ನವದೆಹಲಿ: ಸಂಸತ್ತಿನ ವಿಶೇಷ ಅಧಿವೇಶನ ಪ್ರಾರಂಭವಾಗುವ ಒಂದು ದಿನ ಮುಂಚಿತವಾಗಿ ಇಂದು ಉಪರಾಷ್ಟ್ರಪತಿ ಮತ್ತು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ ಅವರು ಹೊಸ ಸಂಸತ್ ಭವನದ ಗಜ ದ್ವಾರದೆದುರು ರಾಷ್ಟ್ರ ಧ್ವಜಾರೋಹಣ ಮಾಡಿದರು. ಸೋಮವಾರದಿಂದ ಆರಂಭವಾಗುವ ವಿಶೇಷ ಅಧಿವೇಶನ ಕಲಾಪಗಳು ನೂತನ ಕಟ್ಟಡದಲ್ಲೇ ನಡೆಯಲಿವೆ. ಧ್ವಜಾರೋಹಣ ಸಂದರ್ಭದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಉಪಸ್ಥಿತರಿದ್ದರು.
-
#WATCH | Rajya Sabha Chairman and Vice President Jagdeep Dhankhar hoists the national flag at Gaj Dwar, the New Building of Parliament. pic.twitter.com/dwlGNDfjGq
— ANI (@ANI) September 17, 2023 " class="align-text-top noRightClick twitterSection" data="
">#WATCH | Rajya Sabha Chairman and Vice President Jagdeep Dhankhar hoists the national flag at Gaj Dwar, the New Building of Parliament. pic.twitter.com/dwlGNDfjGq
— ANI (@ANI) September 17, 2023#WATCH | Rajya Sabha Chairman and Vice President Jagdeep Dhankhar hoists the national flag at Gaj Dwar, the New Building of Parliament. pic.twitter.com/dwlGNDfjGq
— ANI (@ANI) September 17, 2023
ಸಮಾರಂಭದ ನಂತರ ಮಾತನಾಡಿದ ಧನಕರ್, "ಭಾರತ ಯುಗಾಂತರದ ಬದಲಾವಣೆಗೆ ಸಾಕ್ಷಿಯಾಗಿದೆ. ಇಡೀ ವಿಶ್ವವೇ ಭಾರತದ ಶಕ್ತಿ ಮತ್ತು ಕೊಡುಗೆಯನ್ನು ಗುರುತಿಸುತ್ತಿದೆ. ನಾವು ಅದ್ಭುತ ಅಭಿವೃದ್ಧಿ, ಸಾಧನೆಗಳನ್ನು ನೋಡುತ್ತಿರುವ ಕಾಲದಲ್ಲಿ ಬದುಕುತ್ತಿದ್ದೇವೆ" ಎಂದರು.
ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವರಾದ ವಿ.ಮುರಳೀಧರನ್, ಪಿಯೂಷ್ ಗೋಯಲ್, ಅರ್ಜುನ್ ರಾಮ್ ಮೇಘವಾಲ್, ಕಾಂಗ್ರೆಸ್ ಸಂಸದರಾದ ಅಧೀರ್ ರಂಜನ್ ಚೌಧರಿ ಮತ್ತು ಪ್ರಮೋದ್ ತಿವಾರಿ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಕಾಂಗ್ರೆಸ್ ಅಧ್ಯಕ್ಷ ಮತ್ತು ರಾಜ್ಯಸಭೆ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಶನಿವಾರ ತಿಳಿಸಿದ್ದರು. ಇದೇ ವೇಳೆ, ತನಗೆ ಸಾಕಷ್ಟು ತಡವಾಗಿ ಆಹ್ವಾನ ಬಂದಿದ್ದಾಗಿ ಹೇಳಿದ್ದರು.
-
#WATCH | Rajya Sabha Chairman and Vice President Jagdeep Dhankhar says "It is a historic moment. Bharat is witnessing epochal change. The world is in total recognition of might power and contribution of Bharat. We are living in times, where we are witnessing development,… https://t.co/J5ZtANt78y pic.twitter.com/iWEYBetAmD
— ANI (@ANI) September 17, 2023 " class="align-text-top noRightClick twitterSection" data="
">#WATCH | Rajya Sabha Chairman and Vice President Jagdeep Dhankhar says "It is a historic moment. Bharat is witnessing epochal change. The world is in total recognition of might power and contribution of Bharat. We are living in times, where we are witnessing development,… https://t.co/J5ZtANt78y pic.twitter.com/iWEYBetAmD
— ANI (@ANI) September 17, 2023#WATCH | Rajya Sabha Chairman and Vice President Jagdeep Dhankhar says "It is a historic moment. Bharat is witnessing epochal change. The world is in total recognition of might power and contribution of Bharat. We are living in times, where we are witnessing development,… https://t.co/J5ZtANt78y pic.twitter.com/iWEYBetAmD
— ANI (@ANI) September 17, 2023
ರಾಜ್ಯಸಭೆ ಪ್ರಧಾನ ಕಾರ್ಯದರ್ಶಿಗೆ ಈ ಕುರಿತು ಖರ್ಗೆ ಪತ್ರ ಬರೆದಿದ್ದರು. ಸೆಪ್ಟೆಂಬರ್ 15ರ ಸಂಜೆ ನನಗೆ ಕಾರ್ಯಕ್ರಮಕ್ಕೆ ಆಹ್ವಾನ ಬಂದಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೊಸ ಸಂಸತ್ ಭವನದಲ್ಲಿ ಧ್ವಜಾರೋಹಣ ಕಾರ್ಯಕ್ರಮಕ್ಕೆ ಕಳುಹಿಸಿದ ನಿಮ್ಮ ಆಹ್ವಾನವನ್ನು ನಾನು ಸೆಪ್ಟೆಂಬರ್ 15, 2023 ರಂದು ಸಂಜೆ ತಡವಾಗಿ ಸ್ವೀಕರಿಸಿದ್ದೇನೆ ಎಂದು ಖರ್ಗೆ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಇನ್ನು ಹೊಸದಾಗಿ ರಚಿಸಲಾದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆಗಳಲ್ಲಿ ಭಾಗವಹಿಸಲು ಖರ್ಗೆ ಪ್ರಸ್ತುತ ಹೈದರಾಬಾದ್‌ನಲ್ಲಿದ್ದಾರೆ. ಭಾನುವಾರ ತಡರಾತ್ರಿ (ಇಂದು) ದೆಹಲಿಗೆ ಹಿಂತಿರುಗಲಿದ್ದಾರೆ.
ಇದನ್ನೂ ಓದಿ: 'ಪಿಎಂ ವಿಶ್ವಕರ್ಮ ಯೋಜನೆ'ಗೆ ಇಂದು ಚಾಲನೆ ನೀಡಲಿದ್ದಾರೆ ಮೋದಿ: ₹13,000 ಕೋಟಿ ಅನುದಾನ