನನ್ನು ಅಮಾನತುಗೊಳಿಸಲಾಗಿದೆ. ಕೊರಿಯನ್ ಪ್ರಜೆ ತನ್ನ ಕಾರಿನೊಳಗೆ ಅಳವಡಿಸಲಾಗಿದ್ದ ಕ್ಯಾಮೆರಾದಲ್ಲಿ ಲಂಚದ ಇಡೀ ಘಟನೆಯನ್ನು ಚಿತ್ರೀಕರಿಸಿದ್ದಾನೆ.

ದೆಹಲಿ ಪೊಲೀಸ್​ವೊಬ್ಬರು ವಿದೇಶಿಗನಿಂದ 5000 ರೂಪಾಯಿ ಹಣ ಪಡೆದರು. ಆದರೆ, ಅವರಿಗೆ ರಸೀದಿಯನ್ನು ಸಹ ನೀಡಿಲ್ಲ ಎಂದು ಬಿಂಬಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಹರಿದಾಡಿದೆ. ಈ ಸಾಮಾಜಿಕ ಮಾಧ್ಯಮದ ಪೋಸ್ಟ್​ ಗಮನದಲ್ಲಿಟ್ಟುಕೊಂಡು ವಿಡಿಯೋದಲ್ಲಿ ಕಂಡು ಬಂದ ಸಂಬಂಧಿತ ಅಧಿಕಾರಿಯನ್ನು ವಿಚಾರಣೆಗೆ ಬಾಕಿಯಿರುವಂತೆ ಅಮಾನತುಗೊಳಿಸಲಾಗಿದೆ. ದೆಹಲಿ ಪೊಲೀಸರು ಭ್ರಷ್ಟಾಚಾರದ ಬಗ್ಗೆ ಶೂನ್ಯ ಸಹಿಷ್ಣುತೆಯ ನೀತಿಯನ್ನು ಹೊಂದಿದ್ದಾರೆ ಎಂದು ದೆಹಲಿ ಟ್ರಾಫಿಕ್ ಪೊಲೀಸರು ಭಾನುವಾರ ಟ್ವೀಟ್ ಮಾಡಿದ್ದಾರೆ.

  • किस प्रकार राष्ट्र राजधानी में भिखारियों और वसूली गैंग को विदेशी भाइयों को लूटने के लिए और देश का नाम रोशन करने के लिए खुला छोड़ रखा है।
    पुरी @g20org की तैयारी देखने के लिए यहां क्लिक करे: https://t.co/pC6cPARsa3@DelhiComplaint @LtGovDelhi@AmitShah @ArvindKejriwal pic.twitter.com/8N56P25IAN

    — Crime Free Delhi (@CrimeFreeDelhi1) July 21, 2023 " class="align-text-top noRightClick twitterSection" data=" ">

ಕೊರಿಯನ್ ಪ್ರಜೆ ದೆಹಲಿ ಪೊಲೀಸಪ್ಪನ ಲಂಚ ಪ್ರಕರಣದ ಘಟನೆ ಸೇರಿದಂತೆ ಭಾರತಕ್ಕೆ ಪ್ರವಾಸದ ವಿಡಿಯೋ ಮಾಡಿಕೊಂಡಿದ್ದರು. ಈ ವಿಡಿಯೋವನ್ನು 1.34 ಮಿಲಿಯನ್ ಚಂದಾದಾರರನ್ನು ಹೊಂದಿರುವ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಟ್ರಾಫಿಕ್ ಪೊಲೀಸ್​ನನ್ನು 'ಹೇಗಿದ್ದೀರಾ' ವಿದೇಶಿ ಪ್ರಜೆ ಕೇಳುತ್ತಾನೆ. ಇದಕ್ಕೆ ಪ್ರತ್ಯುತ್ತರವಾಗಿ ಪೊಲೀಸ್, 'ದಾರಿ ತಪ್ಪಿದೆ' ಎಂದು ಹೇಳುತ್ತಾನೆ. ಆಗ ವಿದೇಶಿಗ ಕೈಮುಗಿದು ಕ್ಷಮೆ ಕೇಳುತ್ತಾನೆ. ಮುಂದುವರೆದು, ಟ್ರಾಫಿಕ್ ಪೊಲೀಸ್​ ಈ ವಿದೇಶಿ ಪ್ರಜೆಗೆ 5000 ರೂಪಾಯಿಗಳ 'ಕೋರ್ಟ್ ದಂಡ' ತೆರಬೇಕೆಂದು ಹೇಳುತ್ತಿರುವುದು ಸೆರೆಯಾಗಿದೆ.

ಆಗ ಕೊರಿಯನ್ ಪ್ರಜೆ 'ಎಷ್ಟು?' ಎಂದು ಪ್ರಶ್ನಿಸುತ್ತಾರೆ. ಇದಕ್ಕೆ '5000 ರೂಪಾಯಿ' ಪೊಲೀಸ್​ ಹೇಳುತ್ತಾನೆ. ಈ ವೇಳೆ ಕೊರಿಯನ್ ಪ್ರಜೆ 500 ರೂ. ನೋಟನ್ನು ಹಸ್ತಾಂತರಿಸುತ್ತಾನೆ. ಅದಕ್ಕೆ ಪೊಲೀಸಪ್ಪ, '500 ರೂಪಾಯಿ ಅಲ್ಲ, 5000 ರೂಪಾಯಿ' ಎಂದು ಹೇಳುತ್ತಾನೆ. ಇದರಿಂದ ಪೊಲೀಸ್‌ಗೆ ನೋಟುಗಳ ಬಂಡಲ್​ಅನ್ನು ಕೊರಿಯನ್ ಪ್ರಜೆ ನೀಡುತ್ತಾನೆ. ಈ ವೇಳ, ಆ ಬಂಡಲ್​ನಿಂದ ಒಂದು ನೋಟನ್ನು ಹಿಂದಿರುಗಿಸುವ ಮೂಲಕ ಭ್ರಷ್ಟ ಪೊಲೀಸ್ ತಾನು ಪ್ರಾಮಾಣಿಕನೆಂದು ತೋರಿಸಲು ಯತ್ನಿಸುವುದು ಸಹ ವಿಡಿಯೋದಲ್ಲಿ ದಾಖಲಾಗಿದೆ.

ಆದರೆ, ಕೊರಿಯನ್ ಪ್ರಜೆಯಿಂದ 500 ರೂಪಾಯಿ ಪಡೆದರೂ, ಯಾವುದೇ ರಸೀದಿ ನೀಡದೆ ಪೊಲೀಸಪ್ಪ ಕೈ ಕುಲುಕಿ ಹೊರಟು ಹೋಗುತ್ತಾನೆ. ಈ ವಿಡಿಯೋ ಒಂದು ತಿಂಗಳ ಹಳೆಯದು ಎನ್ನಲಾಗಿದೆ. ಮತ್ತೊಂದೆಡೆ, ತನಿಖೆಯ ವೇಳೆ ಪೊಲೀಸ್​ ಚಲನ್ ರಶೀದಿಯನ್ನು ನೀಡುವುದಾಗಿ ಹೇಳಿದ್ದರು. ಆದರೆ, ಅಷ್ಟರಲ್ಲೇ ಕಾರಿನಲ್ಲಿ ಕೊರಿಯನ್ ಪ್ರಜೆ ಸ್ಥಳದಿಂದ ತೆರಳಿದ್ದರು ಎಂಬುವುದಾಗಿ ಗೊತ್ತಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಕೆಎಸ್ಆರ್​ಪಿಯಲ್ಲಿ ಭ್ರಷ್ಟಾಚಾರದ ಆರೋಪ: ಮೇಲಾಧಿಕಾರಿಗಳ ವಿರುದ್ಧ ಎಡಿಜಿಪಿಗೆ ದೂರು ನೀಡಿದ ಪೊಲೀಸ್ ಸಿಬ್ಬಂದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.