ETV Bharat / bharat

ದೆಹಲಿ ನೂತನ ಲೆಫ್ಟಿನೆಂಟ್​ ಗವರ್ನರ್​ ಆಗಿ ವಿನಯ್​ಕುಮಾರ್​ ಸಕ್ಸೇನಾ ನೇಮಕ - ದೆಹಲಿ ನೂತನ ಲೆಫ್ಟಿನೆಂಟ್​ ಗವರ್ನರ್ ನೇಮಕ

ಅನಿಲ್​ ಬೈಜಾಲ್​ ಅವರಿಂದ ತೆರವಾದ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಹುದ್ದೆಗೆ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಅಧ್ಯಕ್ಷ ವಿನಯ್​ಕುಮಾರ್ ಸಕ್ಸೇನಾ ಅವರನ್ನು ರಾಷ್ಟ್ರಪತಿ ಭವನ ನೇಮಕ ಮಾಡಿದೆ.

vinai-kumar-saxena
ದೆಹಲಿ ನೂತನ ಲೆಫ್ಟಿನೆಂಟ್​ ಗವರ್ನರ್​ ಆಗಿ ವಿನಯ್​ಕುಮಾರ್​ ಸಕ್ಸೇನಾ ನೇಮಕ
author img

By

Published : May 23, 2022, 9:51 PM IST

ನವದೆಹಲಿ: ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಅಧ್ಯಕ್ಷ ವಿನಯ್​ಕುಮಾರ್ ಸಕ್ಸೇನಾ ಅವರನ್ನು ದೆಹಲಿಯ ನೂತನ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕ ಮಾಡಲಾಗಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅನಿಲ್​ ಬೈಜಾಲ್ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದು, ವಿನಯ್ ಕುಮಾರ್ ಸಕ್ಸೇನಾ ಅವರನ್ನು ಹೊಸ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಿಸಿದ್ದಾರೆ ಎಂದು ರಾಷ್ಟ್ರಪತಿ ಭವನ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

5 ವರ್ಷ 4 ತಿಂಗಳ ಕಾಲ ದೆಹಲಿಯ ಎಲ್‌ಜಿಯಾಗಿ ಸೇವೆ ಸಲ್ಲಿಸಿದ್ದ ಬೈಜಾಲ್ ಅವರು ಕಳೆದ ವಾರವಷ್ಟೇ ವೈಯಕ್ತಿಕ ಕಾರಣಗಳಿಗಾಗಿ ರಾಜೀನಾಮೆ ನೀಡಿದ್ದರು. ಅವರಿಂದ ತೆರವಾಗಿದ್ದ ದೆಹಲಿ ಲೆಫ್ಟಿನೆಂಟ್​ ಹುದ್ದೆಯನ್ನು ವಿನಯ್​ಕುಮಾರ್​ ಸಕ್ಸೇನಾ ತುಂಬಿದ್ದಾರೆ. ಸಕ್ಸೇನಾ ಅವರು 2015 ರಿಂದ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಅಧ್ಯಕ್ಷರಾಗಿ ಅಧಿಕಾರದಲ್ಲಿದ್ದರು.

ಓದಿ: ಡಿಜಿಲಾಕರ್ ಸೇವೆ ಇನ್ನು‌ ಮುಂದೆ ವಾಟ್ಸ್​ಆ್ಯಪ್​ ಮೂಲಕವೂ ಲಭ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.