ನವದೆಹಲಿ : ಮುಂದಿನ ದಿನಗಳಲ್ಲಿ ಯಾವುದೇ ಸಾಂಕ್ರಾಮಿಕ ರೋಗವನ್ನು ಎದುರಿಸಲು ಸಂಶೋಧನೆಯನ್ನು ತೀವ್ರಗೊಳಿಸಿ ಎಂದು ಡಿಆರ್‌ಡಿಒ ವಿಜ್ಞಾನಿಗಳಿಗೆ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಒತ್ತಾಯಿಸಿದ್ದಾರೆ.
ಡಿಆರ್‌ಡಿಒ ಲ್ಯಾಬ್‌ನೊಂದಿಗೆ ಡಿಫೆನ್ಸ್ ಇನ್‌ಸ್ಟಿಟ್ಯೂಟ್ ಆಫ್ ಫಿಸಿಯಾಲಜಿ ಮತ್ತು ಅಲೈಡ್ ಸೈನ್ಸಸ್ (ಡಿಐಪಿಎಎಸ್) ವಿಜ್ಞಾನಿಗಳು ಕೆಲಸ ಮಾಡಿದ್ದನ್ನು ನಾಯ್ಡು ಶ್ಲಾಘಿಸಿದ್ದಾರೆ. ಕೋವಿಡ್ ನಮಗೆ ಬಿಕ್ಕಟ್ಟನ್ನು ಸೃಷ್ಟಿಸಿದೆ. ಜಗತ್ತಿನ ಜನಜೀವನ, ಜೀವನೋಪಾಯದ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ಉಪರಾಷ್ಟ್ರಪತಿ ಹೇಳಿದ್ದಾರೆ.
ಅಲ್ಲದೆ, ಕೋವಿಡ್ ಹೊಸ ರೂಪಾಂತರಗಳು ಪತ್ತೆಯಾಗುತ್ತಿರುವ ಹಿನ್ನೆಲೆ, ಭವಿಷ್ಯದಲ್ಲಿ ಅದರ ಬೆದರಿಕೆಗಳನ್ನು ಎದುರಿಸಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು. ವೈರಸ್ ನಿಭಾಯಿಸಲು ಸ್ಥಳೀಯ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿದ್ದಕ್ಕಾಗಿ ಡಿಐಪಿಎಎಸ್ ಮತ್ತು ಇತರ ಡಿಆರ್‌ಡಿಒ ಲ್ಯಾಬ್‌ಗಳನ್ನು ಅವರು ಪ್ರಶಂಶಿಸಿದ್ದಾರೆ.
ಇದನ್ನೂ ಓದಿ: COVID: 2ನೇ ಅಲೆಯಲ್ಲಿ ಮೊದಲ ಬಾರಿಗೆ ಗಣನೀಯ ಇಳಿಕೆ ಕಂಡ ಸೋಂಕಿತರ ಸಂಖ್ಯೆ
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 42,909 ಕೋವಿಡ್ ಪ್ರಕರಣ ಪತ್ತೆಯಾಗಿವೆ. 380 ಸೋಂಕಿತರು ಮೃತಪಟ್ಟಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.