ಕೊರೊನಾ ಸೋಂಕಿನ ವಿವಿಧ ರೂಪಾಂತರಗಳು ಕಾಣಿಸಿಕೊಳ್ಳುತ್ತಿವೆ. ಕೋವಿಡ್ ಸೋಂಕಿತರನ್ನು ಕಡಿಮೆ ಮಾಡುವ ಮತ್ತು ಕೋವಿಡ್ ಪರಿಣಾಮ ಕಡಿಮೆ ಮಾಡುವ ಸಲುವಾಗಿ ಕೋವಿಡ್ ಲಸಿಕೆಯನ್ನೂ ಬೃಹತ್ ಪ್ರಮಾಣದಲ್ಲಿ ಹಾಕಲಾಗುತ್ತಿದೆ. ಕೋವಿಡ್ ಲಸಿಕೆ ಎಲ್ಲರಿಗೂ ಕೂಡಾ ಅತ್ಯಂತ ಅನಿವಾರ್ಯ.. ಆದರೆ, ಕೋವಿಡ್ ಸೋಂಕು ಈವರೆಗೆ ತಗುಲದೇ ಇರುವ ಮಂದಿಗೆ ಕೋವಿಡ್ ಲಸಿಕೆ ಹಾಕಲು ಆದ್ಯತೆ ನೀಡಬೇಕೆಂದು ತಜ್ಞರು ಹೇಳುತ್ತಾರೆ.
ಹೌದು, ನವದೆಹಲಿಯ ಏಮ್ಸ್ನ ಕಮ್ಯುನಿಟಿ ಮೆಡಿಸಿನ್ ವಿಭಾಗದ ಪ್ರಾಧ್ಯಾಪಕರಾದ ಡಾ. ಸಂಜಯ್ ಕುಮಾರ್ ರೈ ಈ ರೀತಿಯಾಗಿ ಅಭಿಪ್ರಾಯಪಟ್ಟಿದ್ದಾರೆ. ಈಗಾಗಲೇ ಕೋವಿಡ್ನಿಂದ ಚೇತರಿಕೆ ಕಂಡಿರುವ ವ್ಯಕ್ತಿಗಳ ಬದಲಾಗಿ, ಇನ್ನೂ ಕೋವಿಡ್ ಸೋಂಕಿಗೆ ಒಳಗಾಗದೇ ಇರುವವರಿಗೆ ಕೋವಿಡ್ ಲಸಿಕೆ ನೀಡಬೇಕು. ಇದರಿಂದ ಅವರನ್ನು ಅಪಾಯದಿಂದ ತಪ್ಪಿಸಬಹುದಾಗಿದೆ ಎಂದು ಸಂಜಯ್ ಕುಮಾರ್ ರೈ ನವದೆಹಲಿಯ ಹೀಲ್ ಫೌಂಡೇಷನ್ ನಡೆಸಿದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.
ಇತ್ತೀಚೆಗೆ, ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಷನ್ ಕೂಡಾ ಈ ಕುರಿತು ಸಂಶೋಧನೆ ನಡೆಸಿದ್ದು, ಕೋವಿಡ್ ಸೋಂಕು ತಗುಲಿ ಚೇತರಿಕೆ ಕಂಡಿರುವ ವ್ಯಕ್ತಿಗಳಲ್ಲಿ ರೋಗ ನಿರೋಧಕ ಶಕ್ತಿ ಉತ್ತಮವಾಗಿರುತ್ತದೆ ಎಂದಿದೆ. ಹಲವಾರು ಅಧ್ಯಯನಗಳು ಇದೇ ರೀತಿಯಾಗಿ ಹೇಳಿವೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ವ್ಯಾಕ್ಸಿನೇಷನ್ ಅಭಿಯಾನಗಳು ಹೆಚ್ಚು ಪ್ರಯೋಜನಕಾರಿ ಅಲ್ಲ ಎಂದಿರುವ ಅವರು, ಕೋವಿಡ್ನಿಂದ ಚೇತರಿಕೆ ಕಂಡವರು ಅತ್ಯಂತ ಹೆಚ್ಚು ಸುರಕ್ಷಿತ ವ್ಯಕ್ತಿಗಳು ಎಂಬುದಕ್ಕೆ ಅನೇಕ ಪುರಾವೆಗಳಿವೆ ಎಂದಿದ್ದಾರೆ. ಪುರಾವೆಗಳಿವೆ" ಎಂದು ರೈ ವ್ಯಾಕ್ಸಿನೇಷನ್‌ನ ವಿವೇಚನಾಶೀಲ ಬಳಕೆಯ ಅಗತ್ಯವನ್ನು ಒತ್ತಿ ಹೇಳುವುದನ್ನು ಗಮನಿಸಲಾಗಿದೆ.
ಇನ್ನು ಕೋವಿಡ್ ವ್ಯಾಕ್ಸಿನ್ಗಳ ವಿಚಾರಕ್ಕೆ ಬರುವುದಾದರೆ, ಒಟ್ಟು 334 ಲಸಿಕೆಗಳನ್ನು ವಿವಿಧ ಹಂತಗಳಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಇದರಲ್ಲಿ ಸುಮಾರು 140 ಕ್ಲಿನಿಕಲ್ ಪ್ರಯೋಗಗಳಲ್ಲಿ ಮತ್ತು 194 ಕ್ಲಿನಿಕಲ್ಗಿಂತ ಮೊದಲಿನ ಹಂತಗಳಲ್ಲಿವೆ. 33 ಲಸಿಕೆಗಳನ್ನು ಪೂರ್ಣ ಬಳಕೆಗಾಗಿ ಅನುಮೋದಿಸಲಾಗಿದೆ ಎಂದು ಸಂಜಯ್ ಕುಮಾರ್ ರೈ ಹೇಳಿದ್ದಾರೆ.
ನಾವು ಇದುವರೆಗೆ ಕೋವಿಡ್ ಸೋಂಕು ತಗುಲದ ವ್ಯಕ್ತಿಗೆ ಕೋವಿಡ್ ಲಸಿಕೆ ಹಾಕಬೇಕು. ಕೋವಿಡ್ ಸೋಂಕಿಗೆ ಒಳಗಾಗುವ ಒಟ್ಟು ಜನಸಂಖ್ಯೆಯಲ್ಲಿ ಸುಮಾರು ಶೇಕಡಾ 80ರಿಂದ ಶೇಕಡಾ 90ರಷ್ಟು ಮಂದಿಯನ್ನು ಸಾವಿನಿಂದ ಈ ಕೋವಿಡ್ ಲಸಿಕೆಗಳು ಕಾಪಾಡುತ್ತವೆ. ಪ್ರಪಂಚದಾದ್ಯಂತ ಶೇಕಡಾ 60ರಷ್ಟು ಮಂದಿ ಕೋವಿಡ್ ವ್ಯಾಕ್ಸಿನ್ನ ಮೊದಲ ಡೋಸ್ ಪಡೆದಿದ್ದಾರೆ ಎಂದು ಸಂಜಯ್ ಕುಮಾರ್ ರೈ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಇಂಜಿನಿಯರಿಂಗ್‌ನ ಗ್ರಾಜ್ಯುಯೇಟ್ ಆಪ್ಟಿಟ್ಯೂಡ್ ಪರೀಕ್ಷೆ ಮುಂದೂಡಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್