ನವದೆಹಲಿ: ಮೇ 6 ರಂದು ಬೆಳಗ್ಗೆ ಕಿಂಗ್ ಚಾರ್ಲ್ಸ್ III ಪಟ್ಟಾಭಿಷೇಕ ನಡೆಯಲಿದ್ದು, ಈ ಸಮಾರಂಭದಲ್ಲಿ ಭಾಗವಹಿಸಲು ಉಪಾಧ್ಯಕ್ಷ ಜಗದೀಪ್ ಧನಕರ್ ಇಂದಿನಿಂದ ಯುನೈಟೆಡ್ ಕಿಂಗ್ಡಮ್, ಲಂಡನ್ಗೆ 2 ದಿನದ ಪ್ರವಾಸ ಕೈಗೊಂಡಿದ್ದಾರೆ. ಕಿಂಗ್ ಚಾರ್ಲ್ಸ್ ಅವರ ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ರಾಜ್ಯ, ರಾಷ್ಟ್ರದ ಮುಖ್ಯಸ್ಥರು ಮತ್ತು 2000 ಗಣ್ಯರ ಜೊತೆ ಉಪಾಧ್ಯಕ್ಷ ಜಗದೀಪ್ ಧನಕರ್ ಕೂಡಾ ಭಾಗಿಯಾಗಲಿದ್ದಾರೆ.
ಈ ಇಂಗ್ಲೆಂಡ್ ಭೇಟಿ ವೇಳೆ, ಭೇಟಿ ವೇಳೆ ಉಪಾಧ್ಯಕ್ಷರ ಪತ್ನಿ ಸುದೇಶ್ ಧನಕರ್ ಕೂಡಾ ಭಾಗವಹಿಸಲಿದ್ದಾರೆ. ಕಿಂಗ್ ಚಾರ್ಲ್ಸ್ III ರ ಪಟ್ಟಾಭಿಷೇಕ ಸಮಾರಂಭಕ್ಕಾಗಿ ಯುನೈಟೆಡ್ ಕಿಂಗ್ಡಮ್ ಭಾರತ ಸೇರಿದಂತೆ ಅಂತಾರಾಷ್ಟ್ರೀಯ ಸಮುದಾಯಗಳಿಗೂ ಇತ್ತೀಚೆಗೆ ಆಹ್ವಾನ ನೀಡಿತ್ತು.
ಮೇ 2 ರಂದು ಬ್ರಿಟಿಷ್ ಹೈ ಕಮಿಷನರ್ ಅಲೆಕ್ಸ್ ಎಲ್ಲಿಸ್ ವೆಸ್ಟ್‌ಮಿನ್‌ಸ್ಟರ್ ಅಬ್ಬೆಯಲ್ಲಿ ನಡೆಯುವ ಕಿಂಗ್ ಚಾರ್ಲ್ಸ್ III ರ ಪಟ್ಟಾಭಿಷೇಕ ಸಮಾರಂಭದ ಸಿದ್ಧತೆಗಳ ಕುರಿತು ಚರ್ಚಿಸಲು ಉಪಾಧ್ಯಕ್ಷ ಜಗದೀಪ್ ಧನಕರ್ ಅವರನ್ನು ಭೇಟಿಯಾಗಿದ್ದರು. ಅಲ್ಲದೇ, ಬ್ರಿಟಿಷ್ ಹೈ ಕಮಿಷನರ್ ಪಟ್ಟಾಭಿಷೇಕ ಸಮಾರಂಭದಲ್ಲಿ ಪಾಲ್ಗೊಳ್ಳುವ ಮೊದಲೇ ಭಾರತದ ಉಪಾಧ್ಯಕ್ಷರನ್ನು ಭೇಟಿ ಮಾಡುತ್ತಿರುವುದಕ್ಕೆ ಗೌರವವಿದೆ. ಈ ಮಹತ್ವದ ಸಂದರ್ಭ ಯುಕೆ ಮತ್ತು ಭಾರತದ ಸಂಬಂಧವನ್ನು ಮತ್ತಷ್ಟು ಗಟ್ಟಿಯಾಗಿಸುವ ಅವಕಾಶ ಎಂದು ಟ್ವೀಟ್ ಮಾಡಿದ್ದರು.
ವೆಸ್ಟ್‌ಮಿನ್‌ಸ್ಟರ್ ಅಬ್ಬೆಯಲ್ಲಿ ನಡೆಯಲಿರುವ ಪಟ್ಟಾಭಿಷೇಕ: ಕಿಂಗ್ ಚಾರ್ಲ್ಸ್ III ರ ಪಟ್ಟಾಭಿಷೇಕವು ಲಂಡನ್‌ನ ವೆಸ್ಟ್‌ಮಿನ್‌ಸ್ಟರ್ ಅಬ್ಬೆಯಲ್ಲಿ ನಾಳೆ ಶನಿವಾರ ನಡೆಯಲಿದೆ. 1953 ರಲ್ಲಿ ನಡೆದ ರಾಣಿ ಎಲಿಜಬೆತ್ II ಕೊನೆಯ ಪಟ್ಟಾಭಿಷೇಕದ ನಂತರ ನಡೆಯುತ್ತಿರುವ ಪಟ್ಟಾಭಿಷೇಕವಾಗಿದೆ. ಈ ಹಿನ್ನೆಲೆಯಲ್ಲಿ ಈ ಸಮಾರಂವ ಭಾರಿ ಮಹತ್ವ ಪಡೆದುಕೊಂಡಿದೆ. ರಾಜಮನೆತನದ ಪ್ರಕಾರ, ಪಟ್ಟಾಭಿಷೇಕದ ಬೆಳಗ್ಗೆ ಕಿಂಗ್ ಚಾರ್ಲ್ಸ್ III ಮತ್ತು ಕ್ಯಾಮಿಲ್ಲಾ ಬಕ್ಕಿಂಗ್ ಹ್ಯಾಮ್ ಅರಮನೆಯಿಂದ ರಾಜನ ಮೆರವಣಿಗೆಯ ಮೂಲಕ ವೆಸ್ಟ್‌ಮಿನ್‌ಸ್ಟರ್ ಅಬ್ಬೆಗೆ ಡೈಮಂಡ್ ಜುಬಿಲಿ ಸ್ಟೇಟ್ ಕೋಚ್ನಲ್ಲಿ ತೆರಳಲಿದ್ದಾರೆ. ಈ ಡೈಮಂಡ್ ಜುಬಿಲಿ ಸ್ಟೇಟ್ ಕೋಚ್ನ್ನು ರಾಣಿ ಎಲಿಜಬೆತ್ II ರ ವಜ್ರ ಮಹೋತ್ಸವಕ್ಕಾಗಿ 2012 ರಲ್ಲಿ ರಚಿಸಲಾಯಿತು.
ಪಟ್ಟಾಭಿಷೇಕದ ದಿನದಂದು ಬ್ರಿಟಿಷ್ ರಾಜಧಾನಿಯ ಬೀದಿಗಳಲ್ಲಿ ಎರಡು ಮೆರವಣಿಗೆಗಳು ನಡೆಯುತ್ತವೆ. ಒಂದು ರಾಜನ ಪಟ್ಟಾಭಿಷೇಕದ ಮೆರವಣಿಗೆ. ಇನ್ನೊಂದು ಪಟ್ಟಾಭಿಷೇಕದ ನಂತರ ಬಕ್ಕಿಂಗ್ ಹ್ಯಾಮ್ ಅರಮನೆಗೆ ಮೆರವಣಿಗೆ ಬರಲಿದ್ದು, ಅಲ್ಲಿ ರಾಜ ಮತ್ತು ರಾಜಮನೆತದ ಸದಸ್ಯರು ಬಾಲ್ಕನಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಇನ್ನು ರಾಣಿ ಎಲಿಜಬೆತ್ II ಅವರ ಪಟ್ಟಾಭಿಷೇಕವು ಜೂನ್ 2, 1953 ರಂದು ಲಂಡನ್‌ನ ವೆಸ್ಟ್‌ಮಿನ್‌ಸ್ಟರ್ ಅಬ್ಬೆಯಲ್ಲಿ ನಡೆದಿತ್ತು. ಸೆಪ್ಟೆಂಬರ್ ನಲ್ಲಿ ನಡೆದಿದ್ದ ರಾಣಿ ಎಲಿಜಬೆತ್ II ರ ರಾಜ್ಯ ಅಂತ್ಯಕ್ರಿಯೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಯುನೈಟೆಡ್ ಕಿಂಗ್ಡಮ್ಗೆ ಭೇಟಿ ನೀಡಿ ಭಾಗವಹಿಸಿದ್ದರು.
ಇದನ್ನು ಓದಿ: ಇಂಗ್ಲೆಂಡ್: ಬಕ್ಕಿಂಗ್ಹ್ಯಾಮ್ ಅರಮನೆ ಹೊರಗೆ ಅನುಮಾಸ್ಪದ ವ್ಯಕ್ತಿಯ ಬಂಧನ