ವಾರಣಾಸಿ (ಉತ್ತರಪ್ರದೇಶ) : ಆಂಧ್ರಪ್ರದೇಶ ಮೂಲದ ಒಂದೇ ಕುಟುಂಬದ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಘಟನೆ ಉತ್ತರಪ್ರದೇಶದ ವಾರಣಾಸಿಯಲ್ಲಿ ನಡೆದಿತ್ತು. ಇವರೆಲ್ಲರೂ ಸಾಲಗಾರರ ಕಿರುಕುಳದಿಂದ ಆತ್ಮಹತ್ಯೆ ಶರಣಾಗಿರುವುದಾಗಿ ಸ್ಥಳದಲ್ಲಿ ಪತ್ತೆಯಾದ ಡೆತ್ ನೋಟ್ನಿಂದ ತಿಳಿದುಬಂದಿದೆ. ಈ ಸಂಬಂಧ ವಾರಣಾಸಿ ಪೊಲೀಸರು ಆಂಧ್ರದ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತರನ್ನು ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಕೊಂಡಬಾಬು (50), ಪತ್ನಿ ಲಾವಣ್ಯ (45), ಮಕ್ಕಳಾದ ರಾಜೇಶ್(25), ಜಯರಾಜ್( 23) ಎಂದು ಗುರುತಿಸಲಾಗಿತ್ತು. ಮೃತರು ಡಿಸೆಂಬರ್ 3ರಂದು ಕಾಶಿಗೆ ಬಂದಿದ್ದು, ಇಲ್ಲಿನ ಧರ್ಮಶಾಲಾ ಕೊಠಡಿಯಲ್ಲಿ ಉಳಿದುಕೊಂಡಿದ್ದರು. ಬಳಿಕ ಮರುದಿನ 5 ಗಂಟೆಯಾದರೂ ಕೊಠಡಿಯಿಂದ ಯಾರೂ ಹೊರಗೆ ಬಂದಿಲ್ಲ. ಇದರಿಂದ ಅನುಮಾನಗೊಂಡ ಸಿಬ್ಬಂದಿ ಬಾಗಿಲು ತಟ್ಟಿದ್ದಾರೆ. ಈ ವೇಳೆ ಕೊಠಡಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಬಳಿಕ ಕಿಟಕಿಯಿಂದ ಇಣುಕಿ ನೋಡಿದಾಗ ನಾಲ್ವರು ಶವವಾಗಿ ಪತ್ತೆಯಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದರು. ಬಳಿಕ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದರು. ಈ ವೇಳೆ ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿತ್ತು. ಈ ಡೆತ್ ನೋಟ್ನಿಂದ ಸಾಲಗಾರರ ಕಿರುಕುಳದಿಂದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಡೆತ್ ನೋಟ್ನಿಂದ ಮಾಹಿತಿ ಬಹಿರಂಗ : ಪೊಲೀಸರು ನೀಡಿದ ಮಾಹಿತಿ ಪ್ರಕಾರ, ''ಡೆತ್ ನೋಟ್ನಲ್ಲಿ ಮೃತ ರಾಜೇಶ್ ಪಂಟ್ಗಲ್ ಪ್ರಸಾದ್ ಎಂಬಾತನಿಂದ 6 ಲಕ್ಷ ರೂಪಾಯಿ ಸಾಲ ಪಡೆದುಕೊಂಡಿದ್ದ. ಈ ಸಾಲ ಪಡೆಯಲು ಮಲ್ಲಿಬಾಬು ಎಂಬಾತ ರಾಜೇಶ್ಗೆ ಸಹಾಯ ಮಾಡಿದ್ದನು. ಬಳಿಕ ಪಂಟ್ಗಲ್ ರಾಜೇಶ್ 6 ಲಕ್ಷ ಸಾಲಕ್ಕೆ 20 ಲಕ್ಷ ಪಾವತಿ ಮಾಡುವಂತೆ ಒತ್ತಾಯಿಸಿದ್ದಾನೆ. ಅಲ್ಲದೆ ಸಾಲವನ್ನು ಮರುಪಾವತಿ ಮಾಡದಿದ್ದರೆ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳುವುದಾಗಿ ಮಲ್ಲಿಬಾಬು ಬೆದರಿಕೆ ಹಾಕಿದ್ದ. ಅಷ್ಟೇ ಅಲ್ಲದೆ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೆ ಕುಟುಂಬವನ್ನು ಜೈಲಿಗೆ ಕಳುಹಿಸುತ್ತೇನೆ. ನನಗೆ ಸಿಎಂ ಅವರು ತುಂಬಾ ಪರಿಚಯ. ಈ ಸಂಬಂಧ ಮಲ್ಲಿಬಾಬು ನಮ್ಮ ಕುಟುಂಬಕ್ಕೆ ದಿನನಿತ್ಯ ಕಿರುಕುಳ ನೀಡುತ್ತಿದ್ದ ಎಂದು ರಾಜೇಶ್ ಡೆತ್ ನೋಟ್ನಲ್ಲಿ ಬರೆದುಕೊಂಡಿದ್ದಾನೆ'' ಎಂದು ತಿಳಿಸಿದ್ದಾರೆ.
ವಾರಣಾಸಿಯಲ್ಲಿ ಮೃತರ ಅಂತ್ಯಸಂಸ್ಕಾರ ನಡೆಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ವಾರಣಾಸಿ: ಧರ್ಮಶಾಲೆಯಲ್ಲಿ ಒಂದೇ ಕುಟುಂಬದ ನಾಲ್ವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ