ಚಂಡೀಗಢ, ಪಂಜಾಬ್: ತಮಿಳುನಾಡಿನಲ್ಲಿ ‘ಉಪಕುಲಪತಿ ಹುದ್ದೆಯನ್ನು 40-50 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ’ ಎಂದು ಪಂಜಾಬ್ ರಾಜ್ಯಪಾಲ ಬನ್ವಾರಿ ಲಾಲ್ ಪುರೋಹಿತ್ ಅವರು ಶುಕ್ರವಾರ ವಿವಾದಕ್ಕೆ ಎಡೆ ಮಾಡಿಕೊಡುವ ಹೇಳಿಕೆ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಪುರೋಹಿತ್, ಪಂಜಾಬ್‌ನ ವಿಶ್ವವಿದ್ಯಾನಿಲಯಗಳ ಕೆಲಸದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಆರೋಪಗಳನ್ನು ತಳ್ಳಿಹಾಕಿದರು. ಉಪಕುಲಪತಿಗಳ ನೇಮಕಾತಿಯಲ್ಲಿ ಅವರ ಪಾತ್ರವಿದೆ. ಪುರೋಹಿತ್ ಈ ಹಿಂದೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರನ್ನು ಲೂಧಿಯಾನದ ಪಂಜಾಬ್ ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ ಸತ್ಬೀರ್ ಸಿಂಗ್ ಗೋಸಲ್ ತೆಗೆದುಹಾಕಿ ಎಂದು ಹೇಳಿದ್ದರು. ಏಕಂದ್ರೆ ಡಾ ಸತ್ಬೀರ್ ಸಿಂಗ್ರನ್ನು ಕಾನೂನು ಬಾಹಿರವಾಗಿ ನೇಮಿಸಲಾಗಿದೆ ಎಂದು ಹೇಳಿದರು.
ಅಲ್ಲಿ ತುಂಬಾ ಕೆಟ್ಟ ಪರಿಸ್ಥಿತಿ ಇತ್ತು: ನಾನು ನಾಲ್ಕು ವರ್ಷಗಳ ಕಾಲ ತಮಿಳುನಾಡು ರಾಜ್ಯಪಾಲನಾಗಿದ್ದೆ. ಅಲ್ಲಿ ತುಂಬಾ ಕೆಟ್ಟ ಪರಿಸ್ಥಿತಿಯಿತ್ತು. ತಮಿಳುನಾಡಿನಲ್ಲಿ ಉಪಕುಲಪತಿ ಹುದ್ದೆಯನ್ನು 40-50 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ ಎಂದು ಪುರೋಹಿತ್ ಆರೋಪಿಸಿದ್ದಾರೆ. ನಾನು ತಮಿಳುನಾಡಿನಲ್ಲಿ ರಾಜ್ಯಪಾಲರಾಗಿದ್ದಾಗ ಕಾನೂನಿನ ಪ್ರಕಾರ 27 ವಿಶ್ವವಿದ್ಯಾಲಯಗಳ ವಿಸಿಗಳನ್ನು ನೇಮಿಸಿದೆ. ಕೆಲಸ ಹೇಗೆ ನಡೆಯುತ್ತದೆ ಎಂಬುದನ್ನು ಪಂಜಾಬ್ ಸರ್ಕಾರ ನನ್ನಿಂದ ಕಲಿಯಬೇಕು. ಪಂಜಾಬ್‌ನಲ್ಲಿ ಯಾರು ಸಮರ್ಥರು ಮತ್ತು ಅಸಮರ್ಥರು ಎಂದು ನನಗೆ ತಿಳಿದಿದೆ. ಶಿಕ್ಷಣ ಸುಧಾರಣೆಯಾಗುವಂತೆ ನೋಡಿಕೊಳ್ಳುತ್ತೇನೆ ಎಂದು ಅವರು ಹೇಳಿದರು.
ರಾಜ್ಯ ಸರ್ಕಾರ ಹಸ್ತಕ್ಷೇಪ ಮಾಡುವಂತಿಲ್ಲ: ವಿಶ್ವವಿದ್ಯಾಲಯಗಳ ಕೆಲಸದಲ್ಲಿ ರಾಜ್ಯಪಾಲರು ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಪಂಜಾಬ್ ಸರ್ಕಾರ ಹೇಳುತ್ತಿದೆ. ವಿಶ್ವವಿದ್ಯಾನಿಲಯಗಳ ವಿಚಾರದಲ್ಲಿ ರಾಜ್ಯ ಸರ್ಕಾರ ಹಸ್ತಕ್ಷೇಪ ಮಾಡುವಂತಿಲ್ಲ. ಸರ್ಕಾರ ಮೂರು ಬಾರಿ ವಿಸಿ ವಿಸ್ತರಣೆಗೆ ಪತ್ರ ಕಳುಹಿಸಿದೆ ಎಂದು ಹೇಳಿದರು.
ರಾಜ್ಯಪಾಲರ ನೇಮಕದಲ್ಲಿ ಯಾವುದೇ ಪಾತ್ರವಿಲ್ಲದಿದ್ದರೆ ವಿಸ್ತರಣೆ ನೀಡುವಲ್ಲಿ ಅವರು ಹೇಗೆ ಪಾತ್ರ ವಹಿಸುತ್ತಾರೆ? ಎಂದು ಪುರೋಹಿತ್ ಪ್ರಶ್ನಿಸಿದ್ದಾರೆ. ಪಂಜಾಬ್ ಗವರ್ನರ್ ಅಕ್ಟೋಬರ್ 18 ರಂದು ಮಾನ್ ಅವರಿಗೆ ಪತ್ರ ಬರೆದು, ಡಾ ಸತ್ಬೀರ್ ಸಿಂಗ್ ಅವರನ್ನು ಪಿಎಯು ಉಪಕುಲಪತಿಯಾಗಿ ನೇಮಕ ಮಾಡಿರುವುದು ಕಾನೂನುಬಾಹಿರವಾಗಿದೆ.
ರಾಜ್ಯಪಾಲರ ಹಸ್ತಕ್ಷೇಪದ ಬಗ್ಗೆ ಮಾನ್ ಪತ್ರ: ಏಕೆಂದರೆ ಯುಜಿಸಿ ನಿಗದಿಪಡಿಸಿದ ಮಾನದಂಡಗಳಿಗೆ ಅನುಗುಣವಾಗಿ ನೇಮಕ ಮಾಡಲಾಗಿಲ್ಲ. ಪುರೋಹಿತ್ ಅವರು ಪಂಜಾಬ್‌ನ ಸರ್ಕಾರಿ ವಿಶ್ವವಿದ್ಯಾಲಯಗಳ ಕುಲಪತಿಯಾಗಿದ್ದಾರೆ. ಸರ್ಕಾರದ ಕಾರ್ಯವೈಖರಿಯಲ್ಲಿ ರಾಜ್ಯಪಾಲರು ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮಾನ್ ಪತ್ರ ಬರೆದಿದ್ದರು.
ಪಿಎಯು ಉಪಕುಲಪತಿಯನ್ನು ನೇಮಿಸುವ ಸರ್ಕಾರದ ನಿರ್ಧಾರವನ್ನು ವಿವರಿಸಿ ಪಂಜಾಬ್ ಸಿಎಂ ರಾಜ್ಯಪಾಲರಿಗೆ ಪತ್ರ ಬರೆದಿದ್ದರು. ಇಂದು ಮುಂಜಾನೆ ಪಂಜಾಬ್ ಹಣಕಾಸು ಸಚಿವ ಹರ್ಪಾಲ್ ಸಿಂಗ್ ಚೀಮಾ ಅವರು ಪಂಜಾಬ್ ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿಗಳನ್ನು ಭೇಟಿ ಮಾಡಿದರು.
ಪಂಜಾಬ್‌ನ ಜನರು ಆಮ್ ಆದ್ಮಿ ಪಕ್ಷವನ್ನು ಅಧಿಕಾರಕ್ಕೆ ಆಯ್ಕೆ ಮಾಡಿದ್ದಾರೆ ಮತ್ತು ರಾಜ್ಯಪಾಲರು ನಮ್ಮ ಕೆಲಸಕ್ಕೆ ಅಡ್ಡಿಪಡಿಸಬಾರದು. ಬಿಜೆಪಿಗಾಗಿ ಕೆಲಸ ಮಾಡಬೇಡಿ ಆದರೆ ಸಂವಿಧಾನದ ಜವಾಬ್ದಾರಿಗಳನ್ನು ಪೂರೈಸುವಂತೆ ನಾನು ರಾಜ್ಯಪಾಲರಿಗೆ ಮನವಿ ಮಾಡುತ್ತೇನೆ ಎಂದು ಚೀಮಾ ಮಾಧ್ಯಮಕ್ಕೆ ತಿಳಿಸಿದರು.
ಓದಿ: ವಿಟಿಯು ಉಪಕುಲಪತಿ ಸ್ಥಾನಕ್ಕೆ ಸೂಚಿಸಿರುವ ಮೂವರೂ ಕಳಂಕಿತರು : ಆರೋಪ